ಮೃತಪಟ್ಟ ವ್ಯಕ್ತಿ ಏರಿಯಾದಲ್ಲೇ ಮದುವೆ!

ಆಡಳಿತ ಯಂತ್ರ ಸಂಪೂರ್ಣ ವಿಫಲ

Team Udayavani, Jun 29, 2020, 1:02 PM IST

bk-tdy-1

ಬಾಗಲಕೋಟೆ: ಕೋವಿಡ್ ಮಹಾಮಾರಿ ಜಿಲ್ಲೆಯಲ್ಲಿ ಕೈಮೀರುತ್ತಿದೆ. ಈ ವರೆಗೆ 163 ಜನರಿಗೆ ಸೋಂಕು ತಗುಲಿದ್ದು, ಅದರಲ್ಲಿ 117 ಜನ ಗುಣಮುಖರಾಗಿದ್ದಾರೆ. ಐದು ಜನರನ್ನು ಮಹಾಮಾರಿ ಬಲಿ ಪಡೆದಿದೆ. ಇಷ್ಟೊಂದು ಗಂಭೀರ ಸ್ವರೂಪಕ್ಕೆ ಕೋವಿಡ್ ತಿರುಗುತ್ತಿದ್ದರೂ ಜಿಲ್ಲೆಯ ಜನರು, ಕೋವಿಡ್ ಕುರಿತು ಗಂಭೀರತೆ ತಾಳುತ್ತಿಲ್ಲ. ಸೋಂಕಿನಿಂದ ಮೃತಪಟ್ಟ ವ್ಯಕ್ತಿ ವಾಸಿಸುತ್ತಿದ್ದ ಪ್ರದೇಶದಲ್ಲೇ ರವಿವಾರ ಮದುವೆ ಕೂಡ ನಡೆದಿದ್ದು, ಅಕ್ಕ-ಪಕ್ಕದ ಪ್ರದೇಶಗಳ ಜನರಲ್ಲಿ ಭೀತಿ ಹೆಚ್ಚಿಸಿದೆ.

ನವನಗರದ ಸೆಕ್ಟರ್‌ ನಂ. 57ರ ನಿವಾಸಿ ಗೂಡ್ಸ್‌ ವಾಹನ ಚಾಲಕ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈತನ ಪ್ರಯಾಣದ ಹಿನ್ನೆಲೆ ಗಮನಿಸಿದರೆ, ಭಯಾನಕವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರೂ, ಆ ಆಸ್ಪತ್ರೆಯನ್ನು ರಾತ್ರಿ 8ರ ಬಳಿಕ ಸೀಲ್‌ಡೌನ್‌ ಮಾಡಲಾಗಿದೆ. ಆ ವ್ಯಕ್ತಿ ಈ ಖಾಸಗಿ ಆಸ್ಪತ್ರೆಗೆ ಹೋಗುವ ಮುನ್ನ ಮತ್ತೆರೆಡು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದ. ಅವರು ಚಿಕಿತ್ಸೆಗೆ ನಿರಾಕರಿಸಿದ ಬಳಿಕ ಮತ್ತೂಂದು ಆಸ್ಪತ್ರೆಗೆ ಹೋಗಿದ್ದ. ಈ ವಿಷಯ ತಿಳಿದ ಅಧಿಕಾರಿಗಳು ತಡರಾತ್ರಿ ನಗರದ ಮೂರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ನವನಗರದ ಮೃತಪಟ್ಟ ವ್ಯಕ್ತಿ ನಿಮ್ಮ ಆಸ್ಪತ್ರೆಗೆ ಬಂದಾಗ ಆತನೊಂದಿಗೆ ಸಂವಹನ ನಡೆಸಿದ್ದವರು ಯಾರು?, ಎಷ್ಟು ಜನ ಸಂಪರ್ಕಕ್ಕೆ ಬಂದಿದ್ದಾರೆ? ಎಂಬೆಲ್ಲ ಮಾಹಿತಿ ಕಲೆ ಹಾಕಿದ್ದು, ಮುಂಜಾಗ್ರತೆಯಾಗಿ ಇಡೀ ಆಸ್ಪತ್ರೆ ಸ್ಯಾನಿಟೈಸರ್‌ ಮಾಡುವಂತೆ ಸೂಚನೆಯೂ ನೀಡಲಾಗಿದೆ.

ಕಡಿಮೆ ಖರ್ಚಿಗೆ ಮದುವೆಗೆ ತಯಾರಿ: ಸದ್ಯ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಮದುವೆಗೆ ಹಲವು ಷರತ್ತು ಹಾಕಿದ್ದು, ಇದೇ ಅವಧಿಯಲ್ಲಿ ಕಡಿಮೆ ಖರ್ಚು, ಕಡಿಮೆ ಜನರೊಂದಿಗೆ ಮದುವೆ ಮಾಡಿದರಾಯಿತು ಎಂಬ ಉದ್ದೇಶದಿಂದ ಹಲವರು ಮದುವೆಗೆ ತಯಾರಿಯೂ ನಡೆಸಿದ್ದಾರೆ. ಅದಕ್ಕಾಗಿ ಪ್ರತಿನಿತ್ಯ ನಗರಸಭೆ, ಪುರಸಭೆ, ಪಪಂ ಹಾಗೂ ಗ್ರಾಪಂಗಳಿಗೆ ಪರವಾನಗಿಗಾಗಿ ಜನರು ಮುಗಿ ಬೀಳುತ್ತಿದ್ದಾರೆ. ಪರವಾನಗಿ ಪಡೆಯಲು ಜನಪ್ರತಿನಿಧಿಗಳಿಂದ ಒತ್ತಡ ತರುವ ಕೆಲಸವೂ ನಡೆಯುತ್ತಿವೆ ಎಂದು ನಗರದ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೃತನ ಏರಿಯಾದಲ್ಲಿ ಮದುವೆ: ಶನಿವಾರ ಸೋಂಕಿನಿಂದ ಮೃತಪಟ್ಟ ನವನಗರದ ಸೆಕ್ಟರ್‌ ನಂ.57ರ ಏರಿಯಾದಲ್ಲಿ ರವಿವಾರ ಮದುವೆ ಕೂಡ ನಡೆದಿವೆ. ಮದುವೆ ಸಿದ್ಧತೆಗಾಗಿ ಉದ್ಯಾನವನದಲ್ಲಿ ಪೆಂಡಾಲ್‌ ಹಾಕಲಾಗಿತ್ತು. 50 ಜನರ ಹೆಸರಿನಲ್ಲಿ ಪರವಾನಗಿ ಪಡೆದ ಮದುವೆಗೆ ಅದಕ್ಕೂ ಹೆಚ್ಚಿನ ಜನರೇ ಬಂದಿದ್ದರು. ಹೋಳಿಗೆ ಊಟವೂ ಹಾಕಿಸಿದ್ದಾರೆ. ಆದರೆ, ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡುವ ವೇಳೆ ಎಲ್ಲವೂ ಮುಗಿದಿತ್ತು. ನಾವು 50 ಜನರೊಂದಿಗೆ ಮದುವೆ ಮುಗಿಸಿದ್ದೇವೆ ಎಂಬ ವಿವರಣೆ ಅಧಿಕಾರಿಗಳಿಗೆ ಕೊಡಲಾಯಿತು. ಇದೆಲ್ಲ ಸಮಜಾಯಿಸಿ ಕೊಡುವ ಪ್ರಯತ್ನ ಒಂದೆಡೆ ಇರಲಿ, ಮದುವೆ ಎಂಬ ಒಳ್ಳೆಯ ಕಾರ್ಯಕ್ಕೆ ಷರತ್ತಿಗೆ ಒಳಪಟ್ಟು ಯಾರೂ ಅಡ್ಡಿಪಡಿಸುವುದಿಲ್ಲ. ಆದರೆ, ಇಲ್ಲಿ ಮುಂಜಾಗ್ರತೆ ಕೈಗೊಳ್ಳದೇ ಹಳೆಯ ಬಾಗಲಕೋಟೆಯಲ್ಲಿ ಅಬಕಾರಿ ಸಬ್‌ ಇನ್ಸ್‌ಪೆಕ್ಟರ್‌ನ ಮದುವೆಯಂತಾದರೆ ಪರಿಸ್ಥಿತಿ ಹೇಗೆ ಎಂಬುದು ಜನರ ಆತಂಕ.

ಜನರಲ್ಲಿ ಸ್ವಯಂ ಜಾಗೃತಿ ಅಗತ್ಯ: ಎಲ್ಲವೂ ಮುಗಿಯಿತು, ಇನ್ನೇನು 8 ಜನರು ಉಳಿದಿದ್ದಾರೆ. ಅವರಷ್ಟು ಗುಣಮುಖರಾದರೆ, ಜಿಲ್ಲಾ ಆಸ್ಪತ್ರೆ ಕೋವಿಡ್‌-19ನಿಂದ ಮುಕ್ತವಾಗಲಿದೆ ಎಂಬ ಆಶಾ ಭಾವನೆಯಲ್ಲಿರುವಾಗಲೇ ಬಾಗಲಕೋಟೆಯಲ್ಲಿ ನಡೆದ ಮದುವೆಯೊಂದು ಅವಾಂತರ ತಂದಿದೆ. ಅಲ್ಲದೇ, ಗುಳೇದಗುಡ್ಡದ ಸಮುದಾಯ ಆರೋಗ್ಯ ಕೇಂದ್ರದ 60 ವರ್ಷದ ಡಿ ದರ್ಜೆ ನೌಕರರನಿಗೂ ಸೋಂಕು ತಗುಲಿದ್ದು, ಇಡೀ ಆಸ್ಪತ್ರೆ ಸೀಲ್‌ಡೌನ್‌ ಆಗಿದೆ. ಈ ವ್ಯಕ್ತಿಗೆ ಬೀಳಗಿ ತಾಲೂಕಿನ ಬೂದಿಹಾಳದ ಸೋಂಕಿತನಿಂದ ಕೋವಿಡ್ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಲ್ಲಿಯ ಬೀಳಗಿ, ಎಲ್ಲಿಯ ಗುಳೇದಗುಡ್ಡ, ಸೋಂಕು ಹರಡಿದ್ದು ಹೇಗೆ? ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಹೀಗಾಗಿ ಜನರು ಸ್ವಯಂ ಜಾಗೃತಿಗೊಂಡು ಕೋವಿಡ್ ಕುರಿತು ಅತ್ಯಂತ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಜಿಲ್ಲಾಡಳಿತ ಮೌನವೇಕೆ?: ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತ ಆರಂಭದಲ್ಲಿ ಕೈಗೊಂಡ ಉತ್ಸಾಹ ಈಗ ಕಾಣುತ್ತಿಲ್ಲ. ಜನರಲ್ಲಿ ಜಾಗೃತಿ, ಎಚ್ಚರಿಕೆ ನೀಡುವ ಜತೆಗೆ ಈ ವಿಷಯದಲ್ಲಿ ಜನಸ್ನೇಹಿ ಆಡಳಿತ ದೂರವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಸ್ವತಃ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಸಹಿತ ಹಲವು ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಗಳೇ ಮಾಧ್ಯಮದವರ ಕರೆ ಸ್ವೀಕರಿಸುತ್ತಿಲ್ಲ. ಕೋವಿಡ್ ಹತೋಟಿ ಕುರಿತು ಜನರಿಗಾಗಿ ಕೈಗೊಂಡ ಪ್ರಮುಖ ನಿರ್ಧಾರಗಳು ಹೊರ ಬೀಳುತ್ತಿಲ್ಲ. ಸ್ಥಳೀಯ ಲ್ಯಾಬ್‌ ನಲ್ಲಿ ಕೋವಿಡ್ ದೃಢಪಟ್ಟ ಬಳಿಕ ಆ ಸೋಂಕಿತರ ಏರಿಯಾ ಸೀಲ್‌ಡೌನ್‌ ಮಾಡುವ ವಿಷಯದಲ್ಲಿ, ಸಂಪರ್ಕಿತರ ಪತ್ತೆ ಮಾಡುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ತಾಳುತ್ತಿದೆ ಎಂಬ ಅಸಮಾಧಾನ ಕೇಳಿ ಬಂದಿದೆ.

ಸಮುದಾಯಕ್ಕೆ ವಿಸ್ತರಣೆ? : ಕೋವಿಡ್ ಸೋಂಕು ಈ ವರೆಗೆ ಬೇರೆ ರಾಜ್ಯ, ಸೋಂಕಿತರು ಇರುವ ಪ್ರದೇಶಕ್ಕೆ ಭೇಟಿ ನೀಡಿದವರಲ್ಲಿ ಪತ್ತೆಯಾಗಿತ್ತು. ಆದರೆ, ಇತ್ತೀಚಿನ ಒಂದು ವಾರದಿಂದ ಬೇರೆ ರಾಜ್ಯಕ್ಕೆ ಭೇಟಿ ನೀಡದವರಿಗೆ, ಬಾಗಲಕೋಟೆ ನಗರ ಬಿಟ್ಟು ಹೊರ ಹೋಗದವರಿಗೂ ಸೋಂಕು ಬಂದಿದೆ. ಹೀಗಾಗಿ ಕೋವಿಡ್ ಸೋಂಕು ಈಗ ಸಮುದಾಯದಲ್ಲಿ ವಿಸ್ತರಣೆಯಾಗುತ್ತಿದೆಯೇ ಎಂಬ ಆತಂಕ ಶುರುವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸೋಂಕಿತರ ಪ್ರಯಾಣ ಹಿನ್ನೆಲೆ, ಯಾರಿಂದ ಸೋಂಕು ಬಂತು? ಎಂಬುದನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚುವ ಕಾರ್ಯ ಮಾಡುತ್ತಿತ್ತು. ಆದರೆ, ಎರಡು ದಿನದಿಂದ ಈ ಗೋಜಿಗೆ ಹೋಗುತ್ತಿಲ್ಲ. ಕೇವಲ ಸೋಂಕಿತರ ವಿವರ ನೀಡಲಾಗುತ್ತಿದೆ. ಯಾರಿಂದ, ಹೇಗೆ ಬಂತು ಎಂಬುದು ತಿಳಿಯುತ್ತಿಲ್ಲ. ಇದು, ಭೀತಿ ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗಿದೆ.

ಬಿಟಿಡಿಎ ಅಧಿಕಾರಿಗಳೆಲ್ಲಿ? :  ಮೊದಲು ಹಳೆಯ ಬಾಗಲಕೋಟೆಗೆ ಸೀಮಿತವಾಗಿದ್ದ ಕೋವಿಡ್ ಈಗ ನವನಗರದಲ್ಲಿ ಕೇಕೆ ಹಾಕುತ್ತಿದೆ. ಹಲವು ಕ್ವಾರಂಟೈನ್‌ ಕೇಂದ್ರಗಳೂ ನವನಗರದಲ್ಲಿವೆ. ಸೋಂಕಿತ ವ್ಯಕ್ತಿಯೊಬ್ಬ ಮೃತಪಟ್ಟರೂ ಇಡೀ ನವನಗರದ ಜವಾಬ್ದಾರಿ ಹೊತ್ತ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪತ್ತೆ ಇಲ್ಲ. ಸೋಂಕಿತ ವ್ಯಕ್ತಿಗಳ ಮನೆ ಸುತ್ತ ಸ್ಯಾನಿಟೈಸರ್‌ ಮಾಡಿಲ್ಲ. ಸೀಲ್‌ಡೌನ್‌ ಗೆ ತಲೆ ಕೆಡಿಸಿಕೊಂಡಿಲ್ಲ. ಬಿಟಿಡಿಎ ಅಧಿಕಾರಿಗಳ ಈ ನಿರ್ಲಕ್ಷ್ಯಕ್ಕೆ ನವನಗರದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನವನಗರದಲ್ಲಿ ರವಿವಾರ ಒಂದು ಮದುವೆ ನಡೆದಿದೆ. ಆ ಸ್ಥಳಕ್ಕೆ ನಾವು ಭೇಟಿ ನೀಡಿದ್ದು, ಅದು ಸೆಕ್ಟರ್‌ ನಂ.57ರ ಕೊನೆ ಭಾಗದಲ್ಲಿದೆ. ಮೃತಪಟ್ಟ ಸೋಂಕಿತ ವ್ಯಕ್ತಿಯ ಮನೆಗೂ, ಮದುವೆ ನಡೆದ ಸ್ಥಳಕ್ಕೂ ದೂರವಿದೆ. ಕೇವಲ 50 ಜನರೊಂದಿಗೆ ಮದುವೆ ಮುಗಿಸಿರುವ ಕುರಿತು ಕ್ರಾಸ್‌ ಚೆಕ್ಕಿಂಗ್‌ ಕೂಡ ಮಾಡಿದ್ದೇವೆ. –ಗುರುಸಿದ್ದಯ್ಯ ಹಿರೇಮಠ, ತಹಶೀಲ್ದಾರ್‌, ಬಾಗಲಕೋಟೆ

ಕೋವಿಡ್‌-19 ದಿನೇ ದಿನೇ ಹೆಚ್ಚುತ್ತಿದ್ದು, ರವಿವಾರ ಪರವಾನಗಿಗಾಗಿ ಬಂದಿದ್ದ ನಾಲ್ಕು ಮದುವೆ ರದ್ದುಪಡಿಸಲಾಗಿದೆ. ನವನಗರದಲ್ಲಿ ಒಂದು ಮದುವೆ ನಡೆದಿದ್ದು, ಅವರು 15 ದಿನಗಳ ಹಿಂದೆಯೇ ಪರವಾನಗಿ ಪಡೆದಿದ್ದರು. ಆದರೂ ಸ್ಥಳ ಪರಿಶೀಲನೆ ನಡೆಸಲಾಗಿದೆ. –ಮುನಿಶಾಮಪ್ಪ, ಪೌರಾಯುಕ್ತ, ನಗರಸಭೆ

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.