Bagalkote ಗ್ರಾಮೀಣರ ಅಭ್ಯುದಯಕ್ಕೆ ಬದ್ಧವಾದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ (ರಿ.) ಬಾಗಲಕೋಟೆ ಜಿಲ್ಲೆ

Team Udayavani, Nov 2, 2023, 1:00 PM IST

dhaBagalkote ಗ್ರಾಮೀಣರ ಅಭ್ಯುದಯಕ್ಕೆ ಬದ್ಧವಾದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ

ಗ್ರಾಮೀಣ ಭಾಗದ ಅಭ್ಯುದಯ ಆರ್ಥಿಕ ಸಬಲತೆ, ಕೃಷಿ ಅಭಿವೃದ್ಧಿ, ಸಾಮಾಜಿಕ ಕ್ಷೇತ್ರ, ಜನರ ಜೀವನ ಮಟ್ಟ ಸುಧಾರಣೆ ಮಾಡುವುದರೊಂದಿಗೆ ಹಲವಾರು ಸಮಾಜಮುಖೀ ಚಿಂತನೆಗಳೊಂದಿಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಾಗಲಕೋಟೆ ಜಿಲ್ಲೆಯಲ್ಲಿ 11ನೇ ವರ್ಷಕ್ಕೆ ಪಾದಾರ್ಪಣೆಗೈದಿದೆ.

ಬಾಗಲಕೋಟೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ದುರ್ಬಲ ಮಹಿಳೆಯರ ಸಂಘಟನೆ, ಕೃಷಿಕರ ಸಂಘಟನೆ, ಹೈನುಗಾರಿಕೆ, ಕುರಿ ಸಾಕಾಣಿಕೆ, ಸ್ವ ಉದ್ಯೋಗ ಚಟುವಟಿಕೆಗಳು, ಉಳಿತಾಯ ಮತ್ತು ಸ್ವಉದ್ಯೋಗಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಜಿಲ್ಲಾ ವ್ಯಾಪ್ತಿಯಲ್ಲಿ 178 ಕಾಯಂ ಹಾಗೂ 1163 ಅರೆಕಾಲಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತನ್ನದೇಯಾದ ಕೊಡುಗೆ ನೀಡುತ್ತಿದೆ.

ಸಂಘಟನೆಯ ಉಳಿತಾಯ: ಸಣ್ಣ ಕೃಷಿಕರ, ದುರ್ಬಲ ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕ ಸ್ವಾವಲಂಬನೆ ಸಂಘಟನಾ ಮನೋಭಾವ ಬೆಳೆಸಲು ಪ್ರೇರಣೆ ನೀಡುತ್ತಿದೆ. ಒಟ್ಟು 19,783 ಸ್ವಸಹಾಯ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, 1,59,426 ಸದಸ್ಯರು ಸೇರ್ಪಡೆಗೊಂಡಿದ್ದಾರೆ. ಸಂಘದ ಸದಸ್ಯರಿಗೆ ಉಳಿತಾಯದ ಮಹತ್ವ-ಉಪಯೋಗ ಅರಿವು ಮೂಡಿಸಿ ಸದಸ್ಯರಿಗೆ ವಾರಕ್ಕೆ 10 ರೂಪಾಯಿ ಉಳಿತಾಯ ಮಾಡಲು ಪ್ರೇರಣೆ ನೀಡಿ ಇಲ್ಲಿಯವರೆಗೆ 60 ಕೋಟಿ ರೂ.ಉಳಿತಾಯ ಮಾಡಿ ಈ ಉಳಿತಾಯವೇ ಸಂಘದ ವ್ಯವಹಾರಕ್ಕೆ ಪ್ರಮುಖ ಆಧಾರವಾಗಿದೆ.

ಒಕ್ಕೂಟಗಳ ರಚನೆ, ಬಲರ್ವಧನೆ: ಸ್ವಸಹಾಯ ಸಂಘಗಳ ಗುಣಮಟ್ಟದ ನಿರ್ವಹಣೆ ಯೋಜನೆಯ ಸೌಲಭ್ಯ, ಸರಕಾರಿ ಸೌಲಭ್ಯಗಳ ಒದಗಿಸುವುದು ನಿರಂತರ ಅನುಪಾಲನೆ ಹಾಗೂ ಪ್ರಾದೇಶಿಕ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಸಹಕಾರ ನೀಡಲು 25 ರಿಂದ 30 ಸಂಘಗಳ ನಿರ್ವಹಣೆಗೆ ಅನುಕೂಲಕ್ಕೆ ಒಕ್ಕೂಟಗಳ ರಚಿಸಲಾಗಿದ್ದು, ಜಿಲ್ಲಾದ್ಯಂತ 451 ಒಕ್ಕೂಟಗಳು ಕಾರ್ಯ ನಿರ್ವಹಿಸುತ್ತಿದ್ದು, ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನ, ಸಂಘಗಳ ಗುಣಮಟ್ಟ ಸುಧಾರಣೆಗೆ ವಿಶೇಷ ಪಾತ್ರ ವಹಿಸಿದೆ.

ಹಿಡುವಳಿ ಯೋಜನೆ : ಸ್ವಸಹಾಯ ಸಂಘಗಳ ಸದಸ್ಯರು ತಮ್ಮ ಕುಟುಂಬದ ಅಭಿವೃದ್ಧಿಗೆ ಕೆಲಸಗಳ ಪಟ್ಟಿ, ಹಿಡುವಳಿ ಕೈಪಿಡಿ ದಾಖಲಿಸಿ ತಮ್ಮ ದುಡಿಮೆಗೆ ಸರಕಾರದಿಂದ ಸಿಗುವ ಸೌಲಭ್ಯ, ಸಂಘ ನೀಡುವ ಪ್ರಗತಿನಿಧಿ ಯ ಮೂಲಕ ಹಿಡುವಳಿ ಮತ್ತು ವಾರ್ಷಿಕ ಯೋಜನೆ ಗುರಿ ಸಾಧನೆಗೆ ವಿಶೇಷ ಗಮನ ನೀಡಿ, ಸದಸ್ಯರು ನಿಗದಿತ ಅವ ಧಿಯಲ್ಲಿ ಕುಟುಂಬದ ಅಭಿವೃದ್ಧಿ ಕೆಲಸದ ಗುರಿ ಸಾಧನೆಗೆ ಪೂರಕವಾಗಿದೆ.

ಕೃಷಿ-ವಿವಿಧ ಸ್ವಉದ್ಯೋಗ ತರಬೇತಿ :
ಗ್ರಾಮೀಣ ಕೃಷಿಕರು ಸುಸ್ಥಿರತೆಯ ಪ್ರಾವೀಣ್ಯತೆ ಪಡೆಯಲು ಅಧ್ಯಯನ ಪ್ರವಾಸ ಹಾಗೂ ರೈತ ಕ್ಷೇತ್ರ ಪಾಠಶಾಲೆ ತರಬೇತಿ ನೀಡಲಾಗುತ್ತಿದೆ. ಈವರೆಗೆ 434 ಅಧ್ಯಯನ ಪ್ರವಾಸ, 1258 ರೈತ ಕ್ಷೇತ್ರ ಪಾಠಶಾಲೆ ತರಬೇತಿ ನೀಡಲಾಗಿದ್ದು, ಇದರಿಂದ ರೈತರು ಕೃಷಿ ಹೈನುಗಾರಿಕೆ, ಸ್ವಉದ್ಯೋಗಕ್ಕೆ ಪೂರಕವಾಗಿ ಮಾಹಿತಿ ಪಡೆದು ಸಂಘದಿಂದ ಪ್ರಗತಿನಿಧಿ  ಪಡೆದು ಸ್ವಉದ್ಯೋಗ ಮಾಡುತ್ತಿದ್ದಾರೆ. ರೈತರಲ್ಲಿ ಉತ್ತಮ ಬೀಜದ ಆಯ್ಕೆ ಸುಸ್ಥಿರ ಕೃಷಿಯ ಜ್ಞಾನ ವಿವಿಧ ಬೆಳೆಗಳ ಪರಿಚಯ ಮಾರುಕಟ್ಟೆ ವ್ಯವಸ್ಥೆ ಬೆಳೆಗಳ ನಿರ್ವಹಣೆ ಮುಂತಾದ ವಿಶೇಷ‌ ಜ್ಞಾನ ಪಡೆದು ಯೋಜನೆ ಪ್ರಗತಿನಿಧಿ ಪಡೆದು ವಿವಿಧ ಕೃಷಿ ಚಟುವಟಿಕೆ ಮೂಲಕ ಕೃಷಿ ಮಾಡುತ್ತಿರುವ 6654 ಫಲಾನುಭವಿಗಳಿಗೆ 132,66,850 ರೂ. ಅನುದಾನ ನೀಡಿ ಪ್ರೇರಣೆ ನೀಡಲಾಗುತ್ತಿದೆ.

ರೈತೋಪಕರಣ ಬಾಡಿಗೆ ಕೇಂದ್ರ :
ಸರಕಾರ ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಭಾಗಿತ್ವದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೃಷಿ ಆಧುನಿಕ ಯಂತ್ರಗಳ ಕೊರತೆ ನೀಗಿಸುವ ಉದ್ದೇಶದಿಂದ ಜಿಲ್ಲೆಯ ಅಮೀನಗಡ, ತೇರದಾಳ, ಅನಗವಾಡಿ, ಸಾವಳಗಿ, ಕಲಾದಗಿ, ಗುಳೇದಗುಡ್ಡ, ಲೋಕಾಪೂರ ವ್ಯಾಪ್ತಿಯ 7 ಕೇಂದ್ರಕ್ಕೆ 5.89 ಕೋಟಿ ರೂ. ಮೌಲ್ಯದ ಯಂತ್ರೋಪಕರಣ ರೈತರಿಗೆ ಕಡಿಮೆ ಬಾಡಿಗೆಯಲ್ಲಿ ನೀಡಲಾಗುತ್ತಿದೆ. 53,495 ರೈತರು ಯೋಜನೆಯ ಪ್ರಯೋಜನ ಪಡೆದಿದ್ದಾರೆ.

ಪರ್ಯಾಯ ಇಂಧನ: ಕೆಲ ಗ್ರಾಮಗಳಲ್ಲಿ ವಿದ್ಯುತ್‌ ಸಮಸ್ಯೆ ಇರುವ ಕುಟುಂಬಗಳಿಗೆ 4.85 ಕೋಟಿ ರೂ. ವೆಚ್ಚದಲ್ಲಿ ಸೋಲಾರ್‌ ದೀಪ, ವಾಟರ್‌ ಹೀಟರ್‌ ಮತ್ತು ಉದ್ಯೋಗಕ್ಕೆ ಯಂತ್ರೋಪಕರಣ, 3.47 ಕೋಟಿ ರೂ. ವೆಚ್ಚ ಮಾಡಿ 14,926 ಬಡವರಿಗೆ ಅಡುಗೆ ಅನುಕೂಲಕ್ಕೆ ಪರಿಸರ ಸ್ನೇಹಿ ಗ್ರೀನ್‌ವೇ ಕುಕ್ಕರ್‌ ಸ್ಟೋ ವಿತರಿಸಲಾಗಿದೆ.

ಕೆರೆಗಳ ಪುನಶ್ಚೇತನ : ಗ್ರಾಮೀಣ ಜನರಿಗೆ ನೀರು ಪೂರೈಸಲು ಕೆರೆಗಳು ಜೀವಾಳವಾಗಿದ್ದು, ಗ್ರಾಮೀಣ ಜನಜೀವನ ಹೆಚ್ಚಾಗಿ ಕೆರೆಗಳ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಜಿಲ್ಲಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನಮ್ಮೂರು ನಮ್ಮ ಕೆರೆ ಎಂಬ ಕಾರ್ಯಕ್ರಮದಡಿ 1.19 ಕೋಟಿ ರೂ. ವೆಚ್ಚದಲ್ಲಿ 15 ಕೆರೆ ಕಾಮಗಾರಿ ಮಾಡಿಸಿ ಸ್ಥಳಿಯ ರೈತರಿಗೆ ಕೃಷಿ ಬಳಕೆಗೆ ಅನುಕೂಲವಾಗುವಂತೆ ಕೆರೆ ಪುನಶ್ಚೇತನ ಮಾಡಲಾಗಿದೆ. ರಾಜ್ಯ ಸರಕಾರ ಸಹಭಾಗಿತ್ವದಡಿ ಕೆರೆ ಸಂಜೀವಿನಿ ಕಾರ್ಯಕ್ರಮ ಜಿಲ್ಲೆಯಲ್ಲಿ ಪಾಳು ಬಿದ್ದ ಕೆರೆ ಹೂಳೆತ್ತುವ ಮೂಲಕ ಪುನಶ್ಚೇತನ ನೀಡಲಾಗುತ್ತಿದೆ.

ಜ್ಞಾನ ವಿಕಾಸ-ಮಾಸಾಶನ: ದುರ್ಬಲ ಮಹಿಳೆಯ ಕುಟುಂಬ ನಿರ್ವಹಣೆ, ವ್ಯವಹಾರ ಜ್ಞಾನ, ಶಿಕ್ಷಣ, ಪೌಷ್ಟಿಕ ಆಹಾರ, ವೈಯಕ್ತಿಕ ಶುಚಿತ್ವ, ಪರಿಸರ ಪ್ರಜ್ಞೆ, ಸ್ವಉದ್ಯೋಗ ಗುರಿ ಇರಿಸಿಕೊಂಡು ಮಾತೋಶ್ರೀ ಡಾ|ಹೇಮಾವತಿ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 150 ಜ್ಞಾನ ವಿಕಾಸ ಕೇಂದ್ರದಲ್ಲಿ 7459 ಮಹಿಳಾ ಸದಸ್ಯರ ತರಬೇತಿ ಮೂಲಕ ಪ್ರೇರಣೆ ನೀಡಿ, ಸಾಕಷ್ಟು ಮಹಿಳೆಯರು ತಮ್ಮ ಜೀವನ ಸುಧಾರಣೆ ಕಂಡುಕೊಂಡು ಸ್ವಉದ್ಯೋಗ ಮಾಡುವ ಮೂಲಕ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ.

ಇನ್ನು ಆಸರೆ ಇಲ್ಲದ ಬಡ ವಯೋವೃದ್ಧರಿಗೆ ಮತ್ತು ವಿಧವೆಯರಿಗೆ ಜೀವನ ನಿರ್ವಹ‌ಣೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲೆಯ 388 ಕುಟುಂಬಗಳಿಗೆ ಪ್ರತಿ ತಿಂಗಳು 750 ರಿಂದ 1,000 ರೂ. ಮಾಸಾಶನ ನೀಡುತ್ತಿದ್ದು, ಈವರೆಗೆ 678 ಸದಸ್ಯರಿಗೆ ಒಟ್ಟು 3,32,350 ರೂ. ಮಾಸಾಶನ ನೀಡಲಾಗಿದೆ. ಪ್ರತಿ ವರ್ಷ ಮಾಸಾಶನ ಫಲಾನುಭವಿಗಳಿಗೆ ಹಾಗೂ ನಿರ್ಗತಿಕರಿಗೆ ವಾತ್ಸಲ್ಯ ಕಿಟ್‌(3 ತಿಂಗಳಿಗೆ ಆಗುವಷ್ಟು ಆಹಾರ, ಬಟ್ಟೆ, ಪಾತ್ರೆ) ನೀಡಲಾಗುತ್ತಿದೆ.

ವಾತ್ಸಲ್ಯ ಮನೆ ನಿರ್ಮಾಣ : ಮಾಸಾಶನ ಫಲಾನುಭವಿಗಳಿಗೆ ಆರೈಕೆ ಮಾಡಲು ರಕ್ತ ಸಂಬಂಧಿ ಗಳಿಲ್ಲದೆ ಹಾಗೂ ಸುಸಜ್ಜಿತ ಮನೆಗಳಿಲ್ಲದೆ ಕಷ್ಟದಲ್ಲಿ ಜೀವನ ನಡೆಸುತ್ತಿರುವ ವಯೋವೃದ್ಧರಿಗೆ ಅನುಕೂಲಕ್ಕೆ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಾ|ಹೇಮಾವತಿ ಅವರ ಆಶಯದಂತೆ ಜಿಲ್ಲೆಯಲ್ಲಿ 4 ಸುಸಜ್ಜಿತ ಸೌಲಭ್ಯಗಳುಳ್ಳ ವಾತ್ಸಲ್ಯ ಮನೆ ನಿರ್ಮಿಸಿಕೊಡಲಾಗಿದೆ.

ಶ್ರದ್ಧಾ ಕೇಂದ್ರಗಳ ಸ್ವಚ್ಛತೆ: ಧಾರ್ಮಿಕ ಕೇಂದ್ರ ಗ್ರಾಮಗಳ ಜೀವಾಳ. ಇವುಗಳನ್ನು ಸ್ವಚ್ಛವಾಗಿ ನಿರ್ವಹಿಸಿದರೆ ಉತ್ತಮ ಪರಿಸರ ಮತ್ತುಸ್ವಚ್ಛತಾ ಮನೋಭಾವ ಮೂಡುತ್ತದೆ. ಶ್ರದ್ಧಾ ಕೇಂದ್ರಗಳ ಬಗ್ಗೆ ಜನರು ಪವಿತ್ರ ಭಾವನೆ ಇಟ್ಟುಕೊಂಡಿರುತ್ತಾರೆ. ದೇವಾಲಯಗಳು ಅಶುಚಿತ್ವದಿಂದ ಕೂಡಿರುವ ಅವಶ್ಯಕತೆ ಇದೆ ಎಂಬ ವಿಚಾರ ಮನಗಂಡು ಡಾ| ವೀರೇಂದ್ರ ಹೆಗ್ಗಡೆ ಹಾಗೂ ಡಾ|ಹೇಮಾವತಿ ಹೆಗ್ಗಡೆ ಮಾರ್ಗದರ್ಶನದಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ಥಳೀಯ ಜನರ ಸಹಭಾಗಿತ್ವದಲ್ಲಿ 2373 ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯವನ್ನು ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮಕರ ಸಂಕ್ರಮಣ ದಿನದಂದು ಅಭಿಯಾನ ಕೈಗೊಳ್ಳಲಾಗುತ್ತಿದೆ.

ಸಮುದಾಯ ಅಭಿವೃದ್ಧಿ ಕಾರ್ಯಗಳು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ಳಿ ಹಬ್ಬದ ಪ್ರಯುಕ್ತ ಯೋಜನೆಯ ಪಾಲುದಾರ ಕುಟುಂಬದ 934 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಅನುಕೂಲಕ್ಕೆ 99.69 ಲಕ್ಷ ರೂ. ಸುಜ್ಞಾನನಿಧಿ ಶಿಷ್ಯವೇತನ ನೀಡಲಾಗುತ್ತಿದೆ. ಜ್ಞಾನದೀಪ ಹೆಸರಿನಲ್ಲಿ ಹಿಂದುಳಿದ ಪ್ರದೇಶದ ಸರಕಾರಿ ಅಥವಾ ಅನುದಾನಿತ ಶಾಲೆಗೆ ಶಿಕ್ಷಕರ ಒದಗಿಸಿ ಶಿಕ್ಷಕರ ಕೊರತೆ ನೀಗಿಸಿ ವಿದ್ಯಾರ್ಥಿ ಮೌಲ್ಯಯುತ ಶಿಕ್ಷಣ ನೀಡಲು 35 ಶಾಲೆಗಳಿಗೆ 17,64,000 ರೂ. ವೆಚ್ಚದಲ್ಲಿ 315 ಬೆಂಚ್‌ ಅನುಕೂಲ ಮಾಡಿಕೊಡಲಾಗಿದೆ.

ಜ್ಞಾನತಾಣ: ಕೋವಿಡ್‌ ಸಂದರ್ಭದಲ್ಲಿ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ಪಡೆಯಲು ಸೌಲಭ್ಯಗಳ ಕೊರತೆಯನ್ನು ಮನಗಂಡು ಜಿಲ್ಲೆಯ ಸದಸ್ಯರ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ 297 ಟ್ಯಾಬ್‌, 114 ಲ್ಯಾಪ್‌ಟಾಪ್‌ ಒದಗಿಸಿ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಲಾಗಿದೆ.

ಜನಮಂಗಳ: ಪ್ರತಿಯೊಬ್ಬ ಮನುಷ‌Âನಿಗೆ ಸಮಾಜದಲ್ಲಿ ಸ್ವತಂತ್ರವಾಗಿ ಬದುಕಲು ಅವಕಾಶವಿದ್ದು, ಕೆಲ ಜನರು ಅಂಗವೈಕಲ್ಯ, ಅನಾರೋಗ್ಯ ಸಮಸ್ಯೆ, ಅಪಘಾತದಿಂದ ಬಳಲುತ್ತಿರುವ ಅಶಕ್ತರಿಗೆ ಹಾಗೂ ವಿಕಲಚೇತನರಿಗೆ ಸಹಾಯ ನೀಡುವ ನಿಟ್ಟಿನಿಂದ 7.94 ಲಕ್ಷ ರೂ. ಮೌಲ್ಯದ 361 ಫಲಾನುಭವಿಗಳಿಗೆ ವಾಕರ್‌, ವಾರ್‌ ಬೇಡ್‌ ವ್ಹೀಲ್‌ಚೇರ್‌ ಉಚಿತವಾಗಿ ನೀಡಲಾಗಿದೆ.

ಗ್ರಾಮ ಕಲ್ಯಾಣ ಯೋಜನೆ-ದೇವಸ್ಥಾನ ಜೀರ್ಣೋದ್ಧಾರ : ಗ್ರಾಮ ಕಲ್ಯಾಣ ಯೋಜನೆಯಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ನಿರ್ಮಾಣ ಮತ್ತು ಯಂತ್ರೋಪಕರಣಕ್ಕೆ 28ಲಕ್ಷ ರೂ. ಅನುದಾನ ನೀಡಲಾಗಿದೆ. ಜಿಲ್ಲೆಯ 116 ದೇವಸ್ಥಾನ ಜೀರ್ಣೋದ್ಧಾರಕ್ಕೆ 1.40 ಕೋಟಿ ರೂ. ಅನುದಾನ ನೀಡಲಾಗಿದೆ.

ಸಮಾಜದಲ್ಲಿ ಮದ್ಯಪಾನಕ್ಕೊಳಗಾದ ಕುಟುಂಬದ ಕಷ್ಟ ಮನಗಂಡು ಡಾ|ವೀರೇಂದ್ರ ಹೆಗ್ಗಡೆ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ವೇದಿಕೆ ಜನರ ಸಂಘಟನೆ ರಚಿಸಿ ರಾಜ್ಯದಲ್ಲಿ 33 ಜಿಲ್ಲಾ ವೇದಿಕೆ ರಚಿಸಲಾಗಿದೆ. ಜಿಲ್ಲಾ ಜನಜಾಗೃತಿ ವೇದಿಕೆ ಮೂಲಕ 6 ತಾಲೂಕುಗಳಲ್ಲಿ 28 ಮದ್ಯವರ್ಜನ ಶಿಬಿರ ಆಯೋಜನೆ ಮಾಡಿ 2131 ಜನರನ್ನು ವ್ಯಸನಮುಕ್ತರನ್ನಾಗಿ ಮಾಡಿ ನವಜೀವನ ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಲಾಗಿದೆ. ಪಾನಮುಕ್ತ ನವಜೀವನ ಸದಸ್ಯರಿಗೆ ಸ್ವಉದ್ಯೋಗಕ್ಕೆ ಪ್ರೇರಣೆ ನೀಡುವ ಸಲುವಾಗಿ ಅಭಿರುಚಿಗೆ ತಕ್ಕಂತೆ ತರಬೇತಿ ನೀಡಿ ಸ್ವಾವಲಂಬನೆ ಜೀವನ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಶಾಲಾ ಮಕ್ಕಳಿಗೆ ದುಶ್ಚಟಗಳ ವಿರುದ್ಧ ಜಾಗೃತಿ ಜಾಥಾ, ಸಾಕ್ಷ್ಯಚಿತ್ರಗಳ ಮೂಲಕ ಸ್ವಾಸ್ತ್ಯ ಸಂಕಲ್ಪ ಹಾಗೂ ಗಾಂಧಿ ಜಯಂತಿಯಂದು ಸಮುದಾಯ ಜನರಲ್ಲಿ ದುಶ್ಚಟ ವಿರುದ್ಧ ಜನಜಾಗೃತಿ ಜಾಥಾ ಮತ್ತು ಪಾನಮುಕ್ತರ ಅಭಿನಂದನಾ ಸಮಾವೇಶ ನಡೆಸಿ ಜಾಗೃತಿ ಮೂಡಿಸಲಾಗಿದೆ.

ಲಾಭಾಂಶ ವಿತರಣೆ: ಜಿಲ್ಲಾ ವ್ಯಾಪ್ತಿಯ ಸ್ವಸಹಾಯ ಸಂಘಗಳು ಮಾಡಿದ ಉಳಿತಾಯ ಹಾಗೂ ಅವರು ಮಾಡಿದ ಪ್ರಗತಿನಿಧಿ ವ್ಯವಹಾರಗಳ ಆಧಾರದ ಮೇಲೆ ಸಂಘಕ್ಕೆ ಬಂದಿರುವ ಲಾಭದ ಮೊತ್ತ 8818 ಸಂಘಗಳಿಗೆ 19.91 ಕೋಟಿ ಲಾಭಾಂಶ ನೀಡಲಾಗಿದೆ.

ಸಾಮಾನ್ಯ ಸೇವಾಕೇಂದ್ರ: ಸರಕಾರದ ವಿವಿಧ ಯೋಜನೆಯ ಲಾಭ ಪಡೆಯಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲೆಯಲ್ಲಿ 276 ಎಸ್‌ಸಿಎಸ್‌ ಕೇಂದ್ರ ತೆರೆದು ಉದ್ಯೋಗ ನೀಡಲಾಗಿದೆ. 2,90,299 ವಿವಿಧ ಸರಕಾರಿ ಸೌಲಭ್ಯ ಕುರಿತಾದ ಸೇವೆ ಜನರಿಗೆ ನೀಡುತ್ತ ಬಂದಿದೆ. ಗ್ರಾಮೀಣ ಭಾಗದ ಜನರಿಗೆ ಕಾನೂನು ಸಲಹೆಗಳ ಬಗ್ಗೆ ಹಾಗೂ ಅದರ ಉಪಯುಕ್ತತೆಯ ಜಾಗೃತಿ ಮೂಡಿಸಲಾಗಿದೆ. ಕೃಷಿ ವಿಜ್ಞಾನಿಗಳ ಮೂಲಕ ಕೃಷಿ ಉತ್ಪಾದನೆ ಹೆಚ್ಚಳ ಹಾಗೂ ಗುಣಮಟ್ಟದ ಬೆಳೆ ಬೆಳೆಯಲು ಮಾಹಿತಿ ನೀಡಲಾಗಿದೆ.

ಪ್ರಗತಿನಿಧಿ ಡಿಜಟಲೀಕರಣ: ಯೋಜನೆಯ ಪಾಲುದಾರ ಸಂಘದ ಸದಸ್ಯರಿಗೆ ತಮ್ಮ ಚಟುವಟಿಕೆ ನಿರ್ವಹಣೆಗೆ ಅಗತ್ಯವಿರುವ ಹಣವನ್ನು ಬ್ಯಾಂಕುಗಳ ಮೂಲಕ ಪ್ರಗತಿನಿಧಿ ನೀಡಲಾಗಿದೆ. ಪ್ರಗತಿನಿಧಿ ವಿತರಣೆ ಕ್ರಮವನ್ನು ಸರಳೀಕರಣ ಹಾಗೂ ಡಿಜಟಲೀಕರಣ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಶೇಷ‌ವಾದ ಎಸ್‌ ಕೆ-21 ಆಪ್‌ ತಯಾರಿಸಿ ಸದಸ್ಯರಿಗೆ ಮೊಬೈಲ್‌ ಇನ್‌ಸ್ಟಾಲ್‌ ಮಾಡಿ ಉಪಯುಕ್ತತೆ ಕುರಿತು ತರಬೇತಿ ನೀಡಲಾಗಿದೆ. ಸದಸ್ಯರು ತಮಗೆ ಬೇಕಾದ ಪ್ರಗತಿನಿಧಿ  ಬೇಡಿಕೆಯ ಮಾಹಿತಿ ನೇರವಾಗಿ ಯೋಜನೆಯ ಅಧಿಕಾರಿಗಳಿಗೆ ತಮ್ಮ ಮೊಬೈಲ್‌ ಮೂಲಕ ತಲುಪಿಸಲು ಸಹಕಾರಿ ಹಾಗೂ ಕ್ಲಿಪ್ತ ಸಮಯದಲ್ಲಿ ಮಂಜೂರಾತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಕಿರು ಉದ್ಯಮಗಳಿಗೆ ನೆರವು : ಖಐಈಆಐ ಸಂಸ್ಥೆಯ ನೆರವಿನೊಂದಿಗೆ ಕಡಿಮೆ ಬಡ್ಡಿ ದರದಲ್ಲಿ 478 ಸದಸ್ಯರಿಗೆ 16 ಕೋಟಿ ರೂ. ಸಾಲ ಕಿರು ಉದ್ಯಮಕ್ಕೆ ನೀಡುವುದರ ಮೂಲಕ ಸ್ವಉದ್ಯೋಗಕ್ಕೆ ಉತ್ತೇಜನ ನೀಡಲಾಗಿದೆ.

ಲೋಕೋಸ್‌ ಕಾರ್ಯಕ್ರಮ: ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಅಭಿಯಾನ ವನ್ನು ರಾಷ್ಟ್ರೀಯ ಕಾರ್ಯಕ್ರಮ ಕರ್ನಾಟಕದಲ್ಲಿ ಅನುಷ್ಠಾನವಾಗಿರುತ್ತದೆ. ನಮ್ಮ ಜಿಲ್ಲಾ ವ್ಯಾಪ್ತಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘಗಳ ವಿವರಗಳನ್ನು ಲೋಕೋಸ್‌ ಸಾಫ್ಟ್‌ವೇರ್‌ ಎಂಟ್ರಿ ಮಾಡಿಸುವ ಮೂಲಕ ಸಂಘಗಳಿಗೆ ಸಾಲದ ಮೇಲೆ ಬಡ್ಡಿ ರಿಯಾಯತಿ, ಸ್ವಉದ್ಯೋಗಕ್ಕೆ ತರಬೇತಿ ದೊರಕಿಸಲಾಗಿದೆ. ಇದರಿಂದ 3 ಲಕ್ಷದವರೆಗಿನ ಸಂಘದ ಸಾಲಕ್ಕೆ ಬಡ್ಡಿ ರಿಯಾಯಿತಿ ನೀಡಲಾಗುತ್ತಿದೆ.

ಶೌರ್ಯ ವಿಪತ್ತು ನಿರ್ವಹಣೆ
ಅತಿವೃಷ್ಟಿ, ಪ್ರವಾಹ, ಭೂಕುಸಿತ, ದುರಂತ, ಅಪಘಾತದ ಪ್ರದೇಶಗಳಿಗೆ, ಸಮಸ್ಯೆಗೊಳಗಾದ ಜನರಿಗೆ ತುರ್ತು ಸಹಾಯ ಒದಗಿಸಲು ಗ್ರಾಮಾಭಿವೃದ್ಧಿ ಯೋಜನೆಯಿಂದ 6 ತಾಲೂಕಿನಲ್ಲಿ 526 ಸ್ವಯಂ ಸೇವಕರನ್ನೊಳಗೊಂಡ ಶೌರ್ಯ ವಿಪತ್ತು ನಿರ್ವಹಣಾ ಘಟಕ ಆರಂಭಿಸಿ, ಈ ಸ್ವಯಂ ಸೇವಕರಿಗೆ ಕೇಂದ್ರ ಸರಕಾರದ ಎನ್‌ಡಿಆರ್‌ಡಿಎಫ್‌ ಹಾಗೂ ರಾಜ್ಯ ಸರಕಾರದ ಎಸ್‌ಡಿಆರ್‌ಡಿಎಫ್‌ ತಂಡದಿಂದ ಸೂಕ್ತ ತರಬೇತಿ ನೀಡಲಾಗಿದೆ.

ಆರೋಗ್ಯ ರಕ್ಷಾ ವಿಮಾ
ಯೋಜನೆಯ ಪಾಲುದಾರ ಸದಸ್ಯರಿಗೆ ಆರೋಗ್ಯ ರಕ್ಷಾ ವಿಮಾ ಕಾರ್ಯಕ್ರಮ, ರಾಜ್ಯದ ಯಾವುದೇ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ 20 ಸಾವಿರ ಸೌಲಭ್ಯ ನೀಡಲಾಗುತ್ತದೆ. 2,942 ಪಾಲುದಾರರಿಗೆ 2.72 ಕೋಟಿ ರೂ. ಸೌಲಭ್ಯ ನೀಡಲಾಗಿದೆ. ಜಿಲ್ಲಾ ವ್ಯಾಪ್ತಿಯ ವಿವಿಧ ನೆಟ್‌ವರ್ಕ್‌ ಆಸ್ಪತ್ರೆಗಳ ಮೂಲಕ ನಗದು ರಹಿತ ಚಿಕಿತ್ಸೆಗೆ ಅವಕಾಶ ನೀಡಲಾಗಿದೆ.

 

 

ಟಾಪ್ ನ್ಯೂಸ್

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Kambala

Kambala; ಬೆಂಗಳೂರು ಕಂಬಳ ಈ ಬಾರಿ ಅನುಮಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ:ಕೋಟೆಕಲ್ಲದಲ್ಲೊಂದು ಅಪೂರ್ವ ಜ್ಞಾನದೇಗುಲ-ಉಲ್ಲಾಸದ ವಾತಾವರಣ

ಬಾಗಲಕೋಟೆ:ಕೋಟೆಕಲ್ಲಲ್ಲೊಂದು ಅಪೂರ್ವ ಜ್ಞಾನದೇಗುಲ-ಉಲ್ಲಾಸದ ವಾತಾವರಣ

2-mudhol

Mudhola: ಮೆಕ್ಕೆಜೋಳಕ್ಕೂ ಕುತ್ತು; ರೈತರ ಆರ್ಥಿಕತೆಗೆ ಮಾರಕ ಹೊಡೆತ

ದೇಗುಲ ಕಟ್ಟಡಕ್ಕೆ ಭಕ್ತರ ದೇಣಿಗೆ ಮಾತ್ರ ಬಳಕೆ: ಗುಡಗುಂಟಿಮಠ

ದೇಗುಲ ಕಟ್ಟಡಕ್ಕೆ ಭಕ್ತರ ದೇಣಿಗೆ ಮಾತ್ರ ಬಳಕೆ: ಗುಡಗುಂಟಿಮಠ

11-mudhol

ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ‌‌ ಪ್ರಯತ್ನಿಸುವೆ: ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ

ಭೈರನಹಟ್ಟಿ: ಕಾರ್ಗಿಲ್‌ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ

ಭೈರನಹಟ್ಟಿ: ಕಾರ್ಗಿಲ್‌ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.