ಶಿಕ್ಷಕರ ವರ್ಗಾವಣೆಗೆ ಆಗ್ರಹ
•ಶಿಕ್ಷಕರ ವರ್ತನೆಯಿಂದ ಮಕ್ಕಳು ಶಾಲೆಗೆ ಹೋಗಲು ಹಿಂದೇಟು
Team Udayavani, Jun 4, 2019, 7:14 AM IST
ಬೀಳಗಿ: ಸುನಗ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಬೀಳಗಿ: ಹಲವಾರು ವರ್ಷಗಳಿಂದ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಿಲ್ಲ. ಇಲ್ಲಿರುವ ಶಿಕ್ಷಕ ಸಿಬ್ಬಂದಿಯೂ ಕೂಡ ಸರಿಯಾಗಿ ಪಾಠ ಮಾಡದೆ ಕಾಲಹರಣ ಮಾಡುತ್ತಾರೆ. ಶಾಲೆಯ ಮುಖ್ಯೋಪಾಧ್ಯಾಯಿನಿ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಎಲ್ಲ ಶಿಕ್ಷಕ ಸಿಬ್ಬಂದಿಯನ್ನು ವರ್ಗ ಮಾಡಿ ಉತ್ತಮ ಶಿಕ್ಷಕರನ್ನು ನೇಮಿಸಬೇಕೆಂದು ಒತ್ತಾಯಿಸಿ ಸುನಗ ಗ್ರಾಮಸ್ಥರು ಸೋಮವಾರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮದ ಮಹಿಳೆಯರು, ಪಾಲಕರು, ಎಸ್ಡಿಎಮ್ಸಿ ಪದಾಕಾರಿಗಳು ಶಾಲೆಯ ಹಳೆಯ ವಿದ್ಯಾರ್ಥಿಗಳು ಶಾಲೆಯ ಎದುರು ಧರಣಿ ಪ್ರಾರಂಭಿಸಿ ಶಿಕ್ಷಕ ಸಿಬ್ಬಂದಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಉಪಾಧ್ಯಕ್ಷ ಮಲ್ಲಪ್ಪ ತೋಳಮಟ್ಟಿ ಮಾತನಾಡಿ, ಇಲ್ಲಿ ಬಿಸಿಯೂಟದ ವ್ಯವಸ್ಥೆ ಹದಗೆಟ್ಟಿದೆ. ಶಾಲೆಯಲ್ಲಿನ ಕಂಪ್ಯೂಟರ್ ಬ್ಯಾಟರಿ, ಕ್ಯಾಮೆುರಾ, ಬಿಸಿಯೂಟ ತಟ್ಟೆಗಳು ಮಾಯವಾಗಿವೆ. ಈ ಹಿಂದೆ ಶಾಲೆಯು ಸುತ್ತಮುತ್ತಲಿನ ಹಳ್ಳಿಗಳಿಗೆ ಮಾದರಿಯಾಗಿತ್ತು. ಇಂದು ಶಿಕ್ಷಕ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಶಾಲೆಯ ವಾತಾವರಣ ಕೆಟ್ಟುಹೋಗಿದೆ. ಶಿಕ್ಷಣದ ಗುಣಮಟ್ಟ ಕುಸಿದು ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳುತ್ತಿವೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ, ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಯಲ್ಲಿ 264 ಮಕ್ಕಳ ದಾಖಲಾತಿ ಇದ್ದರೂ ಶಿಕ್ಷಕರ ವರ್ತನೆಯಿಂದ ಬೇಸತ್ತ ಅನೇಕ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುವಂತಾಗಿದೆ. ಮಕ್ಕಳ ಹಾಜರಾತಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಮಕ್ಕಳು ಗುಣಾತ್ಮಕ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಿಜ್ಞಾನ ಬೋಧಿಸುವ ಶಿಕ್ಷಕರ ನೇಮಕ ಮಾಡುವಂತೆ 11 ವರ್ಷಗಳಿಂದ ಕೇಳುತ್ತಿದ್ದರೂ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಗ್ರಾಮದ ಪ್ರಮುಖ ಯಲ್ಲಪ್ಪ ಗಾಮಾ ಆಕ್ರೋಶ ವ್ಯಕ್ತಪಡಿಸಿದರು.
264 ಮಕ್ಕಳಿರುವ ಶಾಲೆಯಲ್ಲಿ ಕೇವಲ 12 ಊಟದ ತಟ್ಟೆಗಳಿವೆ. 9 ಹಾಲು ಕುಡಿಯುವ ಗ್ಲಾಸುಗಳಿವೆ. ಮಕ್ಕಳು ಮಧ್ಯಾಹ್ನದ ಬಿಸಿಯೂಟ ಮಾಡಲು ಮನೆಯಿಂದಲೇ ಊಟದ ತಟ್ಟೆ ತರಬೇಕು. ಬಿಸಿಹಾಲು ಕುಡಿಯಲು ಗ್ಲಾಸುಗಳಿಲ್ಲದೆ ಮಕ್ಕಳು ತಾವು ತಂದಿರುವ ತಾಟಿನಲ್ಲಿಯೇ ಹಾಲು ಕುಡಿಯಬೇಕು. ಮಕ್ಕಳಿಗೆ ಇಲ್ಲಿ ಕಳಪೆ ಮಟ್ಟದ ಊಟ ನೀಡಲಾಗುತ್ತಿದೆ ಎಂದು ಶೇಖರ ಪಂಢರಿ ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಇಒ ಎಚ್.ಜಿ. ಮಿರ್ಜಿಯವರ ಸವåಜಾಯಿಷಿಗೆ ಗ್ರಾಮಸ್ಥರು ತೀವ್ರ ವಿರೋಧವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಡಿಡಿಪಿಐ ಕಚೇರಿ ಅಧಿಕಾರಿ ಎಂ.ಎ.ಬಾಳಿಕಾಯಿ ಮತ್ತು ತಹಶೀಲ್ದಾರ್ ಅಮರೇಶ ಬಿರಾದಾರ, ಜಿಲ್ಲಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಶಿಕ್ಷಕರನ್ನು ಒದಗಿಸಲಾಗುವುದು. ಗ್ರಾಮಸ್ಥರ ಲಿಖೀತ ಮನವಿಯನ್ನು ಆಧರಿಸಿ ಸಂಬಂಧಪಟ್ಟ ಶಿಕ್ಷಕ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷ ವಿಠಲ ಕೆರಿಕಾರ, ಕರಿಯಪ್ಪ ಬೂದಿಹಾಳ, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ ಕರಡಿಗುಡ್ಡ, ಶೇಖರ ಪಂಢರಿ, ಗ್ರಾಪಂ ಸದಸ್ಯ ಸಾಬಣ್ಣ ಬನೆಪ್ಪನವರ, ಲಕ್ಕಪ್ಪ ದೊಡಮನಿ, ಸೋಮಪ್ಪ ಬೂದಿಹಾಳ, ಅಶೋಕ ಕೋನಪ್ಪನವರ, ಲಕ್ಕವ್ವ ಫಕೀರಣ್ಣವರ, ಅನ್ನಪೂರ್ಣ ಕಂಬಾರ, ರೇಣುಕಾ ಕಿಲಾರಿ, ಜಕ್ಕವ್ವ ಧರಿಗೊಂಡ, ಮುತ್ತವ್ವ ದೇವಿನವರ, ರೇಣುಕಾ ತೋಳಮಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.