ಘಟಪ್ರಭಾ ತೀರದಲ್ಲಿ ಸ್ವಚ್ಛತಾ ಅಭಿಯಾನ
ನದಿ ತೀರದ ಭಾಗದಲ್ಲಿ ತ್ಯಾಜ್ಯ ವಸ್ತುಗಳ ಸಂಗ್ರಹ
Team Udayavani, Mar 23, 2022, 1:37 PM IST
ಮುಧೋಳ: ಘಟಪ್ರಭಾ ನದಿ ತೀರದಲ್ಲಿ ತ್ಯಾಜ್ಯ ವಸ್ತುಗಳನ್ನು ಬಿಸಾಕಿರುವ, ಸ್ನಾನ ಮಾಡಿ ಹಾಗೇ ಉಳಿಸಿ ಹೋಗಿರುವ ಬಟ್ಟೆಗಳು, ಕಸ ಕಡ್ಡಿಗಳು, ಉಳಿದಿರುವ ತ್ಯಾಜ್ಯ ವಸ್ತುಗಳನ್ನು ಬಿಸಾಕಲಾಗಿತ್ತು. ಅದನ್ನು ಗಮನಿಸಿ ಸಂಗ್ರಹಿಸಿ ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ದಾಲ್ಮಿಯಾ ಸಿಮೆಂಟ್ ಭಾರತ್ ಲಿಮಿಟೆಡ್ ಮಾನವ ಸಂಪನ್ಮೂಲ ಹಿರಿಯ ವ್ಯವಸ್ಥಾಪಕ ಉಮೇಶ ದೇಸಾಯಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ನದಿ ತೀರದ ಭಾಗದಲ್ಲಿ ತ್ಯಾಜ್ಯ ವಸ್ತುಗಳ ಸಂಗ್ರಹವಾಗಿತ್ತು. ಆ ಸಮಸ್ಯೆಯನ್ನು ಗಮನಿಸಿಯೇ ನದಿ ಯಾವಾಗಲೂ ಸ್ವಚ್ಛತೆಯಿಂದ ಕೂಡಿರಬೇಕು. ತ್ಯಾಜ್ಯ ಮುಕ್ತವಾಗಿರಬೇಕೆಂಬ ಕಳಕಳಿಯಿಂದಲೇ ನಮ್ಮ ಕಂಪನಿಯ ಅಧಿಕಾರಿಗಳು, ಸಿಬ್ಬಂದಿ, ಸ್ನೇಹಿತರ ಸಹಕಾರದಿಂದ ಸ್ವಚ್ಛತೆ ಅಭಿಯಾನ ಆಯೋಜನೆ ಮಾಡಿದ್ದೇವೆ. ಮುಂದೇ ಇದೇ ರೀತಿ ವಿಭಿನ್ನವಾಗಿರುವ ಕಾರ್ಯಗಳನ್ನು ಮಾಡುವ ಆಶಯ ವನ್ನು ದೇಶಾಯಿ ವ್ಯಕ್ತಪಡಿಸಿದರು.
ಬೆಳಗ್ಗೆ 6.30ರಿಂದ 8 ಗಂಟೆವರೆಗೂ ಅಕ್ಕಪಕ್ಕದ ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಿ ನಗರಸಭೆ ವಾಹನಗಳಿಗೆ ತುಂಬಿದರು. ನಗರಸಭೆ ಅಧ್ಯಕ್ಷ ಗುರುಪಾದ ಕುಳಲಿ, ಪೌರಾಯುಕ್ತ ಶಿವಪ್ಪ ಅಂಬಿಗೇರ, ಸಿಮೆಂಟ್ ಕಂಪನಿಯ ಅಧಿಕಾರಿ ಅಜಯಸಿಂಗ್, ಮೋಹನ ಎಂ.ಎನ್.,ಜೈ ಶಂಕರ ತಿವಾರಿ, ಮಾಂಕುಮಾರ ಪಾಠಕ, ಆರೋಗ್ಯ ನಿರೀಕ್ಷಿಕ ಸಂತೋಷ ಬೆಳ್ಳಿಕಟ್ಟಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.