![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 7, 2019, 3:29 PM IST
ಹುನಗುಂದ: ಕಳೆದ ನಾಲ್ಕು ತಿಂಗಳ ಹಿಂದೆ ಪ್ರವಾಹಕ್ಕೆ ಸಿಕ್ಕು ನಲುಗಿದ್ದ ಈ ಭಾಗದ ಜನರು ಈಗ ಮಹಾಮಾರಿ ಡೆಂಘೀ ಹಾವಳಿಯಿಂದ ಭಯಭೀತರಾಗಿದ್ದಾರೆ. ಅದರಲ್ಲೂ ತಾಲೂಕಿನ ಬಿಸಲದಿನ್ನಿ ಗ್ರಾಮದಲ್ಲಿ ಡೆಂಘೀ ಹಾವಳಿ ಹೆಚ್ಚಾಗಿದೆ.
2,500 ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಕಳೆದ 15 ದಿನಗಳಲ್ಲಿ 80ರಿಂದ 100 ಜನರು ಡೆಂಘೀ ಜ್ವರದಿಂದ ಬಳಲುತ್ತಿದ್ದಾರೆ. ನಿತ್ಯ ಇಬ್ಬರು ಜ್ವರಕ್ಕೆ ತುತ್ತಾಗಿ ಹಾಸಿಗೆ ಹಿಡಿಯುತ್ತಿದ್ದಾರೆ. ವಾರದ ಹಿಂದೆ ಇದೇ ಗ್ರಾಮದಲ್ಲಿ ತೀವ್ರ ಜ್ವರದಿಂದ 16 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದು, 18 ಜನರ ರಕ್ತ ಪರೀಕ್ಷೆಯಲ್ಲಿ ಇಬ್ಬರಿಗೆ ಡೆಂಘೀ ಇರುವುದು ದೃಢಪಟ್ಟ ಮೇಲಂತೂ ಇಡೀ ಗ್ರಾಮದ ಜನರೇ ಆತಂಕದಲ್ಲಿದ್ದಾರೆ.
ಪ್ರತಿ ಮನೆಯಲ್ಲಿ ರೋಗಿ: ಇಡೀ ಬಿಸಲದಿನ್ನಿ ಗ್ರಾಮದ ಜನರೇ ಜ್ವರದಿಂದ ಬಳಲುತ್ತಿದ್ದು, ಪ್ರತಿಯೊಂದು ಮನೆಯಲ್ಲಿ ಒಬ್ಬರು ಅಥವಾ ಇಬ್ಬರು ಜ್ವರಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಚಿಕಿತ್ಸೆಗೆ ಹುನಗುಂದ, ಇಲಕಲ್ಲ, ಬಾಗಲಕೋಟೆ ಆಸ್ಪತ್ರೆಗಳಿಗೆ ಹೋಗಿ ಬರುವ ಜನರ ಸಂಖ್ಯೆಯಂತೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಪ್ರವಾಹದ ಕರಾಳ ದಿನಗಳು ಮಾಸುವ ಮುನ್ನವೇ ಡೆಂಘೀ ರೋಗ ಹಾವಳಿ ಅಧಿಕಗೊಂಡಿದೆ.
ಚರಂಡಿ–ಬಾವಿ ನೀರು ಕಾರಣ?: ಗ್ರಾಮದ ಬಹುತೇಕ ಚರಂಡಿಗಳು ನೀರು ತುಂಬಿ ಮುಂದೆ ಸಾಗದೇ ನಿಂತಲೇ ನಿಂತಿದ್ದು, ಈ ನೀರು ಮಲೀನಗೊಂಡು ಸೊಳ್ಳೆ ಉತ್ಪತ್ತಿಗೆ ಸಹಕಾರಿಯಾಗಿದೆ ಎನ್ನಲಾಗಿದೆ. ಇನ್ನು ಗ್ರಾಮದ ಸಮೀಪದಲ್ಲಿರುವ ನದಿಯ ತೀರ ಮತ್ತು ಹಳೆಯ ಬಾವಿಯೊಂದರ ಮಲೀನಗೊಂಡ ನೀರು ಮತ್ತಷ್ಟು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಈ ಸೊಳ್ಳೆಗಳು ಗ್ರಾಮದ ಜನರನ್ನು ಕಚ್ಚಿರುವುದರಿಂದ ಜ್ವರ ಉಲ್ಬನಗೊಂಡಿದೆ.
ಆರೋಗ್ಯ ಸಿಬ್ಬಂದಿ ವಾಸ್ತವ್ಯ: ತೀವ್ರ ಜ್ವರದಿಂದ ಸರ್ಕಾರಿ ಆಸ್ಪತ್ರೆಗೆ ಬಂದ 18 ಜನರ ರಕ್ತ ತಪಾಸಣೆ ವೇಳೆ ಇಬ್ಬರಿಗೆ ಡೆಂಘೀ ಇರುವುದುದೃಢಪಟ್ಟಿದೆ. ಇದರಿಂದ ತಾಲೂಕು ಆರೋಗ್ಯ ಕೇಂದ್ರದ ಸಿಬ್ಬಂದಿ ಎರಡು ದಿನಗಳಿಂದ ಬಿಸಲದಿನ್ನಿ ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಪ್ರತಿ ಮನೆ–ಮನೆಗಳಿಗೆ ತೆರಳಿ ಪ್ರತಿಯೊಬ್ಬರ ರಕ್ತ ತಪಾಸಣೆ ಮಾಡಿ ಔಷಧೋಪಚಾರ ಮಾಡುತ್ತಿದ್ದಾರೆ. ಆದರೂ ಡೆಂಘೀ ಜ್ವರ ಹರಡುತ್ತಿದ್ದು, ಆಸ್ಪತ್ರೆಗೆ ಜನರು ಹೋಗುವುದು ತಪ್ಪುತ್ತಿಲ್ಲ. ಇಡೀ ಗ್ರಾಮದಲ್ಲೀಗ ರೋಗದ ಭೀತಿಯುಂಟಾಗಿದೆ. ಗ್ರಾಪಂ ಅಧಿಕಾರಿಗಳು ಗ್ರಾಮದೊಳಗೆ ಮತ್ತು ಅಸ್ವಚ್ಛತೆಯಿಂದ ಕೂಡಿದ ಸ್ಥಳಗಳಲ್ಲಿ ಪೌಡರ್ ಸಿಂಪರನೆ ಮಾಡಿಸಿದ್ದಾರೆ. ಬೆಳಗ್ಗೆ ಮತ್ತು ಸಾಯಂಕಾಲ ಎರಡು ಬಾರಿ ಪಾಗಿಂಗ್ ಕೂಡಾ ಮಾಡಲಾಗುತ್ತಿದೆ.
ತಹಶೀಲ್ದಾರ್ ಭೇಟಿ: ನೂರಕ್ಕೂ ಹೆಚ್ಚು ಜನರು ಜ್ವರದಿಂದ ಬಳಲುತ್ತಿರುವ ಸುದ್ದಿ ತಿಳಿದ ತಹಶೀಲ್ದಾರ್ ಬಸವರಾಜ ನಾಗರಾಳ ಗ್ರಾಮಕ್ಕೆ ಭೇಟಿ ನೀಡಿ, ಸ್ವತ್ಛತೆ ಕುರಿತು ಪರಿಶೀಲನೆ ನಡೆಸಿದರು.ಮನೆಯೊಳಗಿನ ನೀರು ಸಂಗ್ರಹಿಸುವ ಬ್ಯಾರಲ್‌ಗಳನ್ನು ವಾರದಲ್ಲಿ ಒಂದು ದಿನಶುಚಿಗೊಳಿಸಬೇಕು. ನಂತರ ನೀರನ್ನು ಸಂಗ್ರಹಿಸಲು ಸಾರ್ವಜನಿಕರಿಗೆ ತಿಳಿಸುವುದರ ಜೊತೆಗೆ ಸೊಳ್ಳೆಗಳನ್ನು ಸಂಪೂರ್ಣ ಹೋಗಲಾಡಿಸಲು ಗ್ರಾಪಂ ಪಿಡಿಒ ಅವರಿಗೆ ನಿತ್ಯ ಪಾಗಿಂಗ್‌ಮಾಡಲು ಸೂಚಿಸಿದರು.
-ಮಲ್ಲಿಕಾರ್ಜುನ ಬಂಡರಗಲ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.