ಕೋವಿಡ್ ಎಫೆಕ್ಟ್ : ಶಾಮಿಯಾನಾ ವ್ಯಾಪಾರಸ್ಥರ ಗಾಯದ ಮೇಲೆ ಬರೆ

ಪೆಂಡಾಲ್‌ಗಾರರ ಜೀವನದಲ್ಲಿ ಮರುಕಳಿಸಿದ ಕರಿನೆರಳು! ­ವರ್ಷದ ಆದಾಯಕ್ಕೆ ಕೊರೊನಾ ಕೊಕ್ಕೆ

Team Udayavani, Apr 24, 2021, 5:58 PM IST

ht434

ವರದಿ : ಗೋವಿಂದಪ್ಪ ತಳವಾರ

ಮುಧೋಳ: ಕಳೆದೊಂದು ವರ್ಷದಿಂದ ಸಾರ್ವಜನಿಕರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಹೊಡೆತಕ್ಕೆ ಇಡೀ ಮನುಕುಲವೇ ನಲುಗಿಹೋಗಿದೆ.

ಕಳೆದ ಬಾರಿ ಕೊರೊನಾ ವೈರಸ್‌ನಿಂದಾಗಿ ತೀವ್ರ ಸಂಕಷ್ಟಕ್ಕೀಡಾಗಿದ್ದ ಶಾಮಿಯಾನಾದವರ (ಪೆಂಡಾಲ್‌ ಹಾಕುವವರು) ಬಾಳಲ್ಲಿ ಇದೀಗ ಮತ್ತೂಮ್ಮೆ ಕರಿನೆರಳಿನ ಛಾಯೆ ಆವರಿಸಿದೆ. ಮದುವೆ ಸೀಸನ್‌ನಲ್ಲೆ ಉಲ್ಬಣ: ಕಳೆದ ವರ್ಷ ದೇಶದಲ್ಲಿ ಹೆಚ್ಚು ಕಡಿಮೆ ಫೆಬ್ರವರಿಯಲ್ಲಿ ಕೋವಿಡ್ ಆರ್ಭಟ ಜೋರಾಗಿತ್ತಾದರೂ ಅದನ್ನು ತಡೆಗಟ್ಟಲು ಸರ್ಕಾರ ಮಾರ್ಚ್‌ನಲ್ಲಿ ಲಾಕ್‌ಡೌನ್‌ ಜಾರಿ ಮಾಡಿತ್ತು. ಪ್ರತಿವರ್ಷ ಮಾರ್ಚ್‌ ತಿಂಗಳಿಂದ ಮದುವೆ ಸೀಸನ್‌ ಆರಂಭವಾಗುತ್ತದೆ. ಹೀಗಾಗಿ ಕಳೆದ ವರ್ಷ ಸಾರ್ವಜನಿಕ ಮದುವೆಗಳಿಗೆ ಅನುಮತಿ ನಿರಾಕರಿಸಿದ್ದರಿಂದ ಶಾಮಿಯಾನ್‌ ಹಾಕುವವರು ಕೆಲಸವಿಲ್ಲದೆ ತೀವ್ರ ಸಂಕಷ್ಟಕ್ಕೀಡಾಗಿದ್ದರು. ಆಗಿನ ಬಿಗಿಯಾದ ಲಾಕ್‌ಡೌನ್‌ ಕ್ರಮದಿಂದಾಗಿ ಸಾರ್ವಜನಿಕ ಮದುವೆ ಹಾಗೂ ಶುಭ ಕಾರ್ಯಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಇದರಿಂದಾಗಿ ಪೆಂಡಾಲ್‌ ಹಾಕುವವರು ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದರು.

ಈ ಬಾರಿಯೂ ಹೊಡೆತ: ಕಳೆದ ಬಾರಿ ಉಂಟಾಗಿದ್ದ ಆರ್ಥಿಕ ಹೊಡೆತದಿಂದ ಚೇತರಿಸಿಕೊಂಡು ಈ ಬಾರಿಯಾದರೂ ನಾಲ್ಕಾರು ಕಾಸು ಸಂಪಾದಿಸಬೇಕು ಎಂದು ಯೋಜನೆ ಹಾಕಿಕೊಂಡಿದ್ದ ಪೆಂಡಾಲ್‌ ಹಾಕುವವರ ಜೀವನ ಮತ್ತೆ ಮಸುಕಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಕಳೆದೊಂದು ತಿಂಗಳಿನಿಂದ ದೇಶದಲ್ಲಿ ಕೋವಿಡ್ 2ನೇ ಅಲೆಯ ಅಬ್ಬರ ನಾಗಾಲೋಟದಲ್ಲಿ ಸಾಗುತ್ತಿದ್ದು, ದೇಶದಲ್ಲಿ ದೈನಂದಿನ ಕಾರ್ಯಕಲಾಪದ ಮೆಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಇನ್ನು ಮದುವೆ ಸೀಸನ್‌ ಆರಂಭದಲ್ಲಿಯೇ ಸರ್ಕಾರ ಕೊರೊನಾ ತಡೆಗೆ ಹಲವು ಬಿಗಿ ಕ್ರಮ ಕೈಗೊಂಡಿದ್ದು, ಪೆಂಡಾಲ್‌ ಹಾಕುವವರನ್ನು ಚಿಂತಾಕ್ರಾಂತರನ್ನಾಗಿಸಿದೆ.

ಲಕ್ಷಾಂತರ ರೂ. ವಹಿವಾಟು: ಪ್ರತಿವರ್ಷ ಮಾರ್ಚ್‌ ನಿಂದ ಮೇವರೆಗೆ ನಡೆಯುವ ಮದುವೆ ಸೀಸನ್‌ ನಲ್ಲಿ ಪೆಂಡಾಲ್‌ ಕೆಲಸಗಾರರು ಲಕ್ಷಾಂತರ ರೂ. ವ್ಯವಹಾರ ಮಾಡುತ್ತಾರೆ. ಎರಡ್ಮೂರು ತಿಂಗಳಲ್ಲಿ ವರ್ಷಕ್ಕಾಗುವಷ್ಟು ದುಡಿಮೆ ಮಾಡುವ ಇವರಿಗೆ ಮದುವೆ ಸೀಸನ್‌ ಬಹಳ ಮುಖ್ಯ. ಆದರೆ ಕಳೆದೆರಡು ಸೀಸನ್‌ನಲ್ಲಿ ವ್ಯಾಪಾರವಿಲ್ಲದ ಕಾರಣ ಜೀವನ ನಿರ್ವಹಣೆಯೇ ದೊಡ್ಡ ಸವಾಲಾಗಿದೆ.

ಪೂರಕ ಕೆಲಸಕ್ಕೂ ಹೊಡೆತ: ಒಂದು ಮದುವೆ ಎಂದರೆ ಅಲ್ಲಿ ಕೇವಲ ಪೆಂಡಾಲ್‌ ಹಾಕುವವರಿಗೆ ಮಾತ್ರ ಕೆಲಸವಿರುವುದಿಲ್ಲ. ಅಡುಗೆ ಬಾಣಸಿಗರು, ಮಂಗಲಮಂಟಪ, ಬ್ಯಾಂಜೋ ಪಾರ್ಟಿ ವಾಹನ ಸವಾರರು ಸೇರಿದಂತೆ ಹತ್ತಾರು ವರ್ಗದ ಜನರಿಗೆ ಮದುವೆಯಿಂದ ಕೆಲಸ ದೊರೆಯುತ್ತಿರುತ್ತದೆ. ಆದರೆ ಕೊರನಾ ಹೊಡೆತಕ್ಕ ತತ್ತರಿಸಿರುವ ಈ ಎಲ್ಲ ವರ್ಗದ ಜನರು ವಿ ಯ ಆಟಕ್ಕೆ ನಿಟ್ಟುಸಿರು ಹಾಕುವಂತಾಗಿದೆ.

ಅಡ್ವಾನ್ಸ್‌ ಬುಕ್ಕಿಂಗ್‌ ಕ್ಯಾನ್ಸಲ್‌: ಮೊನ್ನೆ ಮೊನ್ನೆಯವರೆಗೆ ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ವಿಧಿಸುವುದಿಲ್ಲ ಎಂದು ಹೇಳುತ್ತಿದ್ದ ಸರ್ಕಾರ ಲಾಕ್‌ಡೌನ್‌ ಬದಲಿಗೆ ಹತ್ತಾರು ಬಿಗಿಯಾದ ಕ್ರಮಕ್ಕೆ ಮುಂದಾಗುತ್ತಿದೆ. ಕೊರೊನಾ ತಡೆಗೆ ಬಿಗಿಯಾದ ಕ್ರಮ ಅನಿವಾರ್ಯವಾದರೂ ದಿನದ ಕೂಲಿ ನಂಬಿ ಬದುಕುವವರಿಗೆ ಅದು ಅರಗಿಸಿಕೊಳ್ಳಲಾಗದ ಹಿಂಸೆಯಾಗುತ್ತಿದೆ.

ಇನ್ನು ಮಾರ್ಚ್‌ನಿಂದ ಆರಂಭವಾಗುತ್ತಿದ್ದ ಮದುವೆಗಳ ಸಂಭ್ರಮಾಚರಣೆಗೆ ಹಲವೆಡೆ ಈಗಾಗಲೇ ಶಾಮಿಯಾನ ಬುಕ್‌ ಆಗಿದ್ದವು. ಆದರೆ ಸರ್ಕಾರ ಮದುವೆ ಮನೆಗಳಲ್ಲಿ ಐವತ್ತಕ್ಕಿಂತ ಹೆಚ್ಚಿನ ಜನರು ಸೇರಬಾರದು ಎಂಬ ಷರತ್ತು ವಿಧಿಸಿರುವ ಪರಿಣಾಮ ಮದುವೆಗಾಗಿ ಬುಕ್‌ ಆಗಿದ್ದ ಅದೆಷ್ಟೋ ಶಾಮಿಯಾನ್‌ ರದ್ದುಗೊಳಿಸಿ ಅಡ್ವಾನ್ಸ್‌ ಹಣವನ್ನು ವಾಪಸ್‌ ನೀಡಲಾಗಿದೆ. ದೊರೆಯದ ಪರಿಹಾರ: ತೀವ್ರ ಹಾನಿಯಿಂದಾಗಿ ಕಂಗೆಟ್ಟಿದ್ದ ಶಾಮಿಯಾನಾ ವ್ಯಾಪಾರಸ್ಥರು ತಾಲೂಕು ಪೆಂಡಾಲ್‌ ಮಾಲೀಕರ ಸಂಘದ ಅಡಿಯಲ್ಲಿ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಮನವಿಗೆ ಸ್ಪಂದಿಸದ ಸರ್ಕಾರ ಮನವಿ ಪಡೆದುಕೊಂಡಿದ್ದನ್ನು ಬಿಟ್ಟರೆ ಮತ್ತೇನನ್ನೂ ನೀಡಿಲ್ಲ ಎಂಬುದು ಸಂಘಟನೆ ಮುಖಂಡರ ದೂರು.

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.