ಆಯುರ್ವೇದದಿಂದ ಕೋವಿಡ್ ತಡೆ ಸಾಧ್ಯ
Team Udayavani, May 25, 2020, 7:20 AM IST
ಮುಧೋಳ: ಕಣ್ಣಿಗೆ ಕಾಣದ ಕೋವಿಡ್ ವೈರಸ್ ಇಡಿ ಜಗತ್ತನ್ನೆ ತಲ್ಲಣಗೊಳಿಸಿದೆ. ಇದಕ್ಕಾಗಿ ಭಯ ಪಡದೆ ಎಚ್ಚರದಿಂದ ಇರಬೇಕು, ಆಯುಷ್ ಆಯುರ್ವೇದ ಪದ್ದತಿ, ಹಿತಮಿತ ಆಹಾರ, ನಿತ್ಯ ವಾಕಿಂಗ್ ವ್ಯಾಯಾಮ, ಯೋಗ, ಧ್ಯಾನ, ಪ್ರಾಣಾಯಾಮದಿಂದ ಮನುಷ್ಯ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಸದೃಢನಾಗಿ ರೋಗನಿರೋಧಕ ಶಕ್ತಿಯ ವೃದ್ಧಿಯಿಂದ ಕೊರೊನಾ ಸೇರಿದಂತೆ ಯಾವುದೆ ರೋಗ ತಡೆಗಟ್ಟಬಹುದು ಎಂದು ಆಯುಷ್ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ| ಭೂಷಣ ಉಪಾದ್ಯೆ ಹೇಳಿದರು.
ನಗರದ ಸರಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಆರೋಗ್ಯ ಜಾಗೃತಿ, ಆರೋಗ್ಯ ಕಿಟ್ ವಿತರಣಾ ಸಭೆಯಲ್ಲಿ ಮಾತನಾಡಿದ ಅವರು, ಆರೋಗ್ಯವೇ ನಿಜವಾದ ಸಂಪತ್ತು. ಅದನ್ನು ಕಾಪಾಡಿಕೊಂಡು ಹೋಗಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ| ವೆಂಕಟೇಶ ಮಲಘಾಣ ಮಾತನಾಡಿ, ತಾಲೂಕಿನ ವೈದ್ಯರು, ಆಶಾ ಕಾರ್ಯಕರ್ತರು, ನರ್ಸ್ ಹಾಗೂ ಆಯುಷ್ ಇಲಾಖೆಯ ಡಾ|ಭೂಷಣ ಉಪಾಧ್ಯೆ ನೇತೃತ್ವದ ತಂಡ ಹಗಲಿರುಳು ಸೇವೆ ಮಾಡಿ ಕೋವಿಡ್ ಸೋಂಕು ತಡೆಗಟ್ಟುವಲ್ಲಿ ವಾರಿಯರ್ನಂತೆ ಕೆಲಸ ಮಾಡಿದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಮುಖ್ಯ ವೈದ್ಯಾಧಿಕಾರಿ ಡಾ| ಬಸವರಾಜ ಪಾಟೀಲ ಆಯುರ್ವೇದ ಕಿಟ್ ವಿತರಿಸಿದರು. ಡಾ| ರಾಘವೇಂದ್ರ ನಾಲತವಾಡ, ಉಪನೋಂದಣಿ ಅಧಿಕಾರಿ ಎಸ್.ಆರ್. ಕಟ್ಟಿಮನಿ, ನೌಕರರ ಸಂಘದ ಅಧ್ಯಕ್ಷ ರಮೇಶ ನಿಡೋಣಿ, ಡಾ|ಪ್ರವೀಣ ಜಹಾಗಿರದಾರ ಉಪಸ್ಥಿತರಿದ್ದರು.
ಡಾ| ಶ್ರೇಣಿ ನಾವಲಗಿ, ಡಾ| ಗೀತಾ ಮದಭಾವಿ ಆರೋಗ್ಯ ತಿಳಿವಳಿಕೆ ನೀಡಿದರು. ಡಾ| ಉಪಾಧ್ಯೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಕುಮಾರ ಬೊನಗೇರಿ ನಿರೂಪಿಸಿದರು. ವೈದ್ಯಾಧಿಕಾರಿ ಡಾ| ಸುನೀಲ ಪೂಜಾರಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.