ಹಳ್ಳಿ ಶಾಲೆಗೆ ಡಿಜಿಟಲೀಕರಣ ಭಾಗ್ಯ
ಕ್ಷೇತ್ರದ ಅಷ್ಟೂ ಶಾಲೆಗೆ ಕಂಪ್ಯೂಟರ್-ಪ್ರೊಜೆಕ್ಟರ್ ಅಳವಡಿಸಲು ಮುಂದಾದ ನ್ಯಾಮಗೌಡ
Team Udayavani, Dec 25, 2020, 4:31 PM IST
ಬಾಗಲಕೋಟೆ: ಇಡೀ ಮತಕ್ಷೇತ್ರದ ಗ್ರಾಮೀಣ ಶಾಲೆಗಳನ್ನು ಡಿಜಟಲೀಕರಣ ಮಾಡುವ ಜತೆಗೆ ಹಸಿರು ಶಾಲೆಗಳನ್ನಾಗಿ ಪರಿವರ್ತಿಸಿ ಮಾದರಿ ಶಾಲೆ ನಿರ್ಮಾಣಕ್ಕೆ ಜಮಖಂಡಿ ಶಾಸಕ ಆನಂದ ಸಿದ್ದು ನ್ಯಾಮಗೌಡ ಮುಂದಾಗಿದ್ದಾರೆ.
ಹೌದು, ಸರ್ಕಾರದ ಶಾಸಕರ ಶಾಲಾ ದತ್ತುಯೋಜನೆಯಡಿ ತಾಲೂಕಿನ ಮೈಗೂರ ಕೆಪಿಎಸ್‌ಶಾಲೆ, ಅಡಿಹುಡಿಯ ಸರ್ಕಾರಿ ಪ್ರೌಢ ಶಾಲೆ ಹಾಗೂಸಿದ್ದಾಪುರದ ಪ್ರೌಢಶಾಲೆಯನ್ನು ದತ್ತು ಪಡೆದಿದ್ದು,ಒಟ್ಟು 36.78 ಲಕ್ಷ ರೂ. ಶಾಸಕರ ನಿಧಿ ಬಳಸಿ,ತುರ್ತು ಅಗತ್ಯ ಸೌಲಭ್ಯ ಕಲ್ಪಿಸಲು ಯೋಜನೆಹಾಕಿಕೊಂಡಿದ್ದಾರೆ.
ಎಲ್ಲ ಶಾಲೆಗೂ ಡಿಜಿಟಲ್ ಭಾಗ್ಯ: ಶಾಲಾ ದತ್ತುಯೋಜನೆ ಹೊರತುಪಡಿಸಿ, ಸರ್ಕಾರದ ವಿವಿಧಇಲಾಖೆ ಹಾಗೂ ವಿವಿಧ ಯೋಜನೆಗಳ ಅನುದಾನ, ದಾನಿಗಳ ನೆರವು ಹಾಗೂ ತಮ್ಮ ಸ್ವಂತ ಖರ್ಚಿನಲ್ಲಿಹಳ್ಳಿ ಶಾಲೆಗೆ ಡಿಜಿಟಲ್ ಮೆರಗು ನೀಡಲು ಯೋಜನೆಹಾಕಿಕೊಂಡಿದ್ದಾರೆ. ಪ್ರತಿಯೊಂದು ಶಾಲೆಯೂಡಿಜಿಟಲೀಕರಣಗೊಳ್ಳಬೇಕು. ಪ್ರೌಢ ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲು ಪ್ರೊಜೆಕ್ಟರ್, ಕಂಪ್ಯೂಟರ್ ಲ್ಯಾಬ್ ಇರಬೇಕು ಎಂಬುದು ಅವರ ನಿಲುವು. ಈ ನಿಟ್ಟಿನಲ್ಲಿ ಶಾಲಾ ದತ್ತು ಯೋಜನೆಯಡಿ ಶಾಸಕರನಿಧಿಯ ಜತೆಗೆ ಬೇರೆ ಬೇರೆ ಅನುದಾನ ಬಳಕೆಗೆ ಮುಂದಾಗಿದ್ದಾರೆ.
ಶಾಸಕ ಆನಂದ ಅವರ ತಂದೆ ದಿ.ಸಿದ್ದು ನ್ಯಾಮಗೌಡರು, ಇಡೀ ಕ್ಷೇತ್ರದಲ್ಲಿ ಹಸರೀಕರಣ,ಕೆರೆ ಅಭಿವೃದ್ಧಿ, ನೀರಾವರಿ ಯೋಜನೆಗೆ ಆದ್ಯತೆ ನೀಡಿದ್ದರು. ಅದೇ ಮಾರ್ಗದಲ್ಲಿ ನಡೆದಿರುವ ಆನಂದಅವರೂ, ತಮ್ಮ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಶಾಲೆಗಳೂ ಹಸಿರಿನಿಂದ ಕಂಗೊಳಿಸಬೇಕೆಂಬ ಕಲ್ಪನೆ ಹೊಂದಿದ್ದು,ಇದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು,ಶಾಲಾ ಎಸ್‌ಡಿಎಂಸಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಪ್ರತಿಯೊಂದು ಶಾಲೆ ಆವರಣದಲ್ಲೂ ಕನಿಷ್ಠ 100ರಿಂದ 250 ವಿವಿಧ ಸಸಿ ನೆಡಲು ಯೋಜನೆ ರೂಪಿಸುತ್ತಿದ್ದಾರೆ.
ಮೂರು ಶಾಲೆಗೆ 36.78 ಲಕ್ಷ: ಶಾಲಾ ದತ್ತು ಯೋಜನೆಯಡಿ ಮೈಗೂರ, ಅಡಿಹುಡಿ ಹಾಗೂಸಿದ್ದಾಪುರ ಶಾಲೆ ದತ್ತು ಪಡೆದಿದ್ದು, ಅವುಗಳಅಭಿವೃದ್ಧಿಗೆ ಒಟ್ಟು 36.78 ಲಕ್ಷ ಅನುದಾನ ಶಾಸಕರ ನಿಧಿಯಿಂದ ನೀಡಿದ್ದಾರೆ. ಮೈಗೂರ ಕೆಪಿಎಸ್ ಶಾಲೆಯ ಕೊಠಡಿಗಳಟೈಲ್ಸ್‌ಗಳು ಕುಸಿದಿದ್ದು, ಮಕ್ಕಳು ಕುಳಿತುಕೊಳ್ಳಲುತೊಂದರೆ ಇದೆ. ತರಗತಿಗಳ ಬಾಗಿಲು, ಕಿಟಕಿದುರಸ್ತಿಗೊಳಿಸಬೇಕಿದೆ. ಶೌಚಾಲಯದ ಅಗತ್ಯವಿದೆ. ಬಿಸಿಯೂಟದ ಆಹಾರಧಾನ್ಯ ಸಂಗ್ರಹಕ್ಕೆ ಉಗ್ರಾಣದ ಕೊರತೆ ಇದ್ದು, ಕನ್ನಡ ವಿಷಯ ಶಿಕ್ಷಕರ ಹುದ್ದೆ ಖಾಲಿ ಇದೆ. ಇನ್ನು ಅಡಿಹುಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿನಾಲ್ವರು ಶಿಕ್ಷಕರ ಕೊರತೆ ಇದೆ. ಇಬ್ಬರು ಪಿಸಿಎಂಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕ, ಓರ್ವ ಕನ್ನಡ ಶಿಕ್ಷಕರ ಹುದ್ದೆ ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಿ,ಮಕ್ಕಳ ಕಲಿಕೆಗೆ ಅನುಕೂಲ ಕಲ್ಪಿಸಬೇಕಿದೆ. ಸಧ್ಯ ನಾಲ್ಕು ಕೊಠಡಿಗಳು ಮಾತ್ರವಿದ್ದು, ಕೊಠಡಿಗಳ ಕೊರತೆ ತೀವ್ರವಾಗಿದೆ. ಬಿಸಿ ಊಟ ತಯಾರಿಕೆಗೆ ಪ್ರತ್ಯೇಕ ಕೊಠಡಿ, ಬಾಲಕ-ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಬೇಕಿದೆ.
ಸಿದ್ದಾಪುರ ಶಾಲೆಗೆ ಶೌಚಾಲಯವೇ ಇಲ್ಲ: ಸಿದ್ದಾಪುರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆಶೌಚಾಲಯವೇ ಇಲ್ಲ. ಇಲ್ಲಿ ಶುದ್ಧ ಕುಡಿಯುವನೀರಿನ ಘಟಕವಿದ್ದು, ಅದು ದುರಸ್ಥಿ ಮಾಡಿಸಬೇಕಿದೆ.ಗ್ರಂಥಾಲಯಕ್ಕೆ ಹೆಚ್ಚಿನ ಪುಸ್ತಕ, ಇನ್ನೂ ಒಂದು ತರಗತಿಕೊಠಡಿಯ ಅಗತ್ಯವಿದೆ. ಈ ಸಮಸ್ಯೆ ನೀಗಿದರೆ,ಶಿಕ್ಷಕರು ಹಾಗೂ ಮಕ್ಕಳ ಕಲಿಕೆಗೆ ಅನುಕೂಲವಾಗಲಿದೆ ಎಂಬುದು ಗ್ರಾಮಸ್ಥರ ಒತ್ತಾಸೆ.
ಮೈಗೂರಿನ ಕೆಪಿಎಸ್ ಶಾಲೆ-23.02 ಲಕ್ಷ :
ಈ ಶಾಲೆಯಲ್ಲಿ ಎಲ್‌ಕೆಜಿಯಿಂದ ಪಿಯುಸಿ ವರೆಗೆ ವ್ಯಾಸಂಗ ನಡೆಯುತ್ತಿದ್ದು, 426 ವಿದ್ಯಾರ್ಥಿಗಳಿದ್ದಾರೆ.ಶಿಕ್ಷಕರ ಕೊರತೆ ನೀಗಿಸಲು ಇಲಾಖೆಗೆ ಪ್ರಸ್ತಾವನೆಸಲ್ಲಿಸಿದ್ದು, ಶಾಸಕರ ದತ್ತು ಯೋಜನೆಯಡಿ ಶಾಲಾಕೊಠಡಿ ನಿರ್ಮಾಣಕ್ಕೆ 10.76 ಲಕ್ಷ, ಶೌಚಾಲಯನಿರ್ಮಾಣಕ್ಕೆ 1.50 ಲಕ್ಷ ಹಾಗೂ ಅಡುಗೆ ಕೋಣೆನಿರ್ಮಾಣಕ್ಕೆ 10.76 ಲಕ್ಷ ಅನುದಾನವನ್ನು ಶಾಸಕಆನಂದ ನ್ಯಾಮಗೌಡ ನೀಡಿದ್ದಾರೆ. ಡಿಎಂಎಫ್ ಸಹಿತವಿವಿಧ ಇಲಾಖೆಗಳ ಅನುದಾನ ಬಳಸಿಕೊಂಡು, ಇಡೀ ಶಾಲೆ ಡಿಜಿಟಲೀಕರಣ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ.
ಶಾಲೆಯ ಕೊರತೆ ಕುರಿತು ಇಲಾಖೆಯಮೂಲಕ ಶಾಸಕರಿಗೆ ಕ್ರಿಯಾಯೋಜನೆ ಸಲ್ಲಿಸಿದ್ದೇವೆ. ಕಟ್ಟಡದ ಬಾಗಿಲು, ಕಿಟಕಿ ಸರಿಯಾಗಿಲ್ಲ. ಟೈಲ್ಸಗಳೆಲ್ಲ ಕುಸಿದ್ದು,ದುರಸ್ಥಿಗಾಗಿ ಮನವಿ ಸಲ್ಲಿಸಲಾಗಿದೆ. ಶಾಸಕರು, ನಮ್ಮ ಶಾಲೆ ದತ್ತು ಪಡೆದಿರುವುದು ಖುಷಿ ತಂದಿದೆ. ಶಾಸಕರ ಸಹಕಾರದೊಂದಿಗೆ ವಿಶೇಷ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ. -ಬಿ.ಎಂ. ಬಳೂಲಮಟ್ಟಿ, ಉಪ ಪ್ರಾಚಾರ್ಯ, ಕೆಪಿಎಸ್ ಶಾಲೆ, ಮೈಗೂರ
ಅಡಿಹುಡಿಯ ಸರ್ಕಾರಿ ಪ್ರೌಢ ಶಾಲೆ-12.26 ಲಕ್ಷ :
ಈ ಶಾಲೆಯಲ್ಲಿ ಒಟ್ಟು 443 ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದು, ಇಬ್ಬರು ಪಿಸಿಎಂ, ಕನ್ನಡ ಹಾಗೂ ದೈಹಿಕಶಿಕ್ಷಣ ಶಿಕ್ಷಕರ ನಿಯೋಜನೆ ಮಾಡಲು ಶಾಸಕರು ಇಲಾಖೆಗೆಪತ್ರ ಬರೆದಿದ್ದಾರೆ. ಇಲ್ಲಿ ಇನ್ನೂ ಮೂರು ಕೊಠಡಿಗಳಬೇಡಿಕೆ ಇದ್ದು, ಸಧ್ಯ ಒಂದು ಹೆಚ್ಚುವರಿ ಕೊಠಡಿನಿರ್ಮಾಣಕ್ಕೆ 10.76 ಲಕ್ಷ, ಶೌಚಾಲಯ ನಿರ್ಮಾಣಕ್ಕೆ 1.50 ಲಕ್ಷ ಸೇರಿ ಒಟ್ಟು 12.26 ಲಕ್ಷ ಅನುದಾನವನ್ನು ಈ ಶಾಲೆಗೆನೀಡಲಾಗಿದೆ. ಶಿಕ್ಷಣ ಇಲಾಖೆಯ 30 ಲಕ್ಷ ಅನುದಾನದಡಿಈಗಾಗಲೇ ಶಾಲಾ ಕೊಠಡಿ ನಿರ್ಮಿಸಲಾಗಿದೆ. ಜತೆಗೆಇಡೀ ಶಾಲೆಯನ್ನು ಡಿಜಿಟಲೀಕರಣ ಹಾಗೂ ಹಸರೀಕರಣ ಮಾಡಲು ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ.
ನಮ್ಮ ಶಾಲೆಯ ಬೇಡಿಕೆಯ ಪಟ್ಟಿಸಲ್ಲಿಸಿದ್ದೇವೆ. ಶಾಸಕರು ಈಗಾಗಲೇಶಾಲಾ ಕೊಠಡಿ ನಿರ್ಮಿಸಿಕೊಟ್ಟಿದ್ದು,ಇನ್ನುಳಿದ ಬೇಡಿಕೆಗಳ ಈಡೇರಿಕೆಗೆಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಇನ್ನೂ ಮೂರು ಕೊಠಡಿ, ಬಿಸಿ ಊಟತಯಾರಿಸಲು ಪ್ರತ್ಯೇಕ ಕೊಠಡಿಯ ಅಗತ್ಯ ತುರ್ತಾಗಿ ಅಗತ್ಯವಿದೆ. -ಶ್ರೀಮತಿ ಎಂ.ಎಸ್. ಹುಂಡೇಕಾರ, ಮುಖ್ಯಾಧ್ಯಾಪಕಿ, ಸರ್ಕಾರಿ ಪ್ರೌಢ ಶಾಲೆ, ಅಡಿಹುಡಿ
ಸಿದ್ದಾಪುರದ ಸರ್ಕಾರಿ ಪ್ರೌಢಶಾಲೆ-1.50 ಲಕ್ಷ :
ಈ ಶಾಲೆಯಲ್ಲಿ ಒಟ್ಟು 306 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಯಾವುದೇ ವಿಷಯ ಶಿಕ್ಷಕರ ಕೊರತೆಇಲ್ಲ. ವಿದ್ಯಾರ್ಥಿಗಳಿಗೆ ತಕ್ಕಂತೆ ಕೊಠಡಿಗಳೂಇವೆ. ಶೌಚಾಲಯದ ಕೊರತೆ ಇದ್ದು, ಅದಕ್ಕಾಗಿ1.50 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲುಶಾಸಕರ ನಿಧಿ ನೀಡಲಾಗಿದೆ. ಮುಖ್ಯವಾಗಿಶಾಲೆಯ ಗ್ರಂಥಾಲಯಕ್ಕೆ ಹೆಚ್ಚಿನ ಪುಸ್ತಕ, ಶುದ್ಧಕುಡಿಯುವ ನೀರಿನ ಘಟಕ ದುರಸ್ಥಿ, ಹೆಚ್ಚುವರಿಕೊಠಡಿ ಮಂಜೂರಾತಿಗೆ ಇಲಾಖೆಗೆ ಪ್ರಸ್ತಾವನೆಸಲ್ಲಿಸಿದ್ದಾರೆ. ಈ ಶಾಲೆಯನ್ನೂ ಡಿಜಿಟಲೀಕರಣ ಹಾಗೂ ಹಸರೀಕರಣ ಮಾಡಲು ಪ್ರತ್ಯೇಕ ಕ್ರಿಯಾ ಯೋಜನೆ ಸಿದ್ಧಗೊಳ್ಳುತ್ತಿದೆ.
ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿ, ಶೌಚಾಲಯನಿರ್ಮಾಣ, ಗ್ರಂಥಾಲಯಕ್ಕೆ ಒಂದಷ್ಟು ಪುಸ್ತಕ ಕಲ್ಪಿಸಬೇಕಿದೆ. ಶಿಕ್ಷಕರು, ಶಾಲಾ ಕೊಠಡಿಸಮಸ್ಯೆ ಇಲ್ಲ. ಮಕ್ಕಳ ಸಂಖ್ಯೆ ಹೆಚ್ಚಿದ್ದು,ಹೆಚ್ಚುವರಿ ಕೊಠಡಿ ಕೇಳಿದ್ದೇವೆ. -ಸುಮಂಗಲಾ ಮಾದರ, ಮುಖ್ಯಾಧ್ಯಾಪಕಿ, ಸರ್ಕಾರಿ ಪ್ರೌಢ ಶಾಲೆ, ಸಿದ್ದಾಪುರ
ನಮ್ಮ ಕ್ಷೇತ್ರದ ಮೂರು ಶಾಲೆ ದತ್ತು ಪಡೆದಿದ್ದು, ಶಾಸಕರ ನಿಧಿಯಿಂದ 36.78 ಲಕ್ಷ ಅನುದಾನ ನೀಡಲಾಗಿದೆ. ಶಾಸಕರ ದತ್ತು ಶಾಲೆಗಳ ಅಭಿವೃದ್ಧಿಗೆ ಸರ್ಕಾರವಿಶೇಷ ಅನುದಾನ ನೀಡಬೇಕು. ಶಾಸಕರ ನಿಧಿಯಿಂದಲೇ ಎಲ್ಲವೂ ಮಾಡಲು ಆಗಲ್ಲ. ಆದರೂ, ಬೇರೆ ಬೇರೆ ಇಲಾಖೆಗಳ ಅನುದಾನ ಬಳಸಿಕೊಂಡು, ನಮ್ಮ ಕ್ಷೇತ್ರದ ಅಷ್ಟೂ ಶಾಲೆಗಳನ್ನು ಡಿಜಿಟಲೀಕರಣ ಮತ್ತು ಹಸರೀಕರಣ ಮಾಡಲು ಪ್ರಮುಖಗುರಿ ಹಾಕಿಕೊಳ್ಳಲಾಗಿದೆ. ಕೊರೊನಾ ಸಂದರ್ಭದಲ್ಲಿ ಶಾಲಾ ದತ್ತು ಪಡೆದಿದ್ದರಿಂದ ಕಾಮಗಾರಿ ಆರಂಭಗೊಂಡಿಲ್ಲ. ಶೀಘ್ರವೇ ಕ್ಷೇತ್ರದ ಎಲ್ಲ ಶಾಲೆ ಮಾದರಿಯಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುವುದು. -ಆನಂದ ಸಿದ್ದು ನ್ಯಾಮಗೌಡ, ಶಾಸಕ, ಜಮಖಂಡಿ
–ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಗಲಕೋಟೆ: ಕುಳಗೇರಿ ಕೆರೆಗೆ ಸೋಮನಕೊಪ್ಪ ಚರಂಡಿ ನೀರು!
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.