ಮಹಾಲಿಂಗಪುರದಲ್ಲಿ ಕತ್ತೆಗಳ ಹಾವಳಿ
ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿ
Team Udayavani, Oct 16, 2020, 4:01 PM IST
ಮಹಾಲಿಂಗಪುರ: ಪಟ್ಟಣದಲ್ಲಿ ಬಿಡಾಡಿ ಕತ್ತೆಗಳ ಹಾವಳಿ ಹೆಚ್ಚಾಗಿದ್ದು,ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಕತ್ತೆಗಳ ಹಾವಳಿ ಹೆಚ್ಚಾಗಿದ್ದರೂ ಸಹ ಪುರಸಭೆ ಅಧಿ ಕಾರಿಗಳು ಗಮನಹರಿಸದಿರುವುದು ಸಾರ್ವಜನಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಚನ್ನಮ್ಮ ವೃತ್ತ, ಅಷ್ಟಗಿ ಚಿತ್ರಮಂದಿರ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಜವಳಿ ಬಜಾರ, ಡಬಲ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳೇ ಕತ್ತೆಗಳ ಆವಾಸ ತಾಣವಾಗಿದೆ. ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯ ಮಧ್ಯದಲ್ಲೇ ಬಿಡಾಡಿ ಕತ್ತೆಗಳು ನಿಲ್ಲುತ್ತಿರುವುದು ಹಾಗೂ ಮಲಗಿಕೊಳ್ಳುತ್ತಿರುವದರಿಂದಗಿ ದ್ವಿಚಕ್ರ ವಾಹನ ಸೇರಿದಂತೆ ಪ್ರತಿಯೊಂದು ಬೃಹತ್ ವಾಹನ ಸವಾರರಿಗೂ ಕಿರಿಕಿರಿಯುಂಟು ಮಾಡುತ್ತಿವೆ. ಜತೆಗೆ ರಸ್ತೆಯ ತಿರುವುಗಳಲ್ಲಿ ಬರುವ ವಾಹನ ಸವಾರರು, ಎಲ್ಲಿ ಕತ್ತೆಗಳು ಅಡ್ಡ ಬರುತ್ತವೆಯೋ ಎಂಬ ಆತಂಕದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿದೆ. ಈ ಕತ್ತೆಗಳು ನೆರೆಯ ಚಿಮ್ಮಡ ಗ್ರಾಮ ಮತ್ತು ರಬಕವಿ-ಬನಹಟ್ಟಿ ನಗರಗಳ ಖಾಸಗಿ ವ್ಯಕ್ತಿಗಳಿಗೆ ಸೇರಿವೆ. ಕತ್ತೆಗಳ ಮಾಲೀಕರು ಪ್ರತಿವರ್ಷ ರಬಕವಿ-ಬನಹಟ್ಟಿ ಭಾಗಗಳಲ್ಲಿನ ಇಟ್ಟಿಗೆ ತಯಾರಿಕೆಯ ಭಟ್ಟಿಗಳಲ್ಲಿ ಮತ್ತು ರಬಕವಿ-ಬನಹಟ್ಟಿ, ರಾಮಪುರ ಭಾಗದಲ್ಲಿನ ಇಕ್ಕಾಟದ ಪ್ರದೇಶಗಳಲ್ಲಿ ಇಟ್ಟಿಗೆ, ಉಸುಕು, ಕಲ್ಲು ಸಾಗಾಣಿಕೆಗೆ ಕತ್ತೆ ಬಳಸುತ್ತಾರೆ. ಕೆಲಸದ ಒತ್ತಡಗಳು ಕಡಿಮೆ ಇದ್ದಾಗ ಕತ್ತೆಗಳನ್ನು ಪಟ್ಟಣಕ್ಕೆ ತಂದು ಬಿಡುತ್ತಾರೆ ಎನ್ನಲಾಗಿದೆ. ಕತ್ತೆಗಳನ್ನು ವರ್ಷವಿಡಿ ದುಡಿಸಿಕೊಳ್ಳುವ ಮಾಲೀಕರು ಬೇಕಾಬಿಟ್ಟಿಯಾಗಿ ಬಿಟ್ಟಿರುವ ಕಾರಣ, ಕತ್ತೆಗಳು ಪಟ್ಟಣದ ಸುತ್ತಮುತ್ತಲಿನ ರೈತರ ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ. ಜತೆಗೆ ಪಟ್ಟಣದ ಪ್ರಮುಖ ರಸ್ತೆಯ ಉದ್ದಗಲಕ್ಕೂ ಕತ್ತೆಗಳ ಕಾಟ ಮಿತಿ ಮಿರಿದೆ. ಪ್ರಮುಖ ವೃತ್ತ ಮತ್ತು ರಸ್ತೆಗಳ ಮಧ್ಯೆಯೇ ಕತ್ತೆಗಳು ಮಲಗುವ ಪರಿಣಾಮ, ರಾತ್ರಿ ಸಮಯದಲ್ಲಿ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ.
ಪ್ರತಿವರ್ಷ ತಪ್ಪದ ಕತ್ತೆಗಳ ಹಾವಳಿ: ಪಟ್ಟಣದಲ್ಲಿ ವರ್ಷದ ಎರಡು ಅಥವಾ ಮೂರು ತಿಂಗಳು ಕತ್ತೆಗಳ ಕಾಟ ತಪ್ಪಿದಲ್ಲ. ಆದ ಕಾರಣ ಪುರಸಭೆಯವರು ಸಂಬಂಧಿಸಿದ ಕತ್ತೆಗಳ ಮಾಲೀಕರಿಗೆ ಕಟ್ಟೆಚ್ಚರ ನೀಡುವ ಮೂಲಕ ಪಟ್ಟಣದ ಪ್ರಮುಖ ರಸ್ತೆಗಿಳಿಯುತ್ತಿರುವಬಿಡಾಡಿ ಕತ್ತೆಗಳ ಹಾವಳಿ ಕಡಿವಾಣ ಹಾಕಬೇಕಾಗಿದೆ. ಅಧಿಕಾರಿಗಳು ತಕ್ಷಣ ಸಂಬಂಧಿಸಿದ ಕತ್ತೆಗಳ ಮಾಲೀಕರನ್ನು ಸಂಪರ್ಕಿಸಿ, ಅವುಗಳನ್ನು ಪಟ್ಟಣದಿಂದ ಹೊರಹಾಕಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿನ ಕತ್ತೆಗಳ ಹಾವಳಿಯಿರುವುದು ಗಮಕ್ಕೆ ಬಂದಿದೆ. ಚಿಮ್ಮಡ ಗ್ರಾಮ ಮತ್ತು ರಬಕವಿ-ಬನಹಟ್ಟಿ ನಗರಗಳಲ್ಲಿನ ಸಂಬಂಧಿಸಿದಕತ್ತೆಗಳ ಮಾಲೀಕರನ್ನು ಪತ್ತೆಹಚ್ಚಿ, ಅವರಿಗೆ ನೋಟಿಸ್ ನೀಡಲು ಕಿರಿಯ ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದ್ದೇನೆ. ನಿಗದಿತ ದಿನದೊಳಗೆ ಸಂಬಂ ಧಿಸಿದ ಮಾಲೀಕರು ಕತ್ತೆಗಳನ್ನು ತೆಗೆದುಕೊಂಡು ಹೋಗದಿದ್ದಲ್ಲಿ, ಪುರಸಭೆಯಿಂದಲೇ ಕತ್ತೆಗಳನ್ನು ಬೇರೆ ಕಡೆಗೆ ಸಾಗಿಸುವ ವ್ಯವಸ್ಥೆ ಮಾಡುತ್ತೇವೆ.–ಎಚ್.ಎಸ್.ಚಿತ್ತರಗಿ. ಮುಖ್ಯಾಧಿಕಾರಿಗಳು. ಪುರಸಭೆ.
-ಚಂದ್ರಶೇಖರ ಮೋರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.