ಅಸಮರ್ಪಕ ಪರಿಹಾರ ಕಿಟ್ ವಿತರಣೆಗೆ ಖಂಡನೆ
Team Udayavani, Aug 28, 2019, 10:36 AM IST
ಅಮೀನಗಡ: ನೆರೆ ಸಂತ್ರಸ್ತರಿಗೆ ಅಸಮರ್ಪಕ ಪರಿಹಾರ್ ಕಿಟ್ ವಿತರಣೆ ಖಂಡಿಸಿ ಐಹೊಳೆ ಗ್ರಾಮದಲ್ಲಿ ಸಂತ್ರಸ್ತರು ಪ್ರತಿಭಟನೆ ನಡೆಸಿದರು.
ಅಮೀನಗಡ: ನೆರೆ ಸಂತ್ರಸ್ತರಿಗೆ ಅಸಮರ್ಪಕವಾಗಿ ಪರಿಹಾರ ಕಿಟ್ ವಿತರಣೆ ಆರೋಪಿಸಿ 30ಕ್ಕೂ ಹೆಚ್ಚು ನೆರೆ ಸಂತ್ರಸ್ತ ಕುಟುಂಬದವರು ಐಹೊಳೆ ಗ್ರಾಪಂ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮಲಪ್ರಭಾ ನದಿಯ ಭೀಕರ ಪ್ರವಾಹದಿಂದ ಐತಿಹಾಸಿಕ ಪ್ರವಾಸಿ ಕೇಂದ್ರ ಐಹೊಳೆ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳು ನೀರಿನಿಂದ ಜಲಾವೃತಗೊಂಡ ಹಿನ್ನೆಯಲ್ಲಿ 200ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರದಿಂದ 160 ಕುಟುಂಬಗಳಿಗೆ ಮಾತ್ರ 10ಸಾವಿರ ರೂ. ಪರಿಹಾರ ಹಣ ಮತ್ತು ಪರಿಹಾರ ಕಿಟ್ ಮಾತ್ರ ಬಂದಿದೆ. 30ಕ್ಕೂ ಹೆಚ್ಚು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಬಂದಿಲ್ಲ ಇದರಿಂದ ಆಕ್ರೋಶಗೊಂಡ ಸಂತ್ರಸ್ತರು ಅಧಿಕಾರಿಗಳು ಸರ್ವೆ ಕಾರ್ಯ ಮಾಡಿಲ್ಲ ಮತ್ತು ಕಿಟ್ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯತನದಿಂದ 30 ಕ್ಕೂ ಹೆಚ್ಚು ಮನೆಗಳಿಗೆ ಪರಿಹಾರ ಧನ ಜಮೆ ಆಗಿಲ್ಲ. ಪರಿಹಾರದ ಕಿಟ್ ಕೂಡಾ ಬಂದಿಲ್ಲ. ಆದ್ದರಿಂದ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡದೆ ಎಲ್ಲ ಸಂತ್ರಸ್ತರಿಗೆ ಪರಿಹಾರ ಕಿಟ್ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ನಿರತ ಸಣ್ಣಹನಮಂತ ಮಡಿಕಾರ ಮಾತನಾಡಿ, ಪರಿಹಾರ ಕೇಂದ್ರದಲ್ಲಿದ್ದ ಕುಟುಂಬಗಳಿಗೆ ಮಾತ್ರ ಪರಿಹಾರ ಹಣ ಮತ್ತು ಕಿಟ್ ಬಂದಿದೆ. ಅಧಿಕಾರಿಗಳು ಗ್ರಾಮದಲ್ಲಿ ಸರಿಯಾಗಿ ಸರ್ವೇ ಮಾಡದೆ ನಿರ್ಲಕ್ಯ ಮಾಡಿದ್ದಾರೆ. ಗ್ರಾಮದಲ್ಲಿ ಪ್ರವಾಹದಿಂದ ಸಂಕಷ್ಟದಲ್ಲಿರುವ ಕುಟುಂಬಗಳ ಸರ್ವೇ ಮಾಡಿ ಎಂದು ಹೇಳಿದರು ಕೂಡಾ ಪರಿಹಾರ ಕೇಂದ್ರದಲ್ಲಿದ್ದವರಿಗೆ ಮಾತ್ರ ಕಿಟ್ ನೀಡುತ್ತೇವೆ ಎಂದು ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದ 30ಕ್ಕೂ ಹೆಚ್ಚು ಕುಟುಂಬಗಳಿಗೆ 10 ಸಾವಿರ ರೂ. ಪರಿಹಾರ ಹಣ ಮತ್ತು ಕಿಟ್ ಬಂದಿಲ್ಲ. ಅಧಿಕಾರಿಗಳು ಕೂಡಲೇ ಸರ್ವೇ ಕಾರ್ಯ ಮಾಡಿ ಅರ್ಹ ಸಂತ್ರಸ್ತರಿಗೆ ಕಿಟ್ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್.ಎಸ್. ಮಡಿಕಾರ, ಶ್ಯಾಮಪ್ಪ ಕೊಂತ, ನಾಗಪ್ಪ ಕುಂಬಾರ, ಬಸವರಾಜ ಮ್ಯಾಗೋಟಿ, ಕಾಳಪ್ಪ ಪತ್ತಾರ, ನರಸಪ್ಪ ಪತ್ತಾರ, ಬಸವರಾಜ ಸಾಲಿಮಠ, ಯಮನಪ್ಪ ಮಡಿಕಾರ, ಸೋಮಯ್ಯ ಶಿವಮೂರ್ತಿ ಮಠ, ನೀಲಪ್ಪ ಹನಮಪ್ಪ ಚಿಮ್ಮಲಗಿ, ಪ್ರಭು ಮಡಿವಾಳರ, ಚೆನ್ನಬಸಪ್ಪ ಹಂಡಿ, ವಿಠuಲ ಕೊಂತ, ಮೌನೇಶ ಬಡಿಗೇರ, ನಿಂಗಪ್ಪ ಜಡಿ, ಗ್ಯಾನಪ್ಪ ಮಡಿಕಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.