ಭಾರತ-ಚೀನಾ ಸಂಬಂಧ ಕೆಡಿಸುವಿಕೆ ಬೇಡ
Team Udayavani, Jun 8, 2019, 1:21 PM IST
ಮುಧೋಳ: ನಗರದ ನಿರಾಣಿ ಉದ್ಯಮ ಸಮೂಹಕ್ಕೆ ಭೇಟಿ ನೀಡಿದ ಚೀನಾ ದೇಶದ ಯುವ ಉದ್ಯಮಿ ಲಿಮಿಂಗ್ ಜಿಯಾನ್ ಅವರನ್ನು ಕಾರ್ಖಾನೆಯ ಪರವಾಗಿ ವಿಜಯ ನಿರಾಣಿ ಸನ್ಮಾನಿಸಿದರು.
ಮುಧೋಳ: ಭಾರತ-ಚೀನಾ ದೇಶಗಳ ನಡುವೆ 1962ರಲ್ಲಿ ನಡೆದ ಯುದ್ಧ ದುರದೃಷ್ಟದ ಸಂಗತಿ. ಅದು ನಡೆಯಬಾರದಿತ್ತು. ಚೀನಾ-ಭಾರತದ ಜನರ ನಡುವೆ ಪ್ರೀತಿ ಇದೆ. ರಾಜಕೀಯ ಕಾರಣಕ್ಕಾಗಿ ಈ ಸಂಬಂಧವನ್ನು ಕೆಲವರು ಕೆಡಿಸುತ್ತಿದ್ದಾರೆ ಎಂದು ಚೀನಾ ದೇಶದ ಯುವ ಉದ್ಯಮಿ ಲಿಮಿಂಗ್ ಜಿಯಾನ್ ಹೇಳಿದರು.
ಮುಧೋಳದ ನಿರಾಣಿ ಉದ್ಯಮ ಸಮೂಹಕ್ಕೆ ವ್ಯಾಪಾರ ವಹಿವಾಟು ಅಭಿವೃದ್ಧಿ ಉದ್ದೇಶದಿಂದ ಭೇಟಿ ನೀಡಿದ ಅವರು ಕಾರ್ಖಾನೆಯ ಪರವಾಗಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಭಾರತ-ಚೀನಾ ನಡುವೆ ವ್ಯಾಪಾರ ವಹಿವಾಟು ಹೆಚ್ಚುತ್ತಿದೆ. ಕೈಗಾರಿಕೆಗಳಿಗೆ ಸಂಬಂಧಿಸಿದ ವ್ಯವಹಾರ-ಉದ್ಯೋಗಗಳು ಬೆಳೆಯುತ್ತಿವೆ. ಇದೊಂದು ಉತ್ತಮ ಬೆಳವಣಿಗೆ ಎಂದರು.
ಭಾರತ-ಚೀನಾ ದೇಶಗಳ ಸಂಸ್ಕೃತಿ ಬಹಳಷ್ಟು ಸಾಮ್ಯ ಹೊಂದಿದೆ. ಚೀನಾ ದೇಶದಲ್ಲಿ ಆಚರಣೆಯಲ್ಲಿರುವ ಬೌದ್ಧ ಧರ್ಮ ಭಾರತದ ಕೊಡುಗೆಯಾಗಿದೆ. ಭಾರತದ ದೀಪಾವಳಿ ಹಾಗೂ ಚೀನಾ ದೇಶ ವಾರ್ಷಿಕ ಹಬ್ಬ ಒಂದೇ ರೀತಿಯಾಗಿದೆ. ಎರಡೂ ದೇಶಗಳ ಕೌಟುಂಬಿಕ ವಿಧಾನಗಳು ಕೂಡಾ ಒಂದೇ ಬಗೆಯಾಗಿವೆ. ಭಾರತದ ನೋಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರ ಬಗ್ಗೆ ಚೀನಿ ದೇಶದ ಜನತೆ ಬಹಳ ಅಭಿಮಾನ ಹೊಂದಿದ್ದಾರೆ. ಅಲ್ಲಿಯ ಪಠ್ಯಪುಸ್ತಕ ಗಳಲ್ಲಿ ಟ್ಯಾಗೋರ ಅವರ ಬಹಳಷ್ಟು ಕವಿತೆಗಳನ್ನು ಸೇರಿಸಲಾಗಿದೆ. ಅಲ್ಲಿಯ ಶಾಲೆ-ಕಾಲೇಜುಗಳಲ್ಲಿ ರವೀಂದ್ರನಾಥ ಟ್ಯಾಗೋರ ಅವರ ಫೋಟೋ ಹಾಕಲಾಗಿದೆ. ಭಾರತ-ಚೀನಾ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ ಸಮರ್ಥವಾಗಿ ನಡೆಯುತ್ತಿವೆ. ಚೀನಿ ದೇಶದ ಕಲಾವಿದರು ಅನೇಕ ಭಾರಿ ಬೆಂಗಳೂರು, ಮೈಸೂರು ಭಾಗಕ್ಕೆ ಬಂದು ಕಲಾ ಪ್ರದರ್ಶನ ನೀಡಿದ್ದಾರೆ. ಭಾರತದ ಹಿಂದಿ ಚಲನಚಿತ್ರಗಳ ಬಗ್ಗೆ ಹಾಗೂ ಗಾಯಕರ ಬಗ್ಗೆ ಇಡೀ ಚೀನಿ ಜನತೆ ಬಹಳ ಪ್ರೀತಿ ಹೊಂದಿದೆ. ಅಲ್ಲಿ ಪ್ರದರ್ಶನಗೊಳ್ಳುವ ಎಲ್ಲ ಹಿಂದಿ ಚಲನಚಿತ್ರಗಳನ್ನು ಜನ ಮುಗಿಬಿದ್ದು ನೋಡುತ್ತಾರೆ ಎಂದು ಅವರು ಹೇಳಿದರು. ನಿರ್ದೇಶಕ ವಿಜಯ ಮುರುಗೇಶ ನಿರಾಣಿ ಲಿಮಿಂಗ್ ಜಿಯಾನ್ ಅವರನ್ನು ಕಾರ್ಖಾನೆ ಪರವಾಗಿ ಸನ್ಮಾನಿಸಿದರು.
ಮಲ್ಲಿಕಾರ್ಜುನ ಹೆಗ್ಗಳಗಿ, ಬಸವರಾಜ ಶೆಲ್ಲಿಕೇರಿ, ರಾಮನಗೌಡ ನಾಡಗೌಡ, ಸಂದೇಶ, ನಾಗರಾಜ ನಾಡಕರ್ಣಿ, ಅಶೋಕ ದೇವರಡ್ಡಿ, ಶಿಂಧೆ, ಸುರೇಶ ಅಕ್ಕಿಮರಡಿ, ಕುಮಾರ ಡುಮ್ಮಾಳಿ, ನಿಂಗಪ್ಪ ಗೂಗಿಹಾಳ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.