ಗೆಲುವ ಗುರಿಯೊಂದಿಗೆ ಸ್ಪರ್ಧಿಸಿ: ಶಾಸಕ ಕೋಟ್ಯಾನ್
Team Udayavani, Dec 6, 2018, 12:00 PM IST
ಮಂಗಳೂರು: ಸ್ಪರ್ಧೆ ಇನ್ನೊಬ್ಬರ ಪೈಪೋಟಿ ಆಗಿರಬಾರದು. ಅದರ ಬದಲಾಗಿ ನಾವು ಗೆಲ್ಲುವ ಗುರಿಯೊಂದಿಗೆ ಸ್ಪರ್ಧಿಸಿ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ರಾಜ್ಯ ಸರಕಾರಿ ನೌಕರರ ಸಂಘ ಆಶ್ರಯದಲ್ಲಿ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ-ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ನೌಕರರು ತಮ್ಮ ಕೆಲಸದಲ್ಲಿ ತೊಡಗಿದ ಬಳಿಕ ಹೊರ ಜಗತ್ತಿನ ಕಲ್ಪನೆ ಅವರಿಗೆ ಇರುವುದಿಲ್ಲ. ಅವರಿಗೆ ಕೆಲಸವೇ ಮುಖ್ಯವಾಗಿರುತ್ತದೆ. ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸರಕಾರಿ ನೌಕರಿ ಗಿಟ್ಟಿಸಿ ಸಾಧಿಸಿದ ಅನೇಕ ಮಂದಿ ಕ್ರೀಡಾಪಟುಗಳು ಜಿಲ್ಲೆಯಲ್ಲಿದ್ದಾರೆ. ಪ್ರತಿಭೆಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಸಿಕ್ಕರೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಾಧಿಸಲು ಸಾಧ್ಯ ಎಂದರು.
ಸಮ್ಮಾನ
ಉದ್ಘಾಟನ ಸಮಾರಂಭದಲ್ಲಿ ಜಯಕೀರ್ತಿ ಜೈನ್, ಜಯಪ್ಪ ಲಮಾಣಿ, ವಿನ್ಸೆಂಟ್ ಕಾರ್ಲೋ ಅವರನ್ನು ಸಮ್ಮಾನಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಭಾಗೀರಥಿ ರೈ, ಹೇಮಚಂದ್ರ, ಜಯಪ್ಪ ಲಮಾನಿ ಅವರು ಕ್ರೀಡಾಜ್ಯೋತಿಯನ್ನು ಗಣ್ಯರಿಗೆ ಹಸ್ತಾಂತರಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿ’ಸೋಜಾ, ಸಂಘದ ಅಧ್ಯಕ್ಷ ಪ್ರಕಾಶ್ ನಾಯಕ್, ಜಯಂತ್, ಶಿವಶಂಕರ್‌ಭಟ್, ಲೋಕೇಶ್, ರೀಟಾ, ದೇವದಾಸ್, ಕೃಷ್ಣ, ಶರ್ಲಿನ್, ಲಿಲ್ಲಿ ಪಾಯಿಸ್ ಸೇರಿದಂತೆ ಮತ್ತಿತರರು ಇದ್ದರು.
ಕ್ರೀಡೆಯಿಂದ ಮಾನಸಿಕ ದೃಢತೆ
ಮುಖ್ಯ ಅತಿಥಿಯಾಗಿದ್ದ ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಸರಕಾರಿ ನೌಕರರು ಈ ರೀತಿಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟಾರೆ 9,000ಕ್ಕೂ ಹೆಚ್ಚಿನ ಸರಕಾರಿ ನೌಕರರಿದ್ದು, ಶೇ.25ರಷ್ಟು ಮಂದಿಯೂ ಭಾಗವಹಿಸುವುದಿಲ್ಲ. ಸರಕಾರಿ ನೌಕರರು ಕೇವಲ ಕಚೇರಿ ಕೆಲಸಕ್ಕೆ ಸೀಮಿತರಾಗಬಾರದು. ಸಾರ್ವಜನಿಕರಿಗೆ ಗುಣಾತ್ಮಕ ಸೇವೆಯಗಳನ್ನು ಒದಗಿಸಲು ಮತ್ತು ಮಾನಸಿಕ ವಾಗಿ ದೃಢತೆಯನ್ನು ಗಳಿಸಿಕೊಳ್ಳಲು ಕ್ರೀಡೆ ಸಹಕಾರಿ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.