ಮತ್ತೂಂದು ಪ್ರದೇಶಕ್ಕೆ ಕೋವಿಡ್ ವೈರಸ್ ವಿಸ್ತರಣೆ
Team Udayavani, May 20, 2020, 4:49 AM IST
ಬಾಗಲಕೋಟೆ : ಜಿಲ್ಲೆಯಲ್ಲೇ ಮೊದಲ ಕೋವಿಡ್ ಪ್ರಕರಣ ಕಂಡು ಬಂದಿದ್ದ ಬಾಗಲಕೋಟೆಯ ಅಡತ ಬಜಾರ್ ಪ್ರದೇಶ ಹೊರತುಪಡಿಸಿ, ನಗರದ ಬೇರೆ ಪ್ರದೇಶದಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಆ ಪ್ರದೇಶದ 14 ಜನರೂ ಗುಣಮುಖರಾಗಿ ಮನೆ ಸೇರಿದ ಮರುದಿನವೇ ನಗರದ ಮತ್ತೂಂದು ಪ್ರದೇಶಕ್ಕೆ ಸೋಂಕು ವಿಸ್ತರಣೆಯಾಗಿದ್ದು, ಜಯನಗರದ ಜನರು ಭೀತಿಗೊಂಡಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಮಹಾರಾಷ್ಟ್ರದ ಕೊಲ್ಹಾಪುರದಿಂದ ಬಂದಿದ್ದ 38 ವರ್ಷದ ಪುರುಷ (ಕಾರ್ಮಿಕ) ಪಿ-1391 ವ್ಯಕ್ತಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ. ಈ ವ್ಯಕ್ತಿ ಮೂರು ದಿನಗಳ ಹಿಂದೆಯೇ ಮುಚಖಂಡಿ ಕ್ರಾಸ್ ಬಳಿಯ ಜಯನಗರದಲ್ಲಿರುವ ತನ್ನ ಮನೆಗೆ ಬಂದಿದ್ದು, ಒಂದು ದಿನ ಮನೆಯಲ್ಲೇ ಕಳೆದಿದ್ದಾನೆ ಎನ್ನಲಾಗಿದೆ. ಜಯನಗರ ಬಡಾವಣೆಯ ಪ್ರಮುಖರು, ಆತನನ್ನು ಕ್ವಾರಂಟೈನ್‌ಗೆ ಕಳುಹಿಸಿದ್ದು, ಮರುದಿನವೇ ಆತನಿಗೆ ಪಾಜಿಟಿವ್ ಬಂದಿದೆ. ಹೀಗಾಗಿ ಆತನ ಸಂಪರ್ಕಕ್ಕೆ ಬಂದವರ ವಿವರ ಪಡೆಯುವ ಜತೆಗೆ, ಆತ ಮಹಾರಾಷ್ಟ್ರದಿಂದ ಹೇಗೆ ನಗರಕ್ಕೆ ಬಂದ, ಆತನೊಂದಿಗೆ ಎಷ್ಟು ಜನರಿದ್ದರು, ಕ್ವಾರಂಟೈನ್ ವೇಳೆ ಆತನೊಂದಿಗೆ ಸಂಪರ್ಕಕ್ಕೆ ಬಂದವರ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಲಾಗುತ್ತಿದೆ.
ನಗರದಲ್ಲಿ ಕಂಡು ಬಂದಿದ್ದ ಒಟ್ಟು 15 ಜನ ಸೋಂಕಿತರಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದು, ಉಳಿದ 14 ಜನರೂ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದೀಗ ಮತ್ತೂಂದು ಪ್ರದೇಶವಾದ ಜಯನಗರಕ್ಕೆ ಸೋಂಕು ಬಂದಿದ್ದು, ಈ ಬಡಾವಣೆಯ ಜನರು ಕೋವಿಡ್ ಭೀತಿ ಎದುರಿಸುತ್ತಿದ್ದಾರೆ. ಅಲ್ಲದೇ ಈ ಬಡಾವಣೆಗೆ ಮಂಗಳವಾರ ರಾತ್ರಿಯಿಂದಲೇ ಪ್ರವೇಶ, ಹೊರ ಹೋಗುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.