ನೇಕಾರರ ಧ್ವನಿಯಾಗಲು ಬಂದಿದ್ದೇನೆ-ಡಿಕೆಶಿ


Team Udayavani, Jul 18, 2021, 5:41 PM IST

ನೇಕಾರರ ಧ್ವನಿಯಾಗಲು ಬಂದಿದ್ದೇನೆ-ಡಿಕೆಶಿ

ಬನಹಟ್ಟಿ : ಪಕ್ಷ, ಜಾತಿ, ಧರ್ಮ ಬಿಟ್ಟು ಸಮಗ್ರ ನೇಕಾರರ ಭಾವನೆ, ದು:ಖ ಕೇಳುವದರೊಂದಿಗೆ ನೇಕಾರರಿಗೆ ಶಕ್ತಿ ನೀಡಿ ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನದೊಂದಿಗೆ ನೇಕಾರ-ಸಂವಾದದಲ್ಲಿ ಪಾಲ್ಗೊಂಡು ನೇಕಾರರ ಧ್ವನಿಯಾಗಲು ಬಂದಿದ್ದೇನೆ ಹೊರತು ಯಾವದೇ ರಾಜಕೀಯ ದುರುದ್ಧೇಶ ಅಥವಾ ಮತ ಕೇಳಲು ಬಂದಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.

ರವಿವಾರ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಬಸವೇಶ್ವರ ಸಮುದಾಯ ಭವನದಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರದ ನೇಕಾರ ಸಮಸ್ಯೆ ಆಲಿಸಲು ಹಾಗು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜ್ಯದ ಅನೇಕ ಕಡೆಗಳಲ್ಲಿ ನೇಕಾರಿಕೆ ಉದ್ದಿಮೆಯಿದೆ. ಮಹತ್ವದ್ದಾಗಿ ದೊಡ್ಡ ಬಳ್ಳಾಪುರ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಎಲ್ಲೆಡೆ ನೇಕಾರರ ಸಮಸ್ಯೆಗಳನ್ನು ಆಲಿಸಿ ಅವರ ಧ್ವನಿಯಾಗಿ ವಿಧಾನಸೌಧದಲ್ಲಿ ನಿಲ್ಲುತ್ತೇನೆ. ಸಾಕಷ್ಟು ಸಮಸ್ಯೆಗಳನ್ನು ಹೊತ್ತು ನಿಂತಿರುವ ಜವಳಿ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆಯುವಲ್ಲಿ ಈ ಸಂವಾದ ಕಾರಣವಾಗಲಿದ್ದು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಇಂತಹ ಮಹತ್ವದ ಸಂವಾದ ಕಾರ್ಯಕ್ರಮ ಜರುಗಿರುವದು ಸಮಾಧಾನ ತರುತ್ತಿದೆ ಅಲ್ಲದೆ ಇವೆಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ಡಿ.ಕೆ. ಶಿವಕುಮಾರ ಹೇಳಿದರು.

ನೆರೆಯ ರಾಜ್ಯಗಳ ಜವಳಿ ಯೋಜನೆಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಒತ್ತಾಯಿಸುವದಲ್ಲದೆ ಮುಂದಿನ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ನೇಕಾರರ ಎಲ್ಲ ಸಮಸ್ಯೆಗಳಿಗೆ ಪರಿಹಾರವಿರುತ್ತವೆ. ಸಂವಾದ ಕಾರ್ಯಕ್ರಮವನ್ನು ಸಾಮಾನ್ಯ ಮಹಿಳೆಯಿಂದ ಉದ್ಘಾಟನೆ ಮಾಡಲು ಡಿ.ಕೆ. ಶಿವಕುಮಾರ ಕಲ್ಪಿಸಿಕೊಡುವ ಮೂಲಕ ಎಲ್ಲ ಕಾರ್ಯಕ್ರಮ ನೇಕಾರರದ್ದಾಗಿದೆ ಎಂದು ಅರಿವು ಮೂಡಿಸಿದರು. ಚರಕ ಸುತ್ತುವ ಮೂಲಕ ಡಿ. ಕೆ. ಶಿವಕುಮಾರ ಚಾಲನೆ ನೀಡಿದರು.

ಸಂವಾದ ಕಾರ್ಯಕ್ರಮದಲ್ಲಿ 20 ಕ್ಕೂ ಅಧಿಕ ಜನರ ನೂಲಿನ ಗಿರಣಿ, ಜೋಡಣೆದಾರರ ಸಮಸ್ಯೆ, ಸಮಗ್ರ ನೇಕಾರಿಕೆ ತೊಂದರೆ, ಕೂಲಿ-ಕಾರ್ಮಿಕರ ಭವಣೆ, ಸಾಲ ಹಾಗು ಸಾಲಮನ್ನಾ ಸಂದರ್ಭ ನ್ಯೂನ್ಯತೆಗಳು, ಸೈಜಿಂಗ್ ಘಟಕಗಳ ಗೊಂದಲ ಹೀಗೆ ನೇಕಾರಿಕೆಯ ಹಲವಾರು ರಂಗಗಳಲ್ಲಿನ ನೂರಾರು ಸಮಸ್ಯೆಗಳನ್ನು ಈ ಭಾಗದ ಆಯಾ ವೃತ್ತಿ ನೇಕಾರ ಸಮುದಾಯದ ಮುಖಂಡರಿಂದ ಸಮಸ್ಯೆ ಆಲಿಸಿದರು.

ಇದನ್ನೂ ಓದಿ: ಬನಹಟ್ಟಿ : ಡಿಕೆಶಿಗೆ ಅದ್ದೂರಿ ಸ್ವಾಗತ ಕೋರಿದ ಕಾರ್ಯಕರ್ತರು

ರಾಜೀನಾಮೆ ನೀಡಲಿ: ಕಾಂಗ್ರೆಸ್ ಮುಖಂಡ ಎಂ.ಡಿ. ಲಕ್ಷ್ಮೀನಾರಾಯಣ ಮಾತನಾಡಿ, ನೇಕಾರರಿಗೆ ಯಾವದೇ ಸಮಸ್ಯೆಯಿಲ್ಲವೆಂದು ಹೇಳುತ್ತಿರುವ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ನೇಕಾರಿಕೆಯ ಅರಿವೇ ಇಲ್ಲ. ಜವಳಿ ಮಂತ್ರಿಗಳಂತು ಯಾವದೇ ಸಂಬಂಧವಿಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತೇರದಾಳ ಶಾಸಕರ ಬೇಜವಾಬ್ದಾರಿತನದಿಂದ ನೇಕಾರಿಕೆ ಉದ್ಯಮ ಸಂಪೂರ್ಣ ನೆಲಕಚ್ಚುವಲ್ಲಿ ಕಾರಣವಾಗಿದೆ. ಈ ಮೂವರೂ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ನೇಕಾರರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸರಣಿ ಆತ್ಮಹತ್ಯೆಗೀಡಾಗುತ್ತಿರುವ ನೇಕಾರ ಸಮುದಾಯಕ್ಕೆ ಸಾಂತ್ವನ ಹಾಗು ಧೈರ್ಯ ತುಂಬಲು ಸರ್ಕಾರ ವಿಫಲಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೈ ಮರೆತ ಜನ : ನೇಕಾರರ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಿಕೆಶಿ ಅವರನ್ನು ನೋಡಲು ಆಗಮಿಸಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ರು. ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಕೊರೊನಾ ನಿರ್ಲಕ್ಷಿಸಿ ಮೈಮರೆತಿದ್ದು ಕಂಡುಬAತು. ಇದು ಸಾಮಾನ್ಯರಿಗೆ ಒಂದು ನಿಯಮ, ರಾಜಕಾರಣಿಗಳಿಗೆ ಮತ್ತೊಂದು ನಿಯಮವೇ ಎನ್ನುವಂತಾಯಿತು.

ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ, ಶಾಸಕ ಆನಂದ ನ್ಯಾಮಗೌಡ, ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಡಾ. ಪದ್ಮಜೀತ ನಾಡಗೌಡ ಪಾಟೀಲ, ಡಾ. ಎ.ಆರ್. ಬೆಳಗಲಿ, ಶಂಕರ ಸೊರಗಾಂವಿ, ನೀಲಕಂಠ ಮುತ್ತೂರ, ರಾಜೇಂದ್ರ ಭದ್ರನ್ನವರ, ನೀಲಕಂಠ ಮುತ್ತೂರ, ಶಂಕರ ಜಾಲಿಗಿಡದ, ಬಸವರಾಜ ಯೆಂಡಿಗೇರಿ, ಬ್ರೀಜಮೋಹನ ಡಾಗಾ,  ಸತ್ಯಪ್ಪ ಮಗದುಮ, ಮಲ್ಲಪ್ಪ ಸಿಂಗಾಡಿ, ಚಿದಾನಂದ ಗಾಳಿ, ಶ್ರೀಶೈಲ ಮೇಣಿ, ಶ್ರೀನಿವಾಸ ಬಳ್ಳಾರಿ, ಡಿ. ಎಲ್. ಹರೀಷ, ರವೀಂದ್ರ ಕಲಬುರ್ಗಿ, ಕೆ.ಪಿ.ಸಿ.ಸಿ.ರಾಜ್ಯ ಮಹಿಳಾ ಅಧ್ಯಕ್ಷರು ಪುಷ್ಪಾ ಅಮರನಾಥ, ಪ್ರವೀಣ ನಾಡಗೌಡ, ಅಶೋಕ ಆಳಗೊಂಡ, ಕಾಶಿನಾಥ ಹುಡೇದ, ರಂಗನಗೌಡ ಪಾಟೀಲ, ಈಶ್ವರ ಚಮಕೇರಿ, ಮೊಹಮ್ಮದ ಝಾರೆ, ಮೀನಾಕ್ಷೀ ನೆಲಗಡೆ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಸೇರಿದಂತೆ ಅನೇಕರಿದ್ದರು.

ಟಾಪ್ ನ್ಯೂಸ್

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Rabkavi Banhatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

4-

ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್‌ ಕದ್ದ ಅಪರಿಚಿತ ವ್ಯಕ್ತಿ

Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ

Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ

5

Chikkodi: ಕಾನೂನು ಪದವಿ ಓದುತ್ತಿದ್ದ ಯುವಕ ಆತ್ಮಹ*ತ್ಯೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.