![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
Team Udayavani, Aug 9, 2019, 12:04 PM IST
ಬಾಗಲಕೋಟೆ: ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಅವಲೋಕನಕ್ಕೆ ಆಗಮಿಸಿದ್ದ ಕೆಪಿಸಿಸಿ ನೇಮಿಸಿದ್ದ ಸಮಿತಿ ಸದಸ್ಯರಿಗೆ ಪ್ರವಾಹದ ಬಿಸಿ ತಟ್ಟಿದೆ. ಶಾಸಕ, ಮಾಜಿ ಸಚಿವ ಎಚ್.ಕೆ.ಪಾಟೀಲ ನೇತೃತ್ವದದಲ್ಲಿ ಕೆಪಿಸಿಸಿ ತಂಡ ಜಿಲ್ಲೆಯ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಲು ಆಗಮಿಸಬೇಕಿತ್ತು.ಆದರೆ ಹುಬ್ಬಳ್ಳಿಯಿಂದ ಆಗಮಿಸುತ್ತಿದ್ದ ಎಚ್.ಕೆ.ಪಾಟೀಲ್ ಕೊಣ್ಣೂರ ಸೇತುವೆ ಬಂದ್ ಆಗಿದ್ದರಿಂದ ಮುಂದೆ ಸಾಗಲಾರದೆ ಅಲ್ಲಿಯೆ ಉಳಿದಿದ್ದಾರೆ.
ಕೆಪಿಸಿಸಿ ತಂಡ ಬಾದಾಮಿ ಮೂಲಕ ಆಗಮಿಸಲು ಪ್ರಯತ್ನ ಮಾಡಿದರೂ ಸಹ ಬಾದಾಮಿ ಬಳಿ ಮಲಪ್ರಭಾ ನದಿಯ ಚೂಳಚಗುಡ್ಡ ಸೇತುವೆ ಕೂಡಾ ಜಲಾವೃತವಾದ ಕಾರಣ ಸಾಧ್ಯವಾಗಲಿಲ್ಲ.
ಪ್ರವಾಹ ಪರಿಸ್ಥಿತಿ ಅವಲೋಕನಕ್ಕೆ ಕೆಪಿಸಿಸಿ ತಂಡ ಬರುತ್ತದೆ ಎಂದು ಬಾಗಲಕೋಟೆ ನಗರ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲೆಯ ನಾಯಕರು ಕಾದು ಕುಳಿತಿದ್ದಾರೆ. ವಿ.ಪ.ಸದಸ್ಯ ಎಸ್.ಆರ್.ಪಾಟೀಲ, ಮಾಜಿ ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ಎಸ್.ಜಿ.ನಂಜಯ್ಯನಮಠ ಮತ್ತು ಇತರೆ ಮುಖಂಡರು ಕಾಂಗ್ರೆಸ್ ಕಚೇರಿಯಲ್ಲಿ ಕಾದು ಕುಳಿತಿದ್ದಾರೆ.
ಕೆಪಿಸಿಸಿ ತಂಡ ಇಂದು ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಾದ ಮುಧೋಳ, ಜಮಖಂಡಿ ತಾಲೂಕಿಗೆ ಭೇಟಿ ನೀಡಬೇಕಿತ್ತು. ಆದರೆ ರಸ್ತೆ ಸಂಚಾರ ಅಸ್ತವ್ಯಸ್ತವಾದ ಕಾರಣ ಇದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ.
You seem to have an Ad Blocker on.
To continue reading, please turn it off or whitelist Udayavani.