Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..
Team Udayavani, Mar 19, 2024, 7:09 PM IST
ಕುಳಗೇರಿ ಕ್ರಾಸ್ (ಜಿ.ಬಾಗಲಕೋಟೆ): ಒಂದಾನೊಂದು ಕಾಲದಲ್ಲಿ ಚಿಂವ್..ಚಿಂವ್ ಶಬ್ದ ಮಾಡುತ್ತ ಮನುಷ್ಯ ಕಟ್ಟಿದ ಮನೆಯೊಳಗೆ ಗೂಡು ಕಟ್ಟಿ ಬದುಕುತ್ತಿದ್ದ ಗುಬ್ಬಚ್ಚಿಗಳು ಇಂದು ಅದೇ ಮಾನವ ನಿರ್ಮಿತ ಮೊಬೈಲ್ ಬಳಕೆ ಸೇರಿದಂತೆ ವಿಷಪೂರಿತ ಆಹಾರಗಳನ್ನ ಸೇವಿಸಿ ಗುಬ್ಬಚ್ಚಿಗಳ ಸಂತತಿಯು ಕ್ಷೀಣಿಸುತ್ತ ಕಣ್ಮರೆಯಾಗುತ್ತಿವೆ.
ನೀರು ಆಹಾರ ಅರಸಿ ಬರುವ ನೂರಾರು ಗುಬ್ಬಚ್ಚಿಗಳಿಗೆ ವಿವಿಧ ಹಕ್ಕಿ/ಪಕ್ಷಿಗಳಿಗೆ ಹಿರೇಮಠ ಕುಟುಂಬದ ಸದಸ್ಯರಾದ ಚೇತನ್, ಅಮೃತ, ಚಿನ್ಮಯ, ಅಕ್ಷಯ, ಚಂದನ, ಚಿಂತನಾ ಇವರೆಲ್ಲ ನೀರು ಆಹಾರ ಕೊಟ್ಟು ಸುಮಾರು ವರ್ಷಗಳಿಂದ ಪಕ್ಷಿ ಸಂಕುಲ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ತಮ್ಮ ಮನೆಯ ಅಂಗಳ ಮಾಳಿಗೆ ಮೆಲೆ ಆಹಾರ ನೀರು ಇಟ್ಟು ಹಕ್ಕಿ/ಪಕ್ಷಿಗಳ ರಕ್ಷಣೆ ಮಾಡಬೇಕು ಎನ್ನುತ್ತಾರೆ ವರದಿಗಾರ ಆರ್.ಎಸ್.ಹಿರೇಮಠ.
ಪ್ರತಿ ವರ್ಷ ಮಾರ್ಚ್ 20 ಬಂದರೆ ಸಾಕು ಪಕ್ಷಿ ಪ್ರಿಯರು ಮನೆಯ ಅಂಗಳದಲ್ಲಿನ ಗಿಡ/ ಮರಗಳಲ್ಲಿ ಆಹಾರ/ನೀರಿಟ್ಟು ಪಕ್ಷಿಗಳ ಹೊಟ್ಟೆ ತುಂಬಿಸಿದರೆ ಇನ್ನು ಕೆಲವರು ಗುಬ್ಬಚ್ಚಿ ದಿನದಂದು ಗುಡ್ಡ ಬೆಟ್ಟಗಳಲ್ಲಿ ಸಂಚರಿಸಿ ಪಕ್ಷಿಗಳಿಗೆ ನೀರು ಆಹಾರ ಹಾಕಿ ಗುಬ್ಬಚ್ಚಿ ದಿನವನ್ನ ಆಚರಿಸುತ್ತಾರೆ. ಮತ್ತೆ ಕೆಲವರು ಮೊಬೈಲ್‌ನಲ್ಲಿ ಸ್ಟೇಟಸ್ ಹಾಕೋದು ಭಾವಚಿತ್ರ ಹಾಕಿ ಪಕ್ಷಿಗಳನ್ನ ಕಾಪಾಡಿ ಎಂದು ಶುಭ ಹೇಳುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ನೀವೆ ಹೇಳಿಎನ್ನುತ್ತಿದ್ದಾರೆ ಪಕ್ಷಿ ಪ್ರಿಯರು.
ನಾವು ಏಳುವ ಮುನ್ನ ಮನೆಯ ಅಂಗಳದಲ್ಲಿ ಚಿಲಿಪಿಲಿ ಪಕ್ಷಿಗಳ ದನಿ ಕೇಳುತ್ತಿದ್ದ ನಾವು ಇಂದು ಮೊಬೈಲ್ ಉಜ್ಜುತ್ತ ಕಾಲಹರಣ ಮಾಡುತ್ತಿದ್ದೇವೆ. ಗಿಡ/ಮರಗಳ ಸಂಖ್ಯೆಯು ಕಡಿಮೆಯಾಗಿ ಹಸಿರು ಪರಿಸರ ಮಾಯವಾಗಿವೆ ಈಗಾಗಲೇ ಪ್ರಪಂಚದಲ್ಲಿ ಪಕ್ಷಿಗಳ ಸಂತತಿ ಕಡಿಮೆಯಾಗಿವೆ.
ಸಮರ್ಪಕ ಮಳೆ ಸುರಿಯದ ಕಾರಣ ಗ್ರಾಮದಲ್ಲಿನ ಕೊಳವೆ ಬಾವಿಗಳು ಬತ್ತಿವೆ. ನದಿ, ಕೆರೆ,ಹಳ್ಳ ಕೊಳ್ಳಗಳು ಬತ್ತಿದ್ದರಿಂದ ಪ್ರಾಣಿ ಪಕ್ಷಿಗಳು ಕೂಡ ಪರದಾಡುವಂತಾಗಿದೆ. ಇತ್ತ ಅತಿಯಾದ ಕಿಟನಾಶಕ ಸಿಂಪರಣೆಯ ಬೆಳೆಗಳನ್ನ ತಿಂದು ಅದೆಷ್ಟೋ ಪಕ್ಷಿಗಳು ಪ್ರಾಣಕಳೆದುಕೊಳ್ಳುತ್ತಿವೆ.
ಪ್ರಪಂಚದಾದ್ಯಂತ ಮಾರ್ಚ್ 20ರಂದು ಆಚರಿಸುವ ಗುಬ್ಬಚ್ಚಿ ದಿನವನ್ನು ಎಲ್ಲ ಪಕ್ಷಿ ಸಂಕುಲರಕ್ಷಣೆ ಮಾಡುವುದರ ಜೊತೆಗೆ ಈ ದಿನವನ್ನ ಆಚರಿಸಬೇಕಿದೆ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ ಪರಿಸರ ಪ್ರೇಮಿಗಳು.
ಮಾನವನ ಕೆಲವು ತಪ್ಪುಗಳಿಂದ ಪಕ್ಷಿ ಸಂಕುಲ ನಾಶವಾಗುತ್ತಿವೆ. ಈ ಬೇಸಿಗೆಯ ಬಿಸಿಲಿನಲ್ಲಿ ಪ್ರಾಣಿ/ಪಕ್ಷಿಗಳು ನೀರಿಲ್ಲದೆ ಪರದಾಡುತ್ತಿವೆ. ಎಲ್ಲರೂ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸುವ ಮೂಲಕ ಗಿಡ/ಮರಗಳಲ್ಲಿ ನೀರು ಆಹಾರ ಇಟ್ಟು ಪಕ್ಷಿ ಸಂಕುಲ ಸಂರಕ್ಷಣೆ ಮಾಡಬೇಕು.
-ಶಾಂತಲಿಂಗ ಸ್ವಾಮಿಜಿ ದೊರೆಸ್ವಾಮಿ ವಿರಕ್ತಮಠ ಬೈರನಹಟ್ಟಿ.
ತೋಂಟದಾರ್ಯಮಠ ಶಿರೋಳ
-ಮಹಾಂತಯ್ಯ ಹಿರೇಮಠ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.