ವಿಶಾಸ ಮೂಡಿಸುವುದೇ ಸಹಕಾರ ಭಾರತಿ ಉದ್ದೇಶ
ದೇಶದ ಆರ್ಥಿಕತೆಯನ್ನು ಐದು ಟ್ರಿಲಿಯನ್‌ಗೆ ತೆಗೆದುಕೊಂಡು ಹೋಗಲು ಶ್ರಮ
Team Udayavani, Dec 6, 2021, 5:40 PM IST
ಗುಳೇದಗುಡ್ಡ: ಸಹಕಾರ ಭಾರತಿ ದೇಶದಲ್ಲಿ ಅತಿದೊಡ್ಡ ಸಹಕಾರಿ ಒಕ್ಕೂಟವಾಗಿದ್ದು, ಸಹಕಾರಿ ಸಂಸ್ಥೆಗಳ ಮೇಲೆ ವಿಶ್ವಾಸ ಮೂಡಿಸುವುದೇ ಸಹಕಾರ ಭಾರತಿಯ ಉದ್ದೇಶವಾಗಿದೆ. ಇದೊಂದು ರಾಜಕೀಯೇತರ ಸಂಸ್ಥೆಯಾಗಿದ್ದು, ಮೀನುಗಾರರ, ರೈತ ಉತ್ಪಾದಕರನ್ನು ಪ್ರೋತ್ಸಾಹಿಸುವುದು ನಮ್ಮ ಧ್ಯೇಯವಾಗಿದೆ ಎಂದು ರಾಜ್ಯ ಸಹಕಾರ ಭಾರತಿ ಪ್ರದೇಶ ಸಂಸ್ಥೆಗೆ ನೂತನವಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.
ಅವರು ಪಟ್ಟಣದ ಲಕ್ಷ್ಮೀ ಸಹಕಾರಿ ಬ್ಯಾಂಕಿನಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರಾಮಾಣಿಕತೆ-ಪಾರದರ್ಶಕತೆಯಿಂದ ಸೇವೆ ಮಾಡುತ್ತೇವೆ. ಸಹಕಾರಿ ಸಂಘಗಳನ್ನು ಇನ್ನಷ್ಟು ಬಲಿಷ್ಟಗೊಳಿಸುವ ಮೂಲಕ ದೇಶದ ಜಿಡಿಪಿ ಬೆಳವಣಿಗೆಗೆ ಸಹಕಾರ ಭಾರತಿ ಶ್ರಮ ವಹಿಸಲಿದ್ದು, ಅಲ್ಲದೇ ಮೋದಿಯವರ ಆಶಯದಂತೆ ದೇಶದ ಆರ್ಥಿಕತೆಯನ್ನು ಐದು ಟ್ರಿಲಿಯನ್‌ಗೆ ತೆಗೆದುಕೊಂಡು ಹೋಗಲು ಶ್ರಮ ವಹಿಸಲಾಗುವುದು ಎಂದರು.
ನಾನು ಜಿಲ್ಲಾಧ್ಯಕ್ಷನಾಗಿ, ವಿಭಾಗಮಟ್ಟದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ರಾಜ್ಯಮಟ್ಟದಲ್ಲಿ ನೀಡುವ ಜವಾಬ್ದಾರಿ ಹೊರಲು ಸ್ವಲ್ಪ ಕಷ್ಟವಾಗಬಹುದು ಎಂದು ಸಹಕಾರಿ ಭಾರತಿಯ ರಾಜ್ಯಾಧ್ಯಕ್ಷ ಸ್ಥಾನ ಬೇಡ ಎಂದಿದ್ದೆ. ಆದರೆ, ಪ್ರಮುಖರು ಸಹಕಾರಿ ಸಂಸ್ಥೆಗಳ ಬಗ್ಗೆ ಜ್ಞಾನವಿದ್ದು, ನೀವು ಅಧ್ಯಕ್ಷರಾಗಿ ಎಂದು ಸೂಚಿಸಿದ್ದರಿಂದ ಈ ಸ್ಥಾನ ವಹಿಸಿಕೊಂಡಿದ್ದೇನೆ ಎಂದರು.
ಘನಶ್ಯಾಮದಾಸ ರಾಠಿ, ರವೀಂದ್ರ ಪಟ್ಟಣಶೆಟ್ಟಿ, ಸಿದ್ದು ಅರಕಾಲಚಿಟ್ಟಿ, ಮಧುಸೂದನ ರಾಂದಡ, ವಸಮತಸಾ ದೊಂಗಡೆ, ಶ್ರೀಕಾಂತ ಭಾವಿ, ದೀಪಕ ನೇಮದಿ, ರಾಜು ಗೌಡರ, ಪ್ರಮೋದ ಕವಡಿಮಟ್ಟಿ, ಮೋಹನ ಮಲಜಿ, ಎಸ್.ಡಿ.ಸಿಂಗನ್ನವರ, ಕಾಶಿನಾಥ ಕಲಾಲ, ಸಿಂಧೂರ ತೊಳಮಟ್ಟಿ, ಮಣಿಕಂಠ ಯಣ್ಣಿ, ಮುತ್ತು ಚಿಕ್ಕನರಗುಂದ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.