ಹುನಗುಂದದಲ್ಲಿ ಕಾಂಗ್ರೆಸ್-ಕಮಲ ಗಲಾಟೆ: ಕಾಶಪ್ಪನವರ ಕಾರು ಜಖಂ
Team Udayavani, Sep 7, 2018, 6:15 AM IST
ಹುನಗುಂದ: ಇಲ್ಲಿನ ಶತಮಾನ ಪೂರೈಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಗುರುವಾರ ಮಧ್ಯಾಹ್ನ ತೀವ್ರ ಗಲಾಟೆಗೂ ಕಾರಣವಾಗಿದೆ.
ಹುನಗುಂದ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಗುರುವಾರ ಚುನಾವಣೆ ನಿಗದಿಯಾಗಿತ್ತು. 12 ಸದಸ್ಯ ಬಲದ ಪಿಕೆಪಿಎಸ್‌ಎನ್‌ನಲ್ಲಿ ಕಾಂಗ್ರೆಸ್ ಬೆಂಬಲಿತ 8 ಮಂದಿ ಹಾಗೂ ಬಿಜೆಪಿ ಬೆಂಬಲಿತ ನಾಲ್ವರು ನಿರ್ದೇಶಕರಿದ್ದಾರೆ. ಅದರಲ್ಲಿ ಬಿಜೆಪಿ ಬೆಂಬಲಿತ ಓರ್ವ ನಿರ್ದೇಶಕ,ಉಪಾಧ್ಯಕ್ಷರಾಗಲು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿಗೆ ಬೆಂಬಲ ನೀಡುವ ಜತೆಗೆ, ಚುನಾವಣೆ ಪ್ರಕ್ರಿಯೆ ವೇಳೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಕಾರಿನಲ್ಲಿ ಆಗಮಿಸಿದ್ದರಿಂದ ಗಲಾಟೆ ತೀವ್ರಗೊಂಡಿತು.
ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು, ಮಾಜಿ ಶಾಸಕರು ಪಿಕೆಪಿಎಸ್ ಕಚೇರಿ ಪ್ರವೇಶಿಸುವ ವೇಳೆ ಬಿಜೆಪಿಯ ಹಲವರು ಕಲ್ಲು ತೂರಿ, ಹಾಕಿ ಸ್ಟಿಕ್ ಮೂಲಕ ದಾಳಿ ಆರಂಭಿಸಿದರು. ಈ ವೇಳೆ, ಮಾಜಿ ಶಾಸಕ ಕಾಶಪ್ಪನವರ ಕೈಗೆ ಗಾಯವಾಗಿದೆ. ನಿರ್ದೇಶಕರಾದ ರವಿ ಹುಚನೂರ, ನೀಲಪ್ಪತಪೇಲಿ, ರಾಮನಗೌಡ ತಲೇಪಿ, ದೀಪಾ ಸುಂಕದ, ಮಹಾಂತೇಶ ಹೊಸೂರ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ರವಿ ಹುಚನೂರ, ಮಹಾತೇಶ ಹೊಸೂರ ತೀವ್ರವಾಗಿ ಗಾಯ ಗೊಂಡಿದ್ದು,ಅವರನ್ನು ಬಾಗಲಕೋಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ವಿಜಯಾನಂದ ಕಾಶಪ್ಪನವರ ಕಾರನ್ನು ಜಖಂಗೊಳಿಸಲಾಗಿದೆ. ಇದೇ ವೇಳೆ, ಪೊಲೀಸ್ ಡಿಎಆರ್‌ನ ಎರಡು ವಾಹನಗಳಿಗೂಕಲ್ಲು ತೂರಾಟ ನಡೆಸಿದ್ದು, ಅವು ಜಖಂಗೊಂಡಿವೆ. ಈ ಘಟನೆ ಪಿಕೆಪಿಎಸ್‌ನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಘಟನೆಯಲ್ಲಿ ಭಾಗಿಯಾದವರನ್ನು ಪರಿಶೀಲಿಸಿ ಬಂಧಿಸಲಾಗುತ್ತಿದೆ.ಗುರುವಾರ ರಾತ್ರಿವರೆಗೂ ಬಂಧನದ ಪ್ರಕ್ರಿಯೆ ನಡೆದಿತ್ತು. ಆದರೆ, ಎಷ್ಟು ಜನರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.