ವಲಸಿಗರ ಮೇಲೆ ಆಡಳಿತದ ಕಣ್ಣು
ಜಿಲ್ಲೆಗೆ ಮರಳಿದ 5249 ವಲಸಿಗರು! 431 ಜನರಿಗೆ ಕೊರೊನಾ ಪಾಸಿಟಿವ್ !ಹಳ್ಳಿಗೆ ಕಾಲಿಟ್ಟ ಕೊರೊನಾ
Team Udayavani, May 15, 2021, 3:14 PM IST
ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಕೊರೊನಾ 2ನೇ ಅಲೆ ಹಳ್ಳಿ ಹಳ್ಳಿಗೂ ವಿಸ್ತರಿಸುತ್ತಿದೆ. ಹೀಗಾಗಿ ವಲಸೆ ಹೋದವರು ಹಾಗೂ ಬೇರೆ ಬೇರೆ ನಗರ-ಪಟ್ಟಣಗಳಿಂದ ಹಳ್ಳಿಗೆ ಮರಳಿ ಬಂದವರ ಮೇಲೆ ಆಡಳಿತದ ಕಣ್ಣಿದ್ದು, ಅವರ ಮೇಲೆ ಹೆಚ್ಚು ನಿಗಾ ಇಡುವ ಜತೆಗೆ ಕೊರೊನಾ ತಪಾಸಣೆಗೆ ಸೂಚನೆ ನೀಡಲಾಗಿದೆ.
ಹೌದು, ಬಾಗಲಕೋಟೆ ತಾಲೂಕಿನಲ್ಲಿ 20ದಿನಗಳಿಂದ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲಿ ನವನಗರ, ವಿದ್ಯಾಗಿರಿ ಹಾಗೂ ಹಳೆಯ ನಗರದಲ್ಲಿ ಹೆಚ್ಚು ಕಂಡುಬಂದರೆ, ಗ್ರಾಮೀಣ ಭಾಗದ ಕೆಲ ಗ್ರಾಮಗಳಲ್ಲೂ ಸೋಂಕಿತರು ಹೆಚ್ಚುತ್ತಿದ್ದಾರೆ. ಹೀಗಾಗಿ ತಾಲೂಕು ಆಡಳಿತ, ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುವ ಜತೆಗೆ ವಲಸೆ ಬಂದವರು, ಕಡ್ಡಾಯವಾಗಿ ಕ್ವಾರಂಟೈನ್ ಆಗಿರಲು ಸೂಚನೆ ನೀಡಿದೆ.
ಜಿಲ್ಲೆಗೆ ಮರಳಿದ ವಲಸಿಗರು: ಜಿಲ್ಲೆಯಿಂದ ದೂರದ ಮಂಗಳೂರು, ಬೆಂಗಳೂರು, ಗೋವಾ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ದುಡಿಯಲು ವಲಸೆ ಹೋಗಿದ್ದವರು ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಮರಳಿ ಊರಿಗೆ ಬಂದಿದ್ದಾರೆ. ಸಧ್ಯದ ಲೆಕ್ಕದ ಪ್ರಕಾರ 5488 ಜನ ವಲಸಿಗರು ತಮ್ಮ ತಮ್ಮ ಊರುಗಳಿಗೆ ಬಂದಿದ್ದು, ಅದರಲ್ಲಿ 5249 ಜನರಿಗೆ ಕೊರೊನಾ ತಪಾಸಣೆ ಮಾಡಲಾಗಿದೆ. ಅದರಲ್ಲಿ 431 ಜನರಿಗೆ ಪಾಸಿಟಿವ್ ಬಂದಿದ್ದು, ಅತಿಹೆಚ್ಚು ಸೋಂಕಿನ ಲಕ್ಷಣ ಹಾಗೂ ಬೇರೆ ಬೇರೆ ಇತರೆ ಕಾಯಿಲೆ ಹೊಂದಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರನ್ನು ಹೋಂ ಐಸೋಲೇಶನ್‌ನಲ್ಲಿಡಲಾಗಿದೆ.
ಮಾದರಿಯಾದ ಸಿಸಿಸಿ ಕೇಂದ್ರ: ಜಿಲ್ಲೆಯ ಹುನಗುಂದದ ಸರಕಾರಿ ಬಾಲಕರ ವಸತಿ ನಿಲಯದಲ್ಲಿ ಸ್ಥಾಪಿಸಲಾದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆಯ ಜತೆಗೆ ಯೋಗ ಮತ್ತು ಪ್ರಾಣಾಯಾಮ ಹೇಳಿ ಕೊಟ್ಟು ಬೇಗ ಗುಣಮುಖರನ್ನಾಗಿ ಮಾಡುತ್ತಿರುವ ಕಮ್ಯುನಿಟಿ ಹೆಲ್ತ್ ಅಧಿಕಾರಿಗಳ ತಂಡ ಗಮನ ಸೆಳೆದಿದೆ. ಕೋವಿಡ್ ಎರಡನೇ ಅಲೆಯಿಂದ ಹೆಚ್ಚಾಗುತ್ತಿರುವ ಪ್ರಕರಣ ಕಂಡು ಜನರಲ್ಲಿ ಭಯದ ವಾತಾವರಣ ಮೂಡಿಸಿದೆ. ಇನ್ನು ಭಯದಿಂದಲೇ ಕೆಲವೊಂದಿಷ್ಟು ಜನ ಮೃತಪಡುತ್ತಿದ್ದಾರೆ. ಪ್ರತಿದಿನ ಬೆಡ್ ಸಿಗುತ್ತಿಲ್ಲ. ಆಕ್ಸಿಜನ್ ಕೊರತೆಯಿಂದ ರೋಗಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಕೇಳುತ್ತಿದ್ದೇವೆ. ಆದರೆ, ಹುನಗುಂದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಯೋಗ ಮತ್ತು ಪ್ರಾಣಾಯಾಮ ಹೇಳಿಕೊಡುವ ಮೂಲಕ ದೇಹದ ಆಕ್ಸಿಜನ್ ಪ್ರಮಾಣವನ್ನು ಹೆಚ್ಚಿಸುವ ಪ್ರಾಣಾಯಾಮ ತರಗತಿ ನಡೆಸಲಾಗುತ್ತಿದೆ.
ಕೋವಿಡ್ ಕೇರ್ ಸೆಂಟರ್‌ನಲ್ಲಿ ಪ್ರತಿದಿನ ದೇಹದಲ್ಲಿರುವ ಆಕ್ಸಿಜನ್ ಪ್ರಮಾಣ ಹೆಚ್ಚಿಸುವ ಆಸನ ಹೇಳಲಾಗುತ್ತಿದೆ. ಇಂತಹ ಕಾರ್ಯದಲ್ಲಿ ತೊಡಗಿದ ಕಮ್ಯುನಿಟಿ ಹೆಲ್ತ್ ಅಧಿಕಾರಿ ಸಾಬು ಮನ್ನಿಕೇರಿ, ನರ್ಸ್ ಪ್ರೀತಿ ಅವರ ಬಗ್ಗೆ ಹುನಗುಂದ ಪ್ರಭಾರಿ ತಹಶೀಲ್ದಾರ್ ಶ್ವೇತಾ ಬಿಡಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಉಳಿದ ಕೋವಿಡ್ ಕೇರ್ ಸೆಂಟರ್‌ಗಳಿಗೆ ಮಾದರಿಯಾಗಿದೆ ¡
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.