ಯೋಗದಲ್ಲಿ ದಾಖಲೆ ಬರೆದ ದಯಾನಂದ
ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ಸೇರ್ಪಡೆ
Team Udayavani, Jun 29, 2021, 5:46 PM IST
ಲೋಕಾಪುರ: ಯೋಗದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಹೆಬ್ಟಾಳ ಗ್ರಾಮದ ಗ್ರಾಮೀಣ ಯುವ ಪ್ರತಿಭೆ ದಯಾನಂದ ಕಾಡಪ್ಪ ಅಂಕಲಗಿ ಅವರ ಹೆಸರು ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿದೆ.
ಇಟ್ಟಿಗೆಯ ಮೇಲೆ ತಲೆಕೆಳಗೆ ಮಾಡಿ ಸುಮಾರು 2 ನಿಮಿಷಗಳವರೆಗೆ ಶಿರಶಾಸನದಲ್ಲಿ ನಿಲ್ಲುವ ಮೂಲಕ ದಾಖಲೆ ಮಾಡಿದ್ದಾರೆ. ಅನೇಕ ರಾಜ್ಯ-ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಪಡೆದಿರುವ ದಯಾನಂದ ಬೆಂಗಳೂರಿನಲ್ಲಿ ಯೋಗ ವ್ಯಾಸಂಗ ಮಾಡಿ ಅಧ್ಯಾತ್ಮ ಯೋಗ ಶಾಲೆಯಲ್ಲಿ ತರಬೇತಿದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಮ್ಮ ತಂದೆಯವರ ಆಶೀರ್ವಾದ- ಪ್ರೇರಣೆಯಿಂದ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಇತ್ತು. ಭಾರತೀಯ ಯೋಗ ದೇಶ-ವಿದೇಶಗಳಲ್ಲಿ ಪ್ರಚಾರ ಪಡಿಸುವುದು ನನ್ನ ಗುರಿಯಾಗಿದೆ. ನನ್ನ ಗ್ರಾಮದ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ತೆಗೆದುಕೊಂಡು ಹೋಗುವುದು ನನ್ನ ಆಸೆ. ಯೋಗ ಶಿಕ್ಷಕರಾದ ಅಪ್ಪಣ್ಣ ಬೀಳಗಿ, ಡಾ| ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಉಚಿತ ಊಟ, ವಸತಿ, ಬಟ್ಟೆ, ನೀಡುವುದರ ಮೂಲಕ ನನ್ನ ಯೋಗ ಸಾಧನೆಗೆ ಸಹಕಾರ ನೀಡುತ್ತಿರುವ ಡಾ|ಸುಬ್ಬುಬಯ್ನಾ (ಆನಂದ ವೆಂಕಟ ಸುಬ್ರಮಣ್ಯ) ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ದಯಾನಂದ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.