ಸೀಲ್‌ಡೌನ್ ಪ್ರದೇಶಗಳಿಗೆ ಡಿಸಿ ಭೇಟಿ
Team Udayavani, Apr 22, 2020, 2:59 PM IST
ಜಮಖಂಡಿ: ನಗರದಲ್ಲಿ ಮೂವರಿಗೆ ಕೋವಿಡ್ 19 ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತಷ್ಟು ಬಿಗಿ ಭದ್ರತೆ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾ. ರಾಜೇಂದ್ರ ಹೇಳಿದರು.
ನಗರದಲ್ಲಿ ಸೀಲ್‌ಡೌನ್ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಕೋವಿಡ್ 19 ಸೋಂಕಿತರು ವಾಸಿಸುವ ಪ್ರದೇಶ ಗಳಿಂದ ಯಾರೊಬ್ಬರು ಹೊರಗಡೆ ಬರದಂತೆ ಪೊಲೀಸ್ ಬ್ಯಾರಿಕೇಡ್ ನಿರ್ಮಿಸಿದೆ. ಸೀಲ್‌ಡೌನ್ ಪ್ರದೇಶದ ಜನರಿಗೆ ಅಗತ್ಯ ವಸ್ತುಗಳಾದ ತರಕಾರಿ, ಕಿರಾಣಿ ವಸ್ತು ಮತ್ತು ಹಾಲು ಮನೆ- ಮನೆಗೆ ತಲುಪಿಸುವಂತೆ ನಗರಸಭೆ ಪೌರಾಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಜೋಳದ ಬಜಾರ್, ಅವಟಿಗಲ್ಲಿ, ಪೊಲೀಸ್ ಕ್ವಾರ್ಟರ್ಗೆ ಭೇಟಿ ನೀಡಲಾಗಿದೆ. ತುರ್ತು ಅಗತ್ಯಗಳಿಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡುವ ಮೂಲಕ ಮಾಸ್ಕ್ ಧರಿಸಿಕೊಂಡು ಹೊರಗಡೆ ಆಗಮಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಲೋಕೇಶ ಜಗಲಾಸರ, ಉಪವಿಭಾಗಾಧಿಕಾರಿ ಡಾ| ಸಿದ್ದು ಹುಲ್ಲೊಳ್ಳಿ, ಡಿವೈಎಸ್‌ಪಿ ಆರ್.ಕೆ.ಪಾಟೀಲ, ತಹಶೀಲ್ದಾರ್ ಎಸ್. ಬಿ.ಇಂಗಳೆ, ನಗರಸಭೆ ಪೌರಾಯುಕ್ತ ರಾಮಕೃಷ್ಣ ಸಿದ್ದನಕೊಳ್ಳ, ಡಾ| ಜಿ.ಎಸ್.ಗಲಗಲಿ, ಸಿಪಿಐ ಧರೇಗೌಡ ಪಾಟೀಲ, ಠಾಣಾಅಧಿಕಾರಿಗಳಾದ ಬಸವರಾಜ ಅವಟಿ, ಗೋವಿಂದಗೌಡ ಪಾಟೀಲ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.