![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Sep 11, 2020, 10:20 PM IST
ಮಹಾಲಿಂಗಪುರ: ಸಮೀಪದ ಘಟಪ್ರಭಾ ನದಿಯ ನಂದಗಾಂವ- ಅವರಾದಿ ಸೇತುವೆಯನ್ನು ಬೈಕ್ ಮೇಲೆ ದಾಟುವಾಗ ಯುವಕನೊಬ್ಬ ಘಟಪ್ರಭಾ ನದಿಯ ನೀರು ಪಾಲಾದ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.
ಬೈಕ್ ಸಮೇತ ನೀರು ಪಾಲಾದ ಯುವಕನನ್ನು ರಾಮದುರ್ಗ ತಾಲೂಕಿನ ಕುನಾಳ ಗ್ರಾಮದವನು. ತನ್ನ ಸ್ನೇಹಿತನ ಜತೆಗೆ ಗೋಕಾಕ ತಾಲೂಕಿನ ಢವಳೇಶ್ವರ ಮಾರ್ಗವಾಗಿ ಘಟಪ್ರಭಾ ನದಿ ದಾಟಿ ಮಹಾಲಿಂಗಪುರಕ್ಕೆ ಬರುತ್ತಿದ್ದ.
ಘಟಪ್ರಭಾ ನದಿಗೆ ಪ್ರವಾಹ ಬಂದು ಕಳೆದ ಮೂರು ದಿನಗಳಿಂದ ನಂದಗಾಂವ-ಅವರಾದಿ, ಅಕ್ಕಿಮರಡಿ ಸೇತುವೆಗಳು ಜಲಾವೃತವಾಗಿವೆ. ಶುಕ್ರವಾರ ಸಂಜೆ ಯುವಕ ಮತ್ತು ಆತನ ಸ್ನೇಹಿತ ಸೇರಿ ಘಟಪ್ರಭಾ ನದಿಯ ಸೇತುವೆ ಮೇಲೆ ಒಂದುವರೆ ಅಡಿ ನೀರು ಹರಿಯುತ್ತಿದ್ದರು ಸಹ ಅವರಾದಿ ಕಡೆಯಿಂದ ನಂದಗಾಂವ ಕಡೆಗೆ ಬೈಕ್ ಮೇಲೆ ನದಿದಾಟುವ ಸಾಹಸ ಮಾಡಿದ್ದಾರೆ. ನೀರು ರಭಸವಾಗಿ ಹರಿಯುತ್ತಿರುವ ಕಾರಣ ಸೇತುವೆ ಅರ್ಧ ದಾಟುವದರಲ್ಲಿ ಬೈಕ್ ಸಮೇತ ಇಬ್ಬರು ನೀರು ಪಾಲಾಗಿದ್ದಾರೆ. ಬೈಕ್ ಹಿಂದಿನ ಸವಾರ ಈಜಿ ಪಾರಾಗಿದ್ದಾನೆ. ಬೈಕ್ ಓಡಿಸುತ್ತಿದ್ದ ಯುವಕ ನದಿ ಪಾಲಾಗಿ ಮೃತಪಟ್ಟಿದ್ದಾರೆ.
ನದಿ ಪಾಲಾದ ಯುವಕ ಸದಾಶಿವನ ದೇಹ ಹಾಗೂ ಬೈಕ್ ಇನ್ನೂ ಪತ್ತೆಯಾಗಿಲ್ಲ. ಮೂಡಲಗಿ ತಾಲೂಕಿನ ಕುಲಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.