ಪಕ್ಷದ ಕಚೇರಿ ಕಟ್ಟಡಕ್ಕೆ ಜೋಳಿಗೆ ಹಾಕಿದ ಜಿಲ್ಲಾಧ್ಯಕ್ಷ!

ಕಾಂಗ್ರೆಸ್‌ ಭವನ ನಿರ್ಮಾಣಕ್ಕೆ ಕಾರ್ಯಕರ್ತರು-ಅಭಿಮಾನಿಗಳಿಂದ ದೇಣಿಗೆ

Team Udayavani, Nov 21, 2020, 4:52 PM IST

bk-tdy-1

ಬಾಗಲಕೋಟೆ: ಜೋಳಿಗೆ ಮೂಲಕ ಕಾರ್ಯಕರ್ತರ ಬಳಿಗೆ ಹೋಗಲು ಸಿದ್ಧರಾದ ನಂಜಯ್ಯನಮಠ.

ಬಾಗಲಕೋಟೆ: ನವನಗರದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಕಾಂಗ್ರೆಸ್‌ ಭವನ ಪೂರ್ಣಕ್ಕಾಗಿ ಪಕ್ಷದ ಜಿಲ್ಲಾ ಅಧ್ಯಕ್ಷಎಸ್‌.ಜಿ. ನಂಜಯ್ಯನಮಠ ಅವರು ಕಾರ್ಯಕರ್ತರು, ಪಕ್ಷದ ಅಭಿಮಾನಿಗಳಿಂದ ದೇಣಿಗೆ ಸಂಗ್ರಹಕ್ಕೆ ಜೋಳಿಗೆ ಹಾಕಲು ಮುಂದಾಗಿದ್ದಾರೆ.

ಜಿಲ್ಲೆಯಲ್ಲಿ ಪಕ್ಷದ ಶಾಸಕರು, ಮಾಜಿ ಶಾಸಕರು, ಸಾವಿರಾರು ಪ್ರಮುಖರು, ಕಾರ್ಯಕರ್ತರು, ಅಭಿಮಾನಿಗಳು ಇದ್ದಾರೆ. ಮುಖ್ಯವಾಗಿ ಪ್ರತಿಯೊಬ್ಬ ಕಾರ್ಯಕರ್ತ, ಅಭಿಮಾನಿಯಿಂದ ಕನಿಷ್ಠ ಒಂದು ರೂಪಾಯಿ ಹಣವಾದರೂ ಕಾಂಗ್ರೆಸ್‌ ಭವನದ ಕಟ್ಟಡಕ್ಕೆ ಪಡೆಯಬೇಕು. ಆ ಮೂಲಕ ಪ್ರತಿಯೊಬ್ಬರ ಮನಸ್ಸಿನಲ್ಲಿ ಕಾಂಗ್ರೆಸ್‌ ಪಕ್ಷ, ಜಿಲ್ಲಾ ಕಚೇರಿನಮ್ಮದು ಎಂಬ ಭಾವನೆ ಅವರಲ್ಲಿ ಬರಬೇಕು ಎಂಬುದು ಜಿಲ್ಲಾಧ್ಯಕ್ಷರ ಆಶಯ. ಹೀಗಾಗಿ ಜೋಳಿಗೆ ಹಾಕಿ ದೇಣಿಗೆ ಪಡೆಯಲು ಸಿದ್ಧರಾಗಿದ್ದಾರೆ.

ಹಲವರ ದೇಣಿಗೆ: ನೂತನ ಕಟ್ಟಡದಲ್ಲಿ ಬಾಗಲಕೋಟೆ ಗ್ರಾಮೀಣ ಮತ್ತು ನಗರ ಹಾಗೂ ಜಿಲ್ಲಾ ಕಾರ್ಯಲಯ, ಒಂದು ದೊಡ್ಡದಾದ ಸಭಾಭವನ ನಿರ್ಮಾಣವಾಗಲಿದೆ. ಪಂಚತಾರಾ ಹೊಟೇಲ್‌ ಸಂಸ್ಕೃತಿಗೆ ಬ್ರೇಕ್‌ ಹಾಕಿ, ಕೆಪಿಸಿಸಿಯಿಂದ ಯಾರೇ ಬಂದರೂ ಅವರು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲೇ ವಾಸ್ತವ್ಯ ಮಾಡಬೇಕು ಎಂಬುದು ನಂಜಯ್ಯನಮಠ ಅವರ ಅಭಿಲಾಷೆ. ಆ ನಿಟ್ಟಿನಲ್ಲಿ ವಿಐಪಿ ಕೊಠಡಿ ಕೂಡ ನಿರ್ಮಿಸಲಾಗುತ್ತಿದೆ. ಅಂದಾಜು 45 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಅತಿಥಿಗೃಹ ನಿರ್ಮಾಣಕ್ಕೆ ಜಿಲ್ಲೆಯ ಪಕ್ಷದ ಯಾವುದೇ ನಾಯಕರು ದೇಣಿಗೆ ನೀಡಲು ಮುಂದೆ ಬಂದರೆ ಅವರು ಸೂಚಿಸುವ ಅವರ

ಮನೆತನದವರ ಹೆಸರಿನಡಿ ನಿರ್ಮಾಣ ಮಾಡಲಾಗುವುದು. ಈಗಾಗಲೇ ಕಾಂಗ್ರೆಸ್‌ ಕಚೇರಿ ನಿರ್ಮಾಣಕ್ಕೆ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲರು 5 ಲಕ್ಷ ರೂ., ಮಾಜಿ ಸಚಿವೆ ಉಮಾಶ್ರೀ ಹಾಗೂ ತೇರದಾಳ ಭಾಗದ ಪ್ರಮುಖರು, ಕಾರ್ಯಕರ್ತರು ಕೂಡಿ 3.5 ಲಕ್ಷ ರೂ., ಜಮಖಂಡಿ ಶಾಸಕ ಆನಂದ ನ್ಯಾಮಗೌಡರು ಕಾರ್ಯಕರ್ತರು ಸೇರಿ 1 ಲಕ್ಷ ರೂ. ಹಾಗೂ 500 ಚೀಲ ಸಿಮೆಂಟ್‌ ಸಹ ನೀಡಿದ್ದಾರೆ. ಮಾಜಿ ಸಚಿವ-ವಿಧಾನಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ 600 ಚೀಲ ಸಿಮೆಂಟ್‌ ಕೊಡಿಸಿದ್ದಾರೆ.

ಜೋಳಿಗೆ ಸಂಪ್ರದಾಯ ಹೊಸದಲ್ಲ: ಜೋಳಿಗೆಹಾಕಿ ಶಾಲೆ, ಪಕ್ಷದ ಕಟ್ಟಡಗಳು ಸಹಿತ ಹಲವು ಸಾಮಾಜಿಕ, ರಾಜಕೀಯ, ಶೈಕ್ಷಣಿಕಕಾರ್ಯಕ್ರಮ ನಡೆಸಿರುವದು ಜಿಲ್ಲೆಗೆಹೊಸದೇನಲ್ಲ. ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ, ಮೂಲತಃ ಜಂಗಮ ಸಮಾಜದವರಾಗಿದ್ದು, ಅವರಿಗೂ ಜೋಳಿಗೆ ಹಾಕುವ ಸಂಪ್ರದಾಯ ಹೊಸದಲ್ಲ. ಹೀಗಾಗಿ ಜಿಲ್ಲೆಯಾದ್ಯಂತ ಇರುವಪಕ್ಷದ ಪ್ರತಿ ಕಾರ್ಯಕರ್ತ, ಪಕ್ಷದ ಅಭಿಮಾನಿಯಿಂದ ಕನಿಷ್ಠ ದೇಣಿಗೆ ಪಡೆಯಬೇಕು.

ಅದಕ್ಕಾಗಿ ಜೋಳಿಗೆ ಹಾಕಿ, ನಗರ, ಪಟ್ಟಣ ಹಾಗೂ ಗ್ರಾಮ ಮಟ್ಟದ ಪ್ರಮುಖ ಸ್ಥಳಕ್ಕೆ ತೆರಳಲು ನಿರ್ಧರಿಸಿದ್ದಾರೆ. ಈ ಕಾರ್ಯಕ್ಕೆ ನ. 21ರಂದು ನಂಜಯ್ಯನಮಠ ಅವರಹುಟ್ಟೂರು, ಹುನಗುಂದ ತಾಲೂಕಿನ ಸೂಳೇಭಾವಿಯಿಂದಲೇ ಚಾಲನೆ ನೀಡಲಿದ್ದಾರೆ.

ನನ್ನ ಗ್ರಾಮದಿಂದ ಈ ಜೋಳಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡುವೆ. ಕಾಂಗ್ರೆಸ್‌ ಭವನ ಕಟ್ಟಡ ಸಹಾಯಕ್ಕಾಗಿಯೇ ವಿಶೇಷ ಜೋಳಿಗೆ ತಯಾರಿಸಲಾಗಿದೆ. ಪಕ್ಷದ ದೊಡ್ ನಾಯಕರು, ಉದ್ಯಮಿಗಳಿಂದ ಹಣ ಪಡೆಯಬಹುದು. ಆದರೆ, ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತರ ಬಳಿಗೆ ಹೋಗಿ, ಕನಿಷ್ಠ 10ರೂ.ರವರೆಗೂ ಪಡೆಯಬೇಕು ಎಂಬುದು ನನ್ನ ಆಶಯ. ಪಕ್ಷದ ಹಿರಿಯರು, ಸಾಮಾನ್ಯ ಕಾರ್ಯಕರ್ತರ, ಅಭಿಮಾನಿಗಳ ಬೆವರಿನ ಹನಿಯ ಒಂದು ರೂಪಾಯಿ ಕಾಂಗ್ರೆಸ್‌ ಭವನಕ್ಕೆ ವಿನಿಯೋಗವಾಗಬೇಕು ಎಂಬುದು ನನ್ನ ಆಶಯ.  -ಎಸ್‌.ಜಿ. ನಂಜಯ್ಯನಮಠ, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ

 

-ವಿಶೇಷ ವರದಿ

ಟಾಪ್ ನ್ಯೂಸ್

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Rabkavi Banhatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

4-

ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್‌ ಕದ್ದ ಅಪರಿಚಿತ ವ್ಯಕ್ತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.