ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಪ್ರತಿಭಟನೆ
Team Udayavani, Nov 22, 2019, 11:22 AM IST
ಬಾಗಲಕೋಟೆ: ವಿಶ್ವಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ ಡಾ|ಬಿ.ಆರ್. ಅಂಬೇಡ್ಕರ ಅವರಿಗೆ ಅವಮಾನ ಮಾಡಿದ ಶಿಕ್ಷಣ ಸಚಿವ ಸುರೇಶಕುಮಾರ ಮತ್ತು ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಶಂಕರ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಸಮಿತಿಯ ಕಾರ್ಯಕರ್ತರು, ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆಆಗಮಿಸಿ ಧರಣಿ ನಡೆಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಸಂಚಾಲಕ ಪರಶುರಾಮ ಕಾಂಬಳೆ ಮಾತನಾಡಿ, ಜಗತ್ತಿನ ಸರ್ವ ಶ್ರೇಷ್ಠ ಸಂವಿಧಾನದಲ್ಲಿ ಒಂದಾದ ಭಾರತದ ಸಂವಿಧಾನದ ಕರಡು ರಚನೆಗೆ ಸಮಿತಿ ಇದ್ದಾಗಲೂ ಕಾರಣಾಂತರಗಳಿಂದ ಸಮಿತಿಯ ಯಾವ ಸದಸ್ಯರು ಅದರಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಳ್ಳಲಿಲ್ಲ,ಅಂಬೇಡ್ಕರ್ ಒಬ್ಬರೇ ರಚನೆಯ ಸಂಪೂರ್ಣ ಜವಾಬ್ದಾರಿ ಹೊರಬೇಕಾಯಿತು. ಇಡೀ ಸಂವಿಧಾನ ರಚನೆಯ ಶ್ರೇಯಸ್ಸನ್ನು ಸದಸ್ಯರೇ ಅಂಬೇಡ್ಕರ ಅವರಿಗೆ ಸಲ್ಲಿಸಿ ಗೌರವಿಸಿದ್ದಾರೆ.
ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಬಹುಪಾಲು ಪ್ರಶ್ನೆಗಳಿಗೆ ಅಂಬೇಡ್ಕರರೇ ಉತ್ತರಿಸಿ ಕರಡು ಪಟ್ಟಿಯಲ್ಲಿ ಸೇರಿಸಲು ಕಾರಣವಾಗಿರುವುದರಿಂದ ಆಗಿನ ಎಲ್ಲ ನಾಯಕರು ಅಂಬೇಡ್ಕರ ಅವರನ್ನು ಸಂವಿಧಾನದ ಶಿಲ್ಪಿ ಎಂದು ಕರೆದಿದ್ದಾರೆ. ಆದರೆ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಮಾತ್ರ ಭಾರತದ ಸಂವಿಧಾನವನ್ನು ಡಾ|ಬಿ.ಆರ್. ಅಂಬೇಡ್ಕರ್ ಒಬ್ಬರೆ ರಚಿಸಿಲ್ಲ. ಬೇರೆ ಬೇರೆ ಸಮಿತಿಗಳು ಬರೆದದ್ದನ್ನು ನೋಡಿ ಅವುಗಳನ್ನು ಒಟ್ಟುಗೂಡಿಸಿ ಸಂವಿಧಾನ ಅಂತಿಮ ಕರಡನ್ನು ತಯಾರಿಸುವುದು ಅವರ ಕಾರ್ಯವಾಗಿತ್ತು ಎಂದು ಹಸಿ ಸುಳ್ಳನ್ನು ಶಾಲೆಯ ಎಳೆ ಮಕ್ಕಳ ಮನಸ್ಸಿಗೆ ತುಂಬುವಂತದು ಮಹಾ ಅಪರಾಧ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಿಕ್ಷಣ ಸಚಿವ ಸುರೇಶಕುಮಾರ ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಶಂಕರ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಅಪ್ಪಸಿ ಕಾಂಬಳೆ, ರವಿ ಚಲವಾದಿ, ಶ್ಯಾಮರಾವ ಮಾದರ, ಮಲ್ಲು ಕಾಂಬಳೆ, ಯಲ್ಲಪ್ಪ ಕಾಂಬಳೆ, ರಮೇಶ ಮಾಂಗ, ರಾಜು ಪೊಳ, ಮುತ್ತು ಹರಿಜನ, ಪರಮಾನಂದ ಕಾಂಬಳೆ, ಕಾಸಿಂಅಲಿ ಗೊಠೆ, ಸಿಕಂದರ ಹುದ್ದಾರ, ಪ್ರಕಾಶ ಸರನಾಯಕ, ಮಾರುತಿ ವಾಲಿಕಾರ, ಮೈಬುಬಿ ಕುಡಚಿ, ಭೀಮಶಿ ವಡ್ಡರ, ಚಿನ್ನಪ್ಪ ಬಂಡಿವಡ್ಡರ, ಮಲ್ಲೇಶ ಗಾಡಿವಡ್ಡರ, ಸದಾಶಿವ ಐನಾಪುರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.