ಅಮೀನಗಡ: ಕಾಂಗ್ರೆಸ್ ಭವನಕ್ಕಾಗಿ ಜೋಳಿಗೆ ಹಿಡಿದ ಜಿಲ್ಲಾಧ್ಯಕ್ಷ !
Team Udayavani, Nov 21, 2020, 8:29 PM IST
ಅಮೀನಗಡ: ಜಿಲ್ಲಾ ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣಕ್ಕೆ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಜೋಳಿಗೆ ಮುಖಾಂತರ ಸ್ವಗ್ರಾಮ ಸೂಳೇಭಾವಿಯಲ್ಲಿ ಶನಿವಾರ ದೇಣಿಗೆ ಸಂಗ್ರಹಣೆ ಕಾರ್ಯಕ್ಕೆ ಚಾಲನೆ ನೀಡಿದರು.
ಗ್ರಾಮದ ವಿವಿಧ ಕಡೆ ಜೋಳಿಗೆ ಹಿಡಿದು ದೇಣಿಗೆ ಸಂಗ್ರಹಣೆ ಮಾಡಲು ಮುಂದಾದ ಕಾಂಗ್ರೆಸ್ ಪಕ್ಷದ ಜಿಲ್ಲಾದ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರಿಗೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು,ಕಾರ್ಯಕರ್ತರು ಸಂತೋಷದಿಂದ ದೇಣಿಗೆ ನೀಡಿದರು. ಮೊದಲ ದಿನ ಸ್ವಗ್ರಾಮದಲ್ಲಿ 58 ಸಾವಿರ ರೂ. ದೇಣಿಗೆ ಸಂಗ್ರಹಣೆ ಮಾಡಲಾಯಿತು.
88 ಸಾವಿರ ರೂ,ದೇಣಿಗೆ:
ಮೊದಲ ದಿನ ಸ್ವಗ್ರಾಮ ಸೂಳೇಭಾವಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಡ ಪೂರ್ಣಕ್ಕಾಗಿ ಜೋಳಿಗೆ ಮುಖಾಂತರ ದೇಣಿಗೆ ಸಂಗ್ರಹಣೆ ಮುಂದಾದ ಮಾಜಿ ಎಸ್.ಜಿ.ನಂಜಯ್ಯನಮಠ ಅವರಿಗೆ ಗ್ರಾಮದ ರಾಜರಾಜೇಶ್ವರಿ ಪತ್ತಿನ ಸಹಕಾರಿ ಸಂಘದ ನಿರ್ದೆಶಕರಿಂದ 45 ಸಾವಿರ ರೂ. ಮಹಾಲಕ್ಷ್ಮಿ ನೇಕಾರರ ಸಹಕಾರ ಸಂಘದ ನಿರ್ದೆಶಕರಿಂದ 5ಸಾವಿರ ರೂ. ಶಾಖಾಂಬರಿ ನೇಕಾರರ ಸಹಕಾರ ಸಂಘದ ನಿರ್ದೆಶಕರಿಂದ 5 ಸಾವಿರ ರೂ. ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರಸಾ ನಿರಂಜನ 2500 ರೂ. ಈರಪ್ಪ ಮಿಣಜಗಿ 500ರೂ ಸೇರಿ ಒಟ್ಟು 58 ಸಾವಿರ ರೂ. ದೇಣಿಗೆ ಸಂಗ್ರಹಣೆ ಮಾಡಲಾಯಿತು ಮತ್ತು ಇಲಕಲ್ಲ ಪಟ್ಟಣದ ಉದ್ಯಮಿ ರಾಜು ಬೋರಾ ಅವರು 30 ಸಾವಿರ ರೂ, ನೀಡಿದರು ಒಟ್ಟಾರೆ ಮೊದಲ ದಿನ ಜೊಳಿಗೆ ಮುಖಾಂತರ ದೇಣಿಗೆ ಸಂಗ್ರಹಿಸಿದ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಅವರು 88 ಸಾವಿರ ರೂ. ದೇಣಿಗೆ ಸಂಗ್ರಹಣೆ ಮಾಡಿದರು.
ಈ ವೇಳೆ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಮೊದಲ ಬಾರಿಗೆ ಜೋಳಿಗೆ ಹಿಡಿದು ದೇಣಿಗೆ ಸಂಗ್ರಹಣೆ ಮಾಡಲು ಹೋದಾಗ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು 88 ಸಾವಿರ ರೂ. ದೇಣಿಗೆ ನೀಡಿದ್ದು ಸಂತೋಷವಾಗಿದೆ. ದೇಣಿಗೆ ನೀಡಿದವರು ಕಾಂಗ್ರೆಸ್ ಪಕ್ಷದ ಸಾಮಾನ್ಯ ಪರಿಸ್ಥಿತಿಯ ಅಭಿಮಾನಿಗಳು. ಇವರ ಶ್ರೀರಕ್ಷೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುತ್ತದೆ. ಇದೆ ರೀತಿ ಜಿಲ್ಲೆಯ ಏಳು ಮತಕ್ಷೇತ್ರದಲ್ಲಿ ಸಂಚಾರ ಮಾಡಿ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಮತ್ತು ಕಾರ್ಯಕರ್ತರ ಹತ್ತಿರ ಹೋಗಿ ಕಾಂಗ್ರೆಸ್ ಕಚೇರಿ ಕಟ್ಟಡಕ್ಕೆ ಜೋಳಿಗೆ ಮುಖಾಂತರ ದೇಣಿಗೆ ಸಂಗ್ರಹಣೆ ಮಾಡುತ್ತೇನೆ ಎಂದರು.
ಸ್ಥಳದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರಸಾ ನಿರಂಜನ, ಸೂಳೇಭಾವಿ ಪಿಕೆಪಿಎಸ್ ಅಧ್ಯಕ್ಷ ಗದಗಯ್ಯ ನಂಜಯ್ಯನಮಠ ಸೇರಿದಂತೆ ಇನ್ನಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.