ಅಡುಗೆ-ಹೆರಿಗೆಗೆ ಹೆಣ್ಣು ಸೀಮಿತವಲ್ಲ: ಡಾ| ಮಲ್ಲಿಕಾ ಘಂಟಿ
Team Udayavani, Mar 15, 2021, 2:57 PM IST
ಬಾಗಲಕೋಟೆ: ಸಮಾಜದಲ್ಲಿ ಜ್ಞಾನದ ಮೂಲವನ್ನೆಲ್ಲ ಪುರುಷರು ಗುತ್ತಿಗೆ ಹಿಡಿದಿದ್ದೇವೆ ಎಂದು ಭಾವಿಸಿದ್ದಾರೆ. ಹೀಗಾಗಿ ಸಮಾಜದಲ್ಲಿ ಹೆಣ್ಣನ್ನು ಹೆರಿಗೆ ಮತ್ತು ಅಡುಗೆ ಮನೆಯ ಜವಾಬ್ದಾರಿ ನಿಭಾಯಿಸಲು ಸೀಮಿತಗೊಳಿಸುತ್ತಿದ್ದಾರೆ ಎಂದು ಹಂಪಿ ಕನ್ನಡವಿವಿಯ ವಿಶ್ರಾಂತ ಕುಲಪತಿ ಡಾ| ಮಲ್ಲಿಕಾ ಘಂಟಿ ವಿಷಾದ ವ್ಯಕ್ತಪಡಿಸಿದರು.
ಶಿರೂರದಲ್ಲಿ ರವಿವಾರ ಆರಂಭಗೊಂಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಂಡಸಿನ ಪ್ರಪಂಚವೆಂದರೆ ಅದುಹೊರಲೋಕ ಮತ್ತು ಪರಲೋಕ. ಇದರ ಸಾಧನೆಗಾಗಿ ಗಂಡಸು ಲೌಕಿಕ-ಅಲೌಕಿಕ ಜ್ಞಾನ ಸಂಪತ್ತನೆಲ್ಲ ಬಳಸಿಕೊಳ್ಳಬಹುದು. ಆದರೆ ಹೆಣ್ಣಿಗೆ ಮಾತ್ರ ಹೊರಲೋಕವೆಂಬುದೆ ಇಲ್ಲ. ಈ ಹೊರಲೋಕದ ಜ್ಞಾನಕ್ಕಾಗಿ ಹೆಣ್ಣು-ಗಂಡೆಂಬ ಭೇದ ಮಾಡಿದ್ದನ್ನು ಪ್ರಶ್ನಿಸುವ ಪ್ರಬುದ್ಧತೆ ಇರಲಿಲ್ಲ. ಜ್ಞಾನ ಮಾರ್ಗವಿಲ್ಲದೆ ಆತ್ಮ-ಪರಮಾತ್ಮನನ್ನು ಅರಿಯುವುದಾದರೂ ಹೇಗೆ? ಇಂದಿಗೂ ಅಕ್ಷರ, ಅರಿವು, ಜ್ಞಾನದ ಸಾಧನಗಳನ್ನೆಲ್ಲ ಪುರೋಹಿತಶಾಹಿ ಮತ್ತು ನವ ಬಂಡವಾಳ ಶಾಹಿಗಳು ತಮ್ಮ ಕೈ ತಪ್ಪಿ ಹೋಗದ ಹಾಗೆ ಕಾಯಲಾಗುತ್ತಿದೆ ಎಂದು ಹೇಳಿದರು.
ಜನಸಮುದಾಯ ನಿಯಂತ್ರಿಸುವ ಕೆಲಸ: ಪ್ರಭು ಪ್ರಭುತ್ವದಿಂದ ಪ್ರಜಾಪ್ರಭುತ್ವದವರೆಗಿನ ಚರಿತ್ರೆಯಲ್ಲಿನಿಚ್ಚಳವಾಗಿ ಕಾಣಿಸುವ ಸಂಗತಿಗಳೆಂದರೆಧರ್ಮಪ್ರಭುತ್ವ ಮತ್ತು ರಾಜಪ್ರಭುತ್ವಗಳು ಸೇರಿಯೆಪ್ರಜೆ ಮತ್ತು ಜನಸಮುದಾಯ ನಿಯಂತ್ರಿಸುವಕೆಲಸ ಮಾಡಿವೆ. ಜನ ವಿರೋಧಿ ನೀತಿ ಪ್ರಶ್ನಿಸುವ ಪ್ರತಿಭಟಿಸುವ ಶಕ್ತಿಗಳು ಅದರೊಳಗಿನಿಂದಲೇಹುಟ್ಟಿವೆ ಎಂದರು.
ಗುಡಿ-ಗುಂಡಾರ, ಮಂದಿರ- ಮಸೀದಿ,ಮಠ- ಚರ್ಚ್‌ಗಳ ಸ್ಥಾಪನೆಯ ಹಿಂದೆ ಜನಹಿತಇದೆ ಎಂದು ಸುಳ್ಳನ್ನು ಸತ್ಯದ ರೂಪದಲ್ಲಿ ಜನರ ಮೆದುಳಿನಲ್ಲಿ ಹುಳಬಿಡಲಾಗಿದೆ. ಈ ಹುಳಗಳನ್ನುಸರ್ಜರಿ ಮಾಡಿ ತೆಗೆಯುವ ಕೆಲಸ ಸಾಹಿತಿಗಳಿಂದಸಾಧ್ಯ. ಕೇವಲ ಸಾಹಿತಿಗಳು ಮಾಡುವುದಾದರೆಓದುಗರ ಕೆಲಸವೇನು. ಓದಿ ಓದದೆ ಹಾಗೆ ನಟಿಸುವರಾಜಕಾರಣಿಗಳ ಪಾತ್ರವೇನು, ಧಾರ್ಮಿಕ ಕ್ಷೇತ್ರದವಾರಸುದಾರಿಕೆ ಹೊತ್ತವರೇನು ಮಾಡಬೇಕು.ಭಕ್ತರೇನು ಮಾಡಬೇಕು, ರೈತರ ಪಾತ್ರವೇನು,ಮಹಿಳಾ ಲೋಕ ಇದರಿಂದ ಹೊರಗುಳಿಯಬೇಕೋ, ಒಳಗಿರಬೇಕೋ ಎಂದು ಪ್ರಶ್ನಿಸಿದರು.
ಇಂದು ಉಗ್ರ, ವ್ಯಗ್ರಗೊಂಡಿರುವ ಸಾಂಸ್ಕೃತಿಕ ರಾಷ್ಟ್ರೀಯವಾದ, ನವಬಂಡವಾಳಶಾಹಿವಾದ, ದೀರ್ಘ ಕಾಲದಿಂದ ನಮ್ಮ ಮೆದುಳನ್ನು ಮೇಯ್ದಿರುವ ಜಾತಿವರ್ಗ, ಧರ್ಮದ ಶ್ರೇಷ್ಠತೆಯ ವ್ಯಸನ,ಹೊಸ ಪಾಳೆಗಾರಿಕೆ ಇವುಗಳಿಗೆಲ್ಲ ಉತ್ತರಕೊಡುವಬಹುದೊಡ್ಡ ಜವಾಬ್ದಾರಿಯನ್ನು ಜನ ಸಂಸ್ಕೃತಿಯೇಹೊತ್ತುಕೊಳ್ಳಬೇಕು ಎಂದು ಹೇಳಿದರು.
ಮೆಚ್ಚಿಸಲು ಪುಂಗಿ ಊದುತ್ತಾರೆ: ಕರ್ನಾಟಕದಲ್ಲಿಕನ್ನಡವೇ ಸಾರ್ವಭೌಮ ಭಾಷೆ. ಆದರೆ ಆಗಾಗ ದೆಹಲಿಯ ಗದ್ದುಗೆಯ ಮೇಲಿರುವ ವ್ಯಕ್ತಿಗಳನ್ನುಮೆಚ್ಚಿಸಲು ನಮ್ಮ ರಾಜಕಾರಣಿಗಳು, ಹಿಂದಿರಾಷ್ಟ್ರ ಭಾಷೆಯೆಂದು ಪುಂಗಿ ಊದುವುದನ್ನುಕೇಳುತ್ತಿರುತ್ತೇವೆ. ಹಿಂದಿ ಎನ್ನುವ ಭಾಷೆಯು ಸಹರಾಜ್ಯಭಾಷೆ. ಹೀಗಾಗಿ ಒಂದು ರಾಜ್ಯ ಭಾಷೆ ಇನ್ನೊಂದು ರಾಜ್ಯ ಭಾಷೆಯ ಮೇಲೆ ಸವಾರಿಮಾಡುವುದು ಸಂವಿಧಾನ ವಿರೋಧಿ ನಡೆ. ಹೀಗಾಗಿ ಕನ್ನಡ ದೇಶದ, ರಾಜ್ಯದ, ಪ್ರಜಾಪ್ರತಿನಿಧಿಗಳು ಮೊದಲು ಕನ್ನಡ, ದೇಶ ಭಾಷೆಯಲ್ಲಿಸಂವಿಧಾನದ ಚೌಕಟ್ಟಿನಲ್ಲಿ ಆಡಳಿತ ನಡೆಸುವಷ್ಟುವಿವೇಕವಂತರಾಗಬೇಕು ಎಂದು ಹೇಳಿದರು.
ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳಿರುತ್ತಾಳೆ ಎಂದು ಹೇಳಿ ಮಹಿಳೆ ಕಪಾಳಕ್ಕೆ ಹೊಡೆಯುತ್ತಿರುವುದನ್ನು ಮರೆತಿರುತ್ತೇವೆ.12ನೇ ಶತಮಾನದಲ್ಲಿ ಬಸವಾದಿ ಶರಣರೊಂದಿಗೆಸರಿದೊರೆಯಾದ ಮಹಿಳೆಯರು ಆಧುನಿಕಕಾಲದಲ್ಲಿ ಕಾಣೆಯಾಗಿರುವುದಕ್ಕೆ ಕಾರಣಗಳೇನು? ಮಹಿಳೆಯರನ್ನು ವ್ಯವಸ್ಥಿತವಾಗಿ ಅಂಚಿಗೆ ತಳ್ಳುತ್ತಿರುವ ಹಳೆಯ ಕೈಗಳೊಂದಿಗೆ ಜಾಗತಿಕ ಕೈಗಳು ಸೇರಿಕೊಂಡಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಶೋಷಣೆಗೆ ಒಳಪಡಿಸಿದವರು ಯಾರು: ಶೂದ್ರಸಮುದಾಯ ಮತ್ತು ಮಹಿಳೆಯರನ್ನು ಶತಶತಮಾನಗಳಿಂದ ಶೋಷಣೆಗೆ ಒಳಪಡಿಸಿದವರು ಯಾರು ಎಂಬುದನ್ನು ನಮ್ಮ ಜನಪದ ಮಹಿಳೆಕರಾರುವಕ್ಕಾಗಿ ಹೇಳಿರುವಳು. ಪಂಚಾಂಗವೆಂಬುದು ಮೋಸಗಾರರು ಸೃಷ್ಟಿಸಿದ ಬಹುದೊಡ್ಡ ಸಂಚು. ಈ ಸಂಚಿಗೆ ಬಲಿಯಾಗದ ಹಾಗೆ ಸಮಾಜವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಹುಡುಗರ ಕಣ್ಣಲ್ಲಿ ಬಾದಾಮಿ ಹುಡುಗಿಯರು! :
ನನ್ನ ತಾಯಿಯ ಊರು ಬಾದಾಮಿ ತಾಲೂಕಿನ ಹಂಗರಗಿ. ಬಾದಾಮಿಯಲ್ಲಿ ಪದವಿ ಕಾಲೇಜು ಇರಲಿಲ್ಲ. ಹೀಗಾಗಿ ನಾವು 12 ಜನ ಹುಡುಗಿಯರು ಬಾದಾಮಿ, ಹೊಳೆಆಲೂರಿನ ಹಲವುಹುಡುಗಿಯರು ಕಾಲೇಜು ಶಿಕ್ಷಣಕ್ಕೆ ಬಾಗಲಕೋಟೆಯ ಬಸವೇಶ್ವರ ಕಾಲೇಜಿಗೆ ಬರುತ್ತಿದ್ದೇವು. ಅದಕ್ಕೆ ಹುಬ್ಬಳ್ಳಿ-ಸೊಲ್ಲಾಪುರ ರೈಲಿನಲ್ಲಿ ಬಾಗಲಕೋಟೆಗೆ ಬಂತು, ಕಾಲೇಜು ಆವರಣದ ಹುಡುಗರವಸತಿ ನಿಲಯದ ಎದುರು ಹಾದು ಹೋಗುತ್ತಿದ್ದೇವು. ಆಗ ಹಾಸ್ಟೇಲ್ ಹುಡುಗರು ನಮ್ಮನ್ನುಬಾದಾಮಿ ಗಾಡಿ ಬಂತು ನೋಡ್ರಿ ಅಂತ ಕರೆಯುತ್ತಿದ್ದರು. ನಮ್ಮಲ್ಲಿ 12 ಜನ ಹುಡುಗಿಯರಲ್ಲಿಒಬ್ಬರು ಕಾಲೇಜಿಗೆ ಬರದಿದ್ದರೂ ಯಾಕ್ ಬಾದಾಮಿ ಟ್ರೇನಿನ ಒಂದ ಡಬ್ಬಿ ಕಾಣವಲ್ಲದು ನೋಡ ಎಂದು ನಮ್ಮ ಕಿವಿಗೆ ಕಾಣುವ ಹಾಗೆ ರೇಗಿಸುತ್ತಿದ್ದರು ಎಂದು ಡಾ| ಮಲ್ಲಿಕಾ ಘಂಟಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.