ಶಾಸಕ ಸಿದ್ದು ಸವದಿ ಅವರಿಂದ ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆ
Team Udayavani, Aug 16, 2021, 7:07 PM IST
ಬನಹಟ್ಟಿ: ಕರ್ನಾಟಕ ಸರ್ಕಾರ ಅಭಿವೃದ್ದಿಪಡಿಸಿದ ಮುಂಗಾರು ಬೆಳೆ ಸಮೀಕ್ಷೆ ೨೦೨೧-೨೨ ಎಂಬ ಮೊಬೈಲ್ ಆ್ಯಪ್‌ನ ಬಳಕೆ ಮಾಡಿ ತಂತ್ರಜ್ಞಾನಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು.
2021-22ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕುರಿತು ಅರಿವು ಮೂಡಿಸುವ ಹಾಗೂ ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆಯನ್ನು ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದ ನಿಂಗಪ್ಪ ಕಲಹಳ್ಳಿ ಇವರ ತೋಟದಲ್ಲಿ ಹಮ್ಮಿಕೊಳ್ಳಲಾಗಿತ್ತು. ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ರೈತರಿಗಾಗಿ ಬೆಳೆ ಸಮೀಕ್ಷೆ ಮೊಬೈಲ್‌ಆ್ಯಪ್ ಮತ್ತು ಬೆಳೆ ಸಮೀಕ್ಷೆ ಉತ್ಸವ ೨೦೨೧ ಪೋಸ್ಟರ್‌ಗಳ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು ರೈತರನ್ನುದ್ದೇಶಿಸಿ ಮಾತನಾಡಿದ ಅವರು, ರೈತರು ತಾವು ಬೆಳೆಯುವ ಪ್ರತಿಯೊಂದು ಬೆಳೆಯ ಮಾಹಿತಿಯನ್ನುಆ್ಯಪ್ ಮೂಲಕ ಅಪ್ಲೋಡ್ ಮಾಡಿದಲ್ಲಿ ಸರಕಾರಕ್ಕೆ ಬೆಳೆಗಳ ವಿಸ್ತೀರ್ಣ ತಿಳಿಯಲು ಸಹಕಾರಿಯಾಗುತ್ತದೆ. ಅಲ್ಲದೇ ಪ್ರಕೃತಿ ವಿಕೋಪದಿಂದಾಗಿ ಬೆಳೆಗಳು ಹಾನಿಯಾದಾಗ, ಬೆಂಬಲ ಬೆಲೆ ಪಡೆಯಲು, ಬೆಳೆ ವಿಮೆ ಪಡೆದುಕೊಳ್ಳಲು, ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಅನುಕೂಲಕರವಾಗಲಿದೆಎಂದು ತಿಳಿಸಿದರು.
ಶಾಸಕರು ಸ್ವತಃ ಕ್ಷೇತ್ರಕ್ಕೆ ತೆರಳಿ ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆ ಪ್ರಕ್ರೀಯೆಯಲ್ಲಿ ಪಾಲ್ಗೊಂಡು ರೈತರ ವೈಯಕ್ತಿಕ ಹಾಗೂ ಬೆಳೆಗಳ ವಿವರ ಆ್ಯಪ್ ಮೂಲಕ ಮೊಬೈಲ್‌ನಲ್ಲಿ ದಾಖಲು ಮಾಡುವ ಪದ್ದತಿಯನ್ನು ತಿಳಿದುಕೊಂಡರು. ಅಲ್ಲದೇ ರೈತರೊಂದಿಗೆ ಸಮಗ್ರ ಕೃಷಿ ಬೆಳೆ ಪದ್ದತಿ ಹಾಗೂ ವರ್ಟಿಕಲ್ ಫಾರ್ಮಿಂಗ್(ಲಂಬ ಕೃಷಿ) ಕುರಿತು ಚರ್ಚೆ ಮಾಡಿದರು.
ಸರ್ಕಾರ ವಿಜ್ಞಾನಿಗಳ ಸಹಕಾರದೊಂದಿಗೆ ಹೊಸ ಸಂಶೋಧನೆ ಮಾಡಿ ಉತ್ತಮ ತಳಿ & ತಂತ್ರಜ್ಞಾನಗಳನ್ನು ಬಿಡುಗಡೆಗೊಳಿಸುತ್ತಿದೆ.ಆದ್ದರಿಂದ ರೈತ ಬಾಂಧವರು ಆಧುನಿಕ ಕೃಷಿಯೊಂದಿಗೆ ವೈಜ್ಞಾನಿಕವಾಗಿ ಕೃಷಿ ಕೈಗೊಳ್ಳಬೇಕೆಂದು ಕರೆ ನೀಡಿದರು.
ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಎಂ. ಎಸ್. ಬುಜರುಖ್ ಅವರು ಮಾತನಾಡಿ ಕೃಷಿ ಆಭಿಯಾನ ಕಾರ್ಯಕ್ರಮದ ಉದ್ದೇಶ ಹಾಗೂ ಬೆಳೆ ಸಮೀಕ್ಷೆ ಮೊಬೈಲ್‌ಆಪ್ ಬಳಸುವ ವಿಧಾನ, ಸಮೀಕ್ಷೆಯ ಉದ್ದೇಶ ಹಾಗೂ ಬೆಳೆ ವಿಮೆ ಕುರಿತು ವಿಸ್ತಾರವಾಗಿ ತಿಳಿಸಿದರು.
ಪ್ರಗತಿಪರ ರೈತರಾದ ಬಸಪ್ಪ ಝಳಕಿ, ಮಹಾದೇವ ಮೋಪಗಾರ, ಸದಾಶಿವ ಸಂತಿ, ಮಹಾಂತೇಶ ಮಾಳಗೌಡ, ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕರಾದ ಅಭಯ ಮೊರಬ, ಸಹಾಯಕ ತೋಟಗಾರಿಕೆ ಅಧಿಕಾರಿ ಈರಣ್ಣ ಹೊಸಮನಿ, ಕೃಷಿ ಅಧಿಕಾರಿ ಎಸ್ ಎಂ ಬಿರಾದಾರ, ಸಹಾಯಕ ಕೃಷಿ ಅಧಿಕಾರಿ ಬಿ ಪಿ ಚೌಗಲಾ, ಆತ್ಮಯೋಜನೆಯ ಅಧಿಕಾರಿಗಳಾದ ಕೆ ಎ ಜಮಖಂಡಿ, ಪ್ರವೀಣ ಕೊಪ್ಪದ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Soldier: ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ; ಮಹಾಲಿಂಗಪುರದ ಯೋಧ ಹುತಾತ್ಮ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.