ಹಳ್ಳಿಗೂ ವ್ಯಾಪಿಸಿತೇ ಕೊರೊನಾ?
ಈ ರೀತಿ ಮುಂದುವರಿದರೇ ಹಳ್ಳಿಗಳು ಕೊರೊನಾ ಹಾಟ್‌ಸ್ಪಾಟ್ ಆಗುವುದರಲ್ಲಿ ಸಂದೇಹವಿಲ್ಲ.
Team Udayavani, May 3, 2021, 7:08 PM IST
ಹುನಗುಂದ: ಮನುಕುಲವನ್ನು ಬೆಚ್ಚಿ ಬೀಳಿಸಿ ಮರಣ ಮೃದಂಗ ಬಾರಿಸುತ್ತಿರುವ ಕಿಲ್ಲರ್ ಕೊರೊನಾ ಸದ್ಯ ವಲಸಿಗರಿಂದ ಗ್ರಾಮೀಣ ಪ್ರದೇಶಕ್ಕೂ ಒಕ್ಕರಿಸಿಕೊಳ್ಳುವ ಎಲ್ಲ ಲಕ್ಷಣಗಳು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೌದು, ಕೊರೊನಾ ಎರಡನೆಯ ಅಲೆಯು ತಾಲೂಕಿನಲ್ಲಿ ನಿತ್ಯ ಕೊರೊನಾ ಪ್ರಕರಣಗಳು ಎರಡಂಕಿ ದಾಟಿ ಮುನ್ನಡೆಯುತ್ತಿದ್ದು, ಗ್ರಾಮೀಣ ಭಾಗದಲ್ಲೂ ಕೊರೊನಾದ ಕರಾಳ ಛಾಯೆ ವ್ಯಾಪಿಸುತ್ತಿದೆ.
ಕೊರೊನಾ ತಡೆಗೆ ಸರ್ಕಾರ ಕೊರೊನಾ ಕರ್ಫ್ಯೂ ಮುಂದುವ ರಿಸಿರುವುದರಿಂದ ಮಹಾರಾಷ್ಟ್ರ ಸೆರಿದಂತೆ ವಿವಿಧ ನಗರಗಳಿಗೆ ತೆರಳಿದ್ದ ವಲಸಿಗರು ತಾಲೂಕಿಗೆ ಮರಳುತ್ತಿದ್ದು, ಸೋಂಕು ಹರಡುವ ಆತಂಕ ಜನರಲ್ಲಿ ಮೂಡಿದೆ. ಅಲ್ಲದೇ ತಾಲೂಕಿನಲ್ಲಿ ದಿನದಿಂದ ದಿನ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಾಲೂಕು ಆಡಳಿತ ಗಮನಹರಿಸುತ್ತಿಲ್ಲ ಎಂದು ನಾಗರಿಕರ ಆರೋಪವಾಗಿದೆ.
ಮೊದಲ ಹಂತದ ಕೊರೊನಾ ಸಂದರ್ಭದಲ್ಲಿ ವಲಸಿ ಬಂದ ಜನರನ್ನು ಕನಿಷ್ಠ 14 ರಿಂದ 28 ದಿನಗಳವರಗೆ ಕ್ವಾರಂಟೈನ್ ಮಾಡಿ ರೋಗ ಲಕ್ಷಣಗಳು ಕಂಡು ಬರದೇ ಇದ್ದಾಗ ಅವರ ಮನೆ ಕಳುಹಿಸುತ್ತಿದ್ದರು. ಆದರೆ, ಸದ್ಯ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದರೂ ಸಹ ಅವರ ಬಗ್ಗೆ ತಾಲೂಕು ಆಡಳಿತವಾಗಲಿ ಮತ್ತು ಆರೋಗ್ಯ ಇಲಾಖೆಯಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ವಲಸೆ ಬಂದ ಜನರಲ್ಲಿ ರೋಗ ಲಕ್ಷಣಗಳಿದ್ದರೂ ಸಹ ಹಳ್ಳಿಗಳಲ್ಲಿ ಇತರರೊಂದಿಗೆ ಸೇರಿ ಸಂಚರಿಸುತ್ತಿರುವುದರಿಂದ ಇಲ್ಲಿವರೆಗೂ ಸೇಫ್ ಆಗಿದ್ದ ಹಳ್ಳಿಗಳಲ್ಲಿ ಈಗ ಕೊರೊನಾದ ಆರ್ಭಟ ಆರಂಭಗೊಂಡಿದೆ.
ಹಳ್ಳಿಗಳು ಯಾವಾಗಲೂ ರೋಗಗಳಿಂದ ಸುರಕ್ಷಿತ ಎಂದು ಹೇಳಲಾಗುತ್ತಿತ್ತು. ಆದರೆ ದುಡಿಯಲು ಹೋಗಿ ಬಂದ ಜನರು ಗ್ರಾಮಗಳಿಗೆ ಪ್ರವೇಶಿಸುತ್ತಿದ್ದಂತೆ ಹಳ್ಳಿಗಳಲ್ಲಿ ಕೊರೊನಾ ಕರಿನೆರಳು ಆವರಿಸುತ್ತಿದೆ. ಪ್ರತಿಯೊಂದು ಹಳ್ಳಿಗರು ಜ್ವರ, ಶೀತ, ಕೆಮ್ಮಿನಿಂದ ಬೆಳಲುತ್ತಿದ್ದು. ಗ್ರಾಮೀಣ ಭಾಗದಲ್ಲಿರುವ ಆಸ್ಪತ್ರೆಗಳಲ್ಲೀಗ ಜ್ವರ, ಶೀತ ಕೆಮ್ಮುನಿಂದ ಬಳಲುವವರ ಸಂಖ್ಯೆ ಹೆಚ್ಚಿದೆ. ಈ ರೀತಿ ಮುಂದುವರಿದರೇ ಹಳ್ಳಿಗಳು ಕೊರೊನಾ ಹಾಟ್‌ಸ್ಪಾಟ್ ಆಗುವುದರಲ್ಲಿ ಸಂದೇಹವಿಲ್ಲ.
ಆರೋಗ್ಯ ಇಲಾಖೆ ನಿರ್ಲಕ್ಷ್ಯ:
ಕೊರೊನಾ ಮಹಾಮಾರಿ ರೋಗಕ್ಕೆ ಪಟ್ಟಣದಿಂದ ಹಳ್ಳಿಯ ಕಡೆಗೆ ನಿಧಾನವಾಗಿ ತಿರುಗುತ್ತಿದ್ದು. ರೋಗದ ತೀವ್ರತೆಯ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾದ ಆರೋಗ್ಯ ಇಲಾಖೆ ಕೇವಲ ನಾಮಕಾವಸ್ತೆ ಪರೀಕ್ಷೆ ಮಾಡಿ ರೋಗಿಗಳನ್ನು ಹೋಮ್ ಕ್ವಾರಂಟೈನ್ ಮಾಡುತ್ತಿದ್ದಾರೆ. ಜನರು ರೋಗದ ಬಗ್ಗೆ ಭಯ ಪಡದೇ ನಮ್ಮಗೇನು ರೋಗವಿಲ್ಲ ಎಂದು ಅನಗತ್ಯ ಸಂಚರಿಸಲು ಅವಕಾಶ ನೀಡಿದ್ದು ಆರೋಗ್ಯ ಇಲಾಖೆಯ ನಿರ್ಲಕ್ಷ ಎತ್ತಿ ತೋರಿಸುತ್ತದೆ. ಒಬ್ಬರಿಗೆ ಕೊರೊನಾ ಲಕ್ಷಣಗಳು ಕಂಡು ಬಂದ ತಕ್ಷಣವೇ ಸೂಕ್ತ ಚಿಕಿತ್ಸೆ ಮತ್ತು ಜಾಗೃತಿ ವಹಿಸಿದರೇ ಮತ್ತೂಬ್ಬರಿಗೆ ಹರಡುವುದಿಲ್ಲ. ಆದರೇ ಜ್ವರ, ಕೆಮ್ಮು, ಶೀತದಂತ ಲಕ್ಷಣಗಳು ಹಳ್ಳಿ ಹಳ್ಳಿಗಳಲ್ಲಿಗ ಕಾಣಿಸಿಕೊಳ್ಳುತ್ತಿದೆ.
ಈ ರೀತಿ ಮುಂದುವರಿದರೇ ಬೆಂಗಳೂರನಲ್ಲಿ ನಿತ್ಯ ಬರುವ ಪ್ರಕರಣಗಳಿಗಿಂತ ಹೆಚ್ಚು ಪಾಸಿಟಿವ್ ಕೇಸ್‌ಗಳು ಹಳ್ಳಿಗಳಿಂದ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಕೊರೊನಾ ಗ್ರಾಮೀಣ ಭಾಗದ ಜನತೆಗೆ ಆವರಿಸುವುದಕ್ಕಿಂತ ಮುಂಚೆ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಪಟ್ಟಣಗಳಿಂದ ಹಳ್ಳಿಗೆ ಬಂದ ಜನರನ್ನು ಸರಿಯಾಗಿ ಪರೀಕ್ಷಿಸಿ ರೋಗ ಲಕ್ಷಣಗಳಿದ್ದರೇ ಪ್ರತ್ಯೇಕವಾಗಿ ಇರಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಹಳ್ಳಿಯ ಜನರಿಗೆ ಜಾಗೃತಿ ಮೂಡಿಸುವುದು ಮುಖ್ಯ.
ಮೇ 1ರವರೆಗೆ ತಾಲೂಕಿನಾದ್ಯಂತ 323 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು. ಅದರಲ್ಲಿ 195 ಸಕ್ರಿಯ ಪ್ರಕರಣಗಳಿವೆ. 115 ಜನರು ಗುಣಮುಖವಾಗಿ ಮನೆ ಸೇರಿದರೇ, ಐವರು ತಾಲೂಕು ಆಸ್ಪತ್ರೆ ಹಾಗೂ 11 ಜನರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ಲಕ್ಷಣಗಳು ಕಂಡು ಬಂದ 55 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಮೇ 2ರಂದು ಮತ್ತೇ 48 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಡಾ| ಪ್ರಶಾಂತ ತುಂಬಗಿ, ತಾಲೂಕು ವೈದ್ಯಾಧಿಕಾರಿ ಹುನಗುಂದ.
*ಮಲ್ಲಿಕಾರ್ಜುನ ಬಂಡರಗಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.