ಗರ್ಭಿಣಿ ಮಹಿಳೆಯಿಂದ ಹರಡಿದ ಸೋಂಕು: ಚಾಲುಕ್ಯರ ನಾಡಲ್ಲಿ ಕೋವಿಡ್ ರಣಕೇಕೆ
Team Udayavani, May 6, 2020, 1:32 PM IST
ಬಾಗಲಕೋಟೆ: ಚಾಲುಕ್ಯರ ನಾಡು ಬಾದಾಮಿ ತಾಲೂಕಿನಲ್ಲಿ ಮಹಾಮಹಾರಿ ಕೋವಿಡ್-19 ರಣಕೇಕೆ ಹಾಕಿದ್ದು, ಒಂದೇ ದಿನ 13 ಜನರಿಗೆ ಕೋವಿಡ್-19 ದೃಢಪಡುವ ಮೂಲಕ ಜನರಲ್ಲಿ ಆತಂಕದ ಛಾಯೆ ಮೂಡಿದೆ.
ಕಳೆದ ಮೇ. 3 ರಂದು ಗರ್ಭಿಣಿ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆ ಮೂಲಕ ಬಾದಾಮಿ ತಾಲೂಕಿಗೂ ಮೊದಲ ಬಾರಿಗೆ ಕೋವಿಡ್-19 ತನ್ನ ಜಾಲ ವಿಸ್ತರಿಸಿಕೊಂಡಿತ್ತು. ಇದೀಗ ಈ ಮಹಿಳೆಯ ಪ್ರಾಥಮಿಕ ಸಂಪರ್ಕದಿಂದ ಇಬ್ಬರು ಬಾಲಕರು ಸೇರಿದಂತೆ 13 ಜನರಿಗೆ ಸೋಂಕು ಅಂಟಿಕೊಂಡಿರುವ ಬಗ್ಗೆ ಬುಧವಾರ ಬುಲೆಟಿನ್ ನಲ್ಲಿ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಬುಧವಾರ ಖಚಿತಪಟ್ಟ13 ಹೊಸ ಪ್ರಕರಣಗಳು ಸೇರಿ ಬಾಗಲಕೋಟೆ ಜಿಲ್ಲೆಯ ಸೋಂಕಿತರ ಸಂಖ್ಯೆ 48 ಕ್ಕೆ ಏರಿಕೆಯಾಗಿದೆ.
ಪಿ-607 ಮಹಿಳೆಯಿಂದ ಪಿ.680 ಮಹಿಳೆ (18), ಪಿ.681 ಪುರುಷ (45), ಪಿ.682 ಮಹಿಳೆ(55) , ಪಿ.683 ಪುರುಷ(26), ಪಿ.684 ಪುರುಷ (47), ಪಿ.685 ಮಹಿಳೆ (30), ಪಿ.686 ಬಾಲಕ (15), ಪಿ.687 ಮಹಿಳೆ(40), ಪಿ.688 ಪುರುಷ (23), ಪಿ.689 ಬಾಲಕ(10), ಪಿ.690 ಪುರುಷ (32), ಪಿ. 691 ಪುರುಷ (30), ಪಿ.692 ಮಹಿಳೆ (16) ಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇದುವರೆಗೆ ಓರ್ವ ವೃದ್ಧ ಸೋಂಕಿತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇಬ್ಬರು ಪೊಲೀಸ್ ಪೇದೆಗಳು ಸಹಿತ 17 ಸೋಂಕಿನಿಂದ ಗುಣಮುಖರಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೊಸ ಪ್ರಕರಣ ಸೇರಿದಂತೆ ಒಟ್ಟು 30 ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.