384 ಪಾಸಿಟಿವ್; 192 ಮಂದಿ ಗುಣಮುಖ
Team Udayavani, Aug 22, 2020, 2:55 PM IST
ಬೆಳಗಾವಿ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮತ್ತೆ ಶುಕ್ರವಾರ ಹೆಚ್ಚಳವಾಗಿದ್ದು, ಒಂದೇ ದಿನ 384 ಜನರಿಗೆ ಸೋಂಕು ತಗುಲಿದೆ. 7 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ಇನ್ನೊಂದೆಡೆ 192 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಬೆಳಗಾವಿಯ 65 ವರ್ಷದ ವೃದ್ಧೆ, 60 ವರ್ಷದ ವೃದ್ಧ, 73 ವರ್ಷದ ವೃದ್ಧ, ಬೆಳಗಾವಿಯ 65 ವರ್ಷದ ವೃದ್ಧೆ, 74 ವರ್ಷದ ವೃದ್ಧೆ, 60 ವರ್ಷದ ವೃದ್ಧೆ ಹಾಗೂ 53 ವರ್ಷದ ವ್ಯಕ್ತಿ ಕೋವಿಡ್ ಗೆ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ ಒಟ್ಟು 151ಕ್ಕೆ ಏರಿಕೆಯಾಗಿದೆ.
384 ಹೊಸ ಪ್ರಕರಣಗಳಿಂದ 9447 ಸೋಂಕಿತರು ಆಗಿದ್ದು, ಒಂದೇ ದಿನ 192 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿ ಇಲ್ಲಿಯವರೆಗೆ 5206 ಜನ ಬಿಡುಗಡೆ ಆದಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್-19 ವಾರ್ಡ್‌ನಲ್ಲಿ ಸದ್ಯ 4140 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದಿನವರೆಗೆ 75126 ಜನರ ಮೇಲೆ ನಿಗಾ ಇಡಲಾಗಿದೆ. ಇದುವರೆಗೆ 25513 ಜನರು 14 ದಿನಗಳ ಕಾಲ ಗೃಹ ನಿಗಾದಲ್ಲಿದ್ದರೆ, ಒಟ್ಟು 6545 ಜನರು 14 ದಿನಗಳ ಗೃಹ ನಿಗಾ ಪೂರ್ಣಗೊಳಿಸಿದ್ದರೆ, 38928 ಜನರು 28 ದಿನಗಳ ಗೃಹ ನಿಗಾ ಅವಧಿ ಮುಕ್ತಾಯಗೊಳಿಸಿದ್ದಾರೆ.
ಇಂದಿನವರೆಗೆ 73830 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 62247 ವರದಿ ನಕಾರಾತ್ಮಕವಾಗಿದೆ. ಇನ್ನೂ 1201 ಜನರ ವರದಿ ಬರುವುದು ಬಾಕಿ ಇದೆ. ಸೋಂಕಿನಿಂದ ಒಟ್ಟು 151 ಜನ ಬಲಿಯಾದಂತಾಗಿದೆ ಎಂದು ಜಿಲ್ಲಾ ವೈದ್ಯಕೀಯ ವರದಿ ತಿಳಿಸಿದೆ.
ಬೈಲಹೊಂಗಲ: 21 ಜನರಿಗೆ ಸೋಂಕು : ಶುಕ್ರವಾರ ತಾಲೂಕಿನಲ್ಲಿ 21 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಪಟ್ಟಣದ ವಿದ್ಯಾನಗರದ 52 ವರ್ಷದ ಮಹಿಳೆ, ದಾನಮ್ಮದೇವಿ ಉಪ ನಗರದ 30 ವರ್ಷದ ಮಹಿಳೆ ಹಾಗೂ 36 ವರ್ಷದ ಪುರುಷ, ಎಂ.ಜಿ. ಕಾಲೋನಿಯ 30 ವರ್ಷದ ಪುರುಷ, 30 ವರ್ಷದ ಮಹಿಳೆ, 4 ವರ್ಷದ ಮಗು, ಆಶ್ರಯ ನಗರದ 20 ವರ್ಷದ ಯುವತಿ, ಬಸವ ನಗರದ 66 ವರ್ಷದ ಮಹಿಳೆ, ಮೌನೇಶ್ವರ್ ನಗರದ 22 ವರ್ಷದ ಮಹಿಳೆ, ಕಡಬಿ ಗಲ್ಲಿಯ 55 ವರ್ಷದ ಮಹಿಳೆ, ಬಾಗವಾನ್ ಚಾಳದ 37 ವರ್ಷದ ಪುರುಷ ಹಾಗೂ ತಾಲೂಕಿನ ಬೆಳವಡಿ-3, ನೇಸರಗಿ, ಬುಡರಕಟ್ಟಿ, ಮದಲಬಾವಿ, ಎಂ.ಕೆ. ಹುಬ್ಬಳ್ಳಿ, ನೇಗಿನಹಾಳ, ನಯಾನಗರ್, ಹುಣಶೀಕಟ್ಟಿಯಲ್ಲಿ ತಲಾ ಒಂದೊಂದು ಕೇಸ್ ಪತ್ತೆಯಾಗಿವೆ. ಬೈಲಹೊಂಗಲ ಕೊರೊನನಾ ಚಿಕಿತ್ಸಾ ಕೇಂದ್ರದಿಂದ ಶುಕ್ರವಾರ 6 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ತಾಲೂಕು ಆರೋಗ್ಯಾಧಿ ಕಾರಿ ಡಾ| ಎಸ್.ಎಸ್. ಸಿದ್ದನ್ನವರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.