ಸೋಂಕಿತ ಪೇದೆಯೊಂದಿಗೆ 25 ಜನರ ಸಂಪರ್ಕ
Team Udayavani, Apr 17, 2020, 3:03 PM IST
ಸಾಂದರ್ಭಿಕ ಚಿತ್ರ
ಜಮಖಂಡಿ: ನಗರದ ಪೊಲೀಸ್ ವಸತಿಗೃಹದಲ್ಲಿ ವಾಸಿಸುತ್ತಿದ್ದ ಪೊಲೀಸ್ ಪೇದೆಗೆ ಕೋವಿಡ್ 19 ಸೋಂಕು ಖಚಿತಗೊಂಡಿರುವ ಹಿನ್ನೆಲೆಯಲ್ಲಿ 5 ಕಿ.ಮೀ. ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ| ಜಿ.ಎಸ್.ಗಲಗಲಿ ಹೇಳಿದರು.
ನಗರದಲ್ಲಿ ಗುರುವಾರ ಮಾತನಾಡಿದ ಅವರು, ಪೊಲೀಸ್ ಪೇದೆಯೊಂದಿಗ ಎರಡನೆಯ ಮತ್ತೂ ಮೂರನೆಯ ವ್ಯಕ್ತಿಗಳ ಸಂಪರ್ಕ ಮಾಹಿತಿ ಕಲೆ ಹಾಕಲಾಗಿದೆ. ಪೊಲೀಸ್ ಪೇದೆ ಪತ್ನಿ,ಇಬ್ಬರು ಮಕ್ಕಳು ಸಹಿತ 25 ಜನರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ಪೇದೆ ಕುಟುಂಬದ ಸದಸ್ಯರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು, ಉಳಿದ 25 ಜನರನ್ನು ನಗರದ ಹೊರವಲಯದಲ್ಲಿರುವ ಬಾಗಲಕೋಟೆ ರೆಸಾರ್ಟ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಏ. 13ರವರೆಗೆ ಜಮಖಂಡಿ-ರಬಕವಿ ತಾಲೂಕಿನಿಂದ ಕಳುಹಿಸಿದ ಸ್ಯಾಂಪಲ್‌ನಲ್ಲಿ ಒಂದು ಪಾಜಿಟೀವ್ ಬಂದಿದ್ದು, ಉಳಿದ ಎಲ್ಲ ಸ್ಯಾಂಪಲ್‌ಗಳು ನೆಗೆಟಿವ್ ಬಂದಿದೆ. ಏ. 14 ಮತ್ತು 15 ರಂದು ಕಳುಹಿಸಿದ 38 ಜನರ ಸ್ಯಾಂಪಲ್‌ಗಳ ವರದಿ ಶುಕ್ರವಾರ ಬರಲಿದೆ ಎಂದರು.
ಸೀಲ್‌ಡೌನ್ ವ್ಯಾಪ್ತಿಯ ಕಚೇರಿಗಳು: ನಗರದ ಪೊಲೀಸ್ ವಸತಿಗೃಹ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಪ್ರದೇಶದಲ್ಲಿ ತಾಲೂಕು ಆಡಳಿತ, ಕೃಷಿ ಇಲಾಖೆ, ಕೃಷಿ, ಉಪನಿರ್ದೇಶಕರ ಕಚೇರಿ, ಮಣ್ಣು ಪರೀಕ್ಷಾ ಕೇಂದ್ರ, ಕೃಷಿ ತಾಂತ್ರಿಕ ವಿದ್ಯಾಲಯ, ಸಹಕಾರಿ ಇಲಾಖೆ, ಕಾಡಾ ಇಲಾಖೆ, ಶಾಸಕರ ಕಾರ್ಯಾಲಯ, ಗ್ರಾಮೀಣ ಪೊಲೀಸ್ ಠಾಣೆ, ಶಹರ ಪೊಲೀಸ್ ಠಾಣೆ, ಸಿಪಿಐ ಕಚೇರಿ, ಡಿವೈಎಸ್‌ಪಿ ಕಚೇರಿ, ಎಪಿಎಂಸಿ, ಟಿಎಪಿಎಂಎಸ್ ಸೊಸೈಟಿ, ತುಂಗಳ ಕಾಲೇಜು, ಬಿಇಒ ಕಾರ್ಯಾಲಯ, ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ಬಿಆರ್‌ಸಿ ಕಚೇರಿಗಳು ಕಾರ್ಯನಿರ್ವಹಿಸುತ್ತವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.