ಬೇಜವಾಬ್ದಾರಿ ತೋರಿದರೆ ಕೆಲಸದಿಂದ ವಜಾ
Team Udayavani, Dec 23, 2019, 11:32 AM IST
ಮಹಾಲಿಂಗಪುರ: ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ ರನ್ನಬೆಳಗಲಿ ಸರ್ಕಾರಿ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಗೆ ರವಿವಾರ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.
ಮಕ್ಕಳಿಗೆ ಸಿಹಿ ಹಂಚಿ ಮಾತನಾಡಿದ ಕಾರಜೋಳ, ಸರ್ಕಾರಿ ಶಾಲೆಯೆಂದರೆ ಯಾರು ಕೇಳ್ಳೋರಿಲ್ಲ ಎಂದು ತಿಳಿಯಬೇಡಿ. ಮಕ್ಕಳ ವಿಷಯದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಅಡುಗೆ ಆಯಾಗಳುಜವಾಬ್ದಾರಿಯಿಂದ ಕೆಲಸ ಮಾಡಬೇಕು. ಮಕ್ಕಳ ಊಟದ ವಸ್ತುಗಳನ್ನು ಸ್ವತ್ಛ ಮಾಡಿ ಬಳಸಬೇಕು. ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ. ಮಕ್ಕಳ ಜೀವದ ಜತೆ ಆಟವಾಡುವುದು ಸರಿಯಲ್ಲ. ಕೆಲಸ ಸಮರ್ಪಕವಾಗಿ ಮಾಡದೆ ಇರುವವರನ್ನು ತೆಗೆದುಹಾಕಿ. ಅಡುಗೆ ಆಯಾಗಳನ್ನು ಮತ್ತು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಎಸ್‌ಡಿಎಂಸಿಯವರನ್ನು ಆಯ್ಕೆ ಮಾಡಿರುವುದು ಏಕೆ? ನಿಮ್ಮ ಮೇಲೆ ಜವಾಬ್ದಾರಿ ಇದೆ. ಶಾಲೆ ಕಡೆಗೆ ಗಮನಹರಿಸಬೇಕು. ಸರಿಯಾಗಿ ನಿಭಾಯಿಸಬೇಕು ಎಂದರು. ವಿದ್ಯಾರ್ಥಿಗಳ ಜೀವಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜವಾಬ್ದಾರಿಯಿಂದ ಕೆಲಸ ಮಾಡುವವರು ಮಾತ್ರ ಈ ಕೆಲಸದಲ್ಲಿ ಇರಲಿ, ಇಲ್ಲವಾದವರನ್ನು ಕೂಡಲೆ ತೆಗೆದು ಹಾಕಿ ಎಂದು ಸೂಚಿಸಿದರು.
ಶಾಲಾ ಮಕ್ಕಳಿಗೆ ಮತ್ತು ಮಕ್ಕಳ ಪಾಲಕರೊಂದಿಗೆ ಮಾತನಾಡಿ, ಇಂಥ ತೊಂದರೆಗಳು ಬರದಂತೆ ಅಧಿಕಾರಿಗಳನ್ನು ಎಚ್ಚರಿಸಲಾಗಿದೆ. ಕಾರಣ ನೀವು ಭಯ ಬೀಳಬೇಡಿ. ಸರ್ಕಾರ ಮಕ್ಕಳ ಸಲುವಾಗಿ ವಿಶೇಷ ಕಾಳಜಿ ವಹಿಸುತ್ತದೆ ಎಂದರು. ಕೆ.ಆರ್. ಮಾಚಕನೂರ, ಚಿಕ್ಕಪ್ಪ ನಾಯಿಕ, ಮಹಾಂತೇಶ ಹಿಟ್ಟಿನಮಠ, ಲಕ್ಷ್ಮಣಗೌಡ ಪಾಟೀಲ, ಸಿದ್ದು ಪಾಟೀಲ, ಪಂಡಿತ ಪೂಜಾರಿ, ಅಶೋಕ ಸಿದ್ದಾಪುರ, ಮಹಾಲಿಂಗಪ್ಪ ಲಾಗದವರ, ಗೌಡಪ್ಪ ಬರಮನಿ, ಕರೆಪ್ಪ ಭಾವಿಮನಿ, ಗಂಗಪ್ಪ ನಾಯಕ ಮಹಾಲಿಂಗಪ್ಪ ಪುರಾಣಿಕ, ಮಹಾದೇವ ಮುರುನಾಳ, ಪಾಂಡಪ್ಪ ಸಿದ್ದಾಪೂರ, ಅಶೋಕ ಸಣ್ಣಟ್ಟಿ, ಸದಾಶಿವ ಕುಲಗೋಡ, ಲಕ್ಕಪ್ಪ ಹಂಚಿನಾಳ, ಮಲ್ಲು ಕ್ವಾನೆಗೋಳ,ಪುಟ್ಟು ಕುಲಕರ್ಣಿ, ರಂಗಪ್ಪ ಒಂಟಗೋಡಿ, ಪಾಂಡು ಸಿದ್ದಾಪುರ, ಲಕ್ಷ್ಮಣ ಶಿರೋಳ, ಶಿವಪ್ಪ ಶಿರೋಳ, ಗಂಗಪ್ಪ ಬೀಸನಕೊಪ್ಪ, ಪರಪ್ಪ ದೊಡಟ್ಟಿ, ಅಲ್ಲಪ್ಪ ಸಂಕ್ರಟ್ಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.