ಸುಳ್ಳು ಕತೆ ಕಟ್ಟುವುದೇ ಕಾಂಗ್ರೆಸ್ ಕೆಲಸ
ಬೀಳಗಿಯಲ್ಲಿ ಪಿ.ಸಿ ಗದ್ದಿಗೌಡರ ಪಾದಯಾತ್ರೆ-ಪ್ರಚಾರ•ಸದೃಢ ಭಾರತಕ್ಕಾಗಿ ಬಿಜೆಪಿಗೆ ಮತ ನೀಡಲು ಮನವಿ
Team Udayavani, Apr 20, 2019, 12:13 PM IST
ಬೀಳಗಿ: ಕೇಂದ್ರ ಸರಕಾರದಿಂದ ಯಾವೆಲ್ಲ ಯೋಜನೆಗಳನ್ನು ಅನುಷ್ಠಾನ ಮಾಡಬಹುದೆನ್ನುವ ಕನಿಷ್ಠ ಜ್ಞಾನವಿಲ್ಲದ ಕಾಂಗ್ರೆಸ್‌ನವರಿಗೆ ಸುಳ್ಳುಗಳ ಕತೆ ಕಟ್ಟುವುದೇ ಒಂದು ಹವ್ಯಾಸವಾಗಿ ಬಿಟ್ಟಿದೆ ಎಂದು ಬಾಗಲಕೋಟೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಹೇಳಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶುಕ್ರವಾರ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿ ಅವರು ಮಾತನಾಡಿದರು. ಜಿಲ್ಲೆಯ ಬಾದಾಮಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೃದಯಾ ಯೋಜನೆಯಡಿ 50 ಕೋಟಿ, ಬಾಗಲಕೋಟೆ ಕುಡಿವ ನೀರಿಗಾಗಿ 134 ಕೋಟಿ ಅನುದಾನ ತರಲಾಗಿದೆ. ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯೋಜನೆ ವಿಳಂಬದ ಪಾಪ ಕಾಂಗ್ರೆಸ್ ತಲೆಯ ಮೇಲಿದೆ. ರೈಲು ಮಾರ್ಗ ಯೋಜನೆಯ ಅನುದಾನ ರೈಲ್ವೆ ಇಲಾಖೆಗೆ ಬಂದಿದೆ. ಆದರೆ, ಯೋಜನೆಗೆ ಬೇಕಾದ ಭೂಮಿಯನ್ನು ನೀಡದ ಕಾಂಗ್ರೆಸ್ ಇದೀಗ ಹಸಿಸುಳ್ಳುಗಳ ಕತೆ ಕಟ್ಟುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಪ್ರಜ್ಞಾವಂತರು ಕಾಂಗ್ರೆಸ್‌ನ ಈ ಕುತಂತ್ರ ರಾಜಕೀಯ ಅರಿತಿದ್ದಾರೆಂದು ಛಾಟಿ ಬೀಸಿದರು.
ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತರುವ ಮೂಲಕ ಜನರ ಕಲ್ಯಾಣಕ್ಕೆ ಬಳಸಿರುವ ತೃಪ್ತಿ ನನಗಿದೆ. ನನ್ನ ಸ್ವಂತಕ್ಕಾಗಿ ಯಾವುದನ್ನೂ ಮಾಡಿಕೊಂಡಿಲ್ಲ. ಈಗಲೂ ಅಷ್ಟೇ ಸಂಸದನಾಗಿ ಆಯ್ಕೆಯಾದರೆ ಪ್ರಾಮಾಣಿಕತೆಯಿಂದ ಜನಸೇವೆ ಮಾಡುವೆ ಎಂದು ವಾಗ್ಧಾನ ಮಾಡಿದ ಗದ್ದಿಗೌಡರ, ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
ಬೆಂಗಳೂರು ಮಲ್ಲೇಶ್ವರಂ ಶಾಸಕ ಅಶ್ವತ್ಥ ನಾರಾಯಣ ಮಾತನಾಡಿ, ಪ್ರಧಾನಿ ಮೋದಿ ಇಡೀ ದೇಶದ ಜನತೆಯ ಇಚ್ಚೆ ಮತ್ತು ಶಕ್ತಿಯಾಗಿದ್ದಾರೆ. ದೇಶದ ಜನರ ನಂಬಿಕೆಯನ್ನು ಸಂಪಾದಿಸಿರುವ ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತ. ಸೋರಿಕೆಯಾಗದ ರೀತಿಯಲ್ಲಿ ದೇಶದ ಕೊನೆ ವ್ಯಕ್ತಿಯವರೆಗೂ ಯೋಜನೆ ತಲುಪಿಸುವ ಶಕ್ತಿ ಮೋದಿಗೆ ಮಾತ್ರವಿದೆ. ಸದೃಢ ಭಾರತಕ್ಕಾಗಿ ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕ ಪಿ.ಎಚ್. ಪೂಜಾರ, ಭಾಜಪ ತಾಲೂಕು ಅಧ್ಯಕ್ಷ ಸಂಗಪ್ಪ ಕಟಗೇರಿ, ವಿಜಯಲಕ್ಷ್ತ್ರೀ ಪಾಟೀಲ, ವಕೀಲ ಜಗತ್‌ನಾಯಕ ಕಣವಿ, ಪಪಂ ಸದಸ್ಯ ವಿಠuಲ ಬಾಗೇವಾಡಿ, ವಿಠuಲ ಗಡ್ಡದ, ಭೀಮಸಿ ಹಾದಿಮನಿ, ನಿಂಗಪ್ಪ ದಂಧರಗಿ, ರಮೇಶ ಗಾಣಿಗೇರ, ಸಿದ್ದು ಸೊನ್ನದ ಇತರರು ಇದ್ದರು.
ಗದ್ದಿಗೌಡರ ಬಹುಮತದಿಂದ ಆಯ್ಕೆ: ಹನುಮಂತ ನಿರಾಣಿ
ಬೀಳಗಿ: ಸರಳ-ಸಜ್ಜನಿಕೆಯ ವ್ಯಕ್ತಿ. ತಮ್ಮ ಇಡೀ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆಯಿರದ ಪ್ರಾಮಾಣಿಕ ರಾಜಕಾರಣಿ ಪಿ.ಸಿ. ಗದ್ದಿಗೌಡರ ಅವರಿಗೆ ನಾಲ್ಕನೇ ಬಾರಿಗೆ ಮತದಾರರು ಗೆಲುವು ತಂದುಕೊಡಬೇಕೆಂದು ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ವಿನಂತಿಸಿದರು.
ತಾಲೂಕಿನ ಕುಂದರಗಿ ಜಿಪಂ ವ್ಯಾಪ್ತಿಯ ಚಿಕ್ಕಾಲಗುಂಡಿ, ಕೊಪ್ಪ ಎಸ್‌ಕೆ, ಕಾತರಕಿ, ಲಿಂಗಾಪೂರ ಎಸ್‌ಕೆ ಹಾಗೂ ಶಿರಗುಪ್ಪಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಮತಯಾಚಿಸಿ ಅವರು ಮಾತನಾಡಿದರು.
ಸಂಸದರಾಗಿ ಕ್ಷೇತ್ರದ ಅಭಿವೃದ್ಧ್ಧಿಗೆ ಗದ್ದಿಗೌಡರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅವಿಶ್ರಾಂತವಾಗಿ ದೇಶದ ಅಭಿವೃದ್ಧಿಗೆ ದುಡಿಯುವ ದಿಟ್ಟ ನಾಯಕ ಮೋದಿ. ಪ್ರಧಾನಿ ಮೋದಿಯವರ ದಿಟ್ಟತನ ಮತ್ತು ಸಮರ್ಥ ಆಡಳಿತದಿಂದ ಭಾರತವನ್ನು ವಿಶ್ವವೇ ಎದುರು ನೋಡುವಂತಾಗಿದೆ. ಗದ್ದಿಗೌಡರ ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ 22ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ರಾಜ್ಯದ ಜನತೆ ಬಿಜೆಪಿಗೆ ಮಣೆ ಹಾಕುವ ಮೂಲಕ, ಕೆಟ್ಟ ಆಡಳಿತದ ಮೈತ್ರಿ ಸರಕಾರವನ್ನು ಮನೆಗೆ ಕಳುಹಿಸಲಿದ್ದಾರೆ. ದೇಶದ ಚೌಕಿದಾರ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿಸಲು ದೇಶದ ಜನ ತುದಿಗಾಲಲ್ಲಿ ನಿಂತಿದ್ದಾರೆ ಎಂದರು.
ಕೃಷ್ಣಗೌಡ ಪಾಟೀಲ, ದ್ಯಾವನಗೌಡ ಪಾಟೀಲ, ಗಿರಿಯಪ್ಪ ಕಟಗಿ, ನಾರಾಯಣ ಜೋಶಿ, ಚನ್ನಪ್ಪ ಕಾಳಪ್ಪಗೋಳ, ಐ.ಎಂ. ಖೋತ, ಕಾವೇರಿ ರಾಠೊಡ, ಎಲ್.ಕೆ. ಪರಡ್ಡಿ, ಮುನ್ನಾ ಮುಲ್ಲಾ, ಹಂಪಣ್ಣ ಅಂಗಡಿ, ಬಿ.ಟಿ. ಕೆರಕಲಮಟ್ಟಿ, ಪ್ರಕಾಶಗೌಡ ಪಾಟೀಲ, ಮಹಾದೇವಪ್ಪ ಕಮತಗಿ, ಸದಾಶಿವ ವಾಲೀಕಾರ, ರಾಮಣ್ಣ ವಾಲೀಕಾರ, ಹನುಮಂತ ಮರೆಮ್ಮನ್ನವರ, ಬಸನಗೌಡ ಪತ್ತೇನ್ನವರ, ಚನ್ನಯ್ಯ ನಿಂಗೊಳ್ಳಿ, ಎಂ.ಟಿ. ದೇಸಾಯಿ, ಗಿರೀಶ ಗುಜಲಾರ, ಮರುಳಸಿದ್ದಯ್ಯ ಮಠಪತಿ, ಎಫ್.ಆರ್. ಬಿಸನಾಳ, ಪ್ರಕಾಶ ಅಂಟೀನ್, ಗಂಗಾಧರಗೌಡ ಗೌಡರ, ಬಶೆಟ್ಟೆಪ್ಪ ಅಂಗಡಿ ಇದ್ದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೀಮ್ ಮೋದಿ ಬಳಗದಿಂದ ರಾಜ್ಯದಲ್ಲಿ 300ಕ್ಕೂ ಹೆಚ್ಚು ಬೈಕ್ ರ್ಯಾಲಿ, ಎರಡು ಪ್ರತ್ಯೇಕ ಭಾಗದಿಂದ ರಥಯಾತ್ರೆ ಮಾಡಿದ್ದು, 2 ಲಕ್ಷಕ್ಕೂ ಅಧಿಕ ಜನರನ್ನು ನೇರವಾಗಿ ಭೇಟಿ ಮಾಡಲಾಗಿದೆ. ಎರಡು ರಥಯಾತ್ರೆಗಳು ತಲಾ 250 ಕಿ.ಮೀ. ಸಂಚರಿಸಿದ್ದು, ಮೋದಿ ಅಲೆಯನ್ನು ಇನ್ನಷ್ಟು ತಳಮಟ್ಟಗೆ ಮುಟ್ಟಿಸುವ ಕೆಲಸ ಮಾಡಿದೆ ಎಂದರು.
ಹಳ್ಳಿಗೊಬ್ಬ ಮೋದಿಯಂತಹ ನಾಯಕ ತಯಾರಾಗಬೇಕು ಎಂಬುದು ನಮ್ಮ ಗುರಿಯಾಗಿತ್ತು. 4 ತಿಂಗಳಿಂದ ಆ ಕೆಲಸ ಶಿಸ್ತುಬದ್ಧವಾಗಿ ಮಾಡಿದ್ದೇವೆ. ನಾವು ಇಡಿ ರಾಜ್ಯದಲ್ಲಿ ಸಂಚರಿಸಿದ ಬಳಿಕ ಕಂಡ ವಾತಾವರಣದಂತೆ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.
ಮೋದಿ ಮತ್ತೆಮ್ಮೆ ಪ್ರಧಾನಿಯಾಗಲಿ ಎಂಬ ಉದ್ದೇಶಕ್ಕಾಗಿಯೇ ಟೀಮ್ ಮೋದಿ ಕಟ್ಟಲಾಗಿತ್ತು. ಇದು ಏ.23ರಂದು ಸಂಜೆ 6ಕ್ಕೆ ವಿಸರ್ಜನೆಯಾಗಲಿದೆ. ದೇಶದ ರಕ್ಷಣೆಗೆ ಕಟಿಬದ್ಧರಾಗಿರುವವರು ಪಿಎಂ ಆಗಬೇಕೆಂಬ ಕಾರಣಕ್ಕಾಗಿಯೇ ನಾವು ಈ ಕೆಲಸ ಮಾಡಿದ್ದೇವೆ. ರಾಜ್ಯಾದ್ಯಂತ ಬಿಜೆಪಿ ದೊಡ್ಡ ಮಟ್ಟದಲ್ಲಿ ಅಲೆ ಸೃಷ್ಟಿಸಿದೆ ಎಂದರು.
ಸೈನಿಕರನ್ನು ರಾಜಕೀಯಕ್ಕೆ ಬಳಕೆ ತಪ್ಪು: ರಾಜಕೀಯಕ್ಕಾಗಿ ಸೈನಿಕರನ್ನು ಬಳಸಿಕೊಳ್ಳುವುದು ತಪ್ಪು. ಆದರೆ, ಸೈನಿಕರಿಗೆ ಮುಕ್ತ ಅವಕಾಶ ನೀಡಿ, ಬಾಲಾಕೋಟನಂತ ಉಗ್ರರ ನೆಲೆ ಮೇಲೆ ದಾಳಿ ಮಾಡಲು ಮುಕ್ತತೆ ನೀಡಿದ ರಾಜಕೀಯ ಶಕ್ತಿ ಕುರಿತು ರಾಜಕೀಯವಾಗಿ ಬಳಸಿಕೊಳ್ಳುವುದು ತಪ್ಪಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
• ರಾಜ್ಯದಲ್ಲಿ ಬಿಜೆಪಿಗೆ 20ಕ್ಕೂ ಹೆಚ್ಚು ಸ್ಥಾನ
• 23ರಂದು ಸಂಜೆ ಟೀಂ ಮೋದಿ ತಂಡ ವಿಸರ್ಜನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.