ರಕ್ತ ಹರಿದರೂ ಚಿಂತೆಯಿಲ್ಲ, ಜಮೀನು ಬಿಟ್ಟು ಕೊಡಲ್ಲ: ಶಾಸಕ ಸಿದ್ದು ಸವದಿ
Team Udayavani, Oct 30, 2024, 10:27 AM IST
ಉದಯವಾಣಿ ಸಮಾಚಾರ
ರಬಕವಿ-ಬನಹಟ್ಟಿ: ಕಾಂಗ್ರೆಸ್ ಸರ್ಕಾರ ತಲೆ ತಲಾಂತರದಿಂದ ಉಳುಮೆ ಮಾಡುತ್ತಿದ್ದ ರೈತರ ಜಮೀನು ವಶಪಡಿಸಿಕೊಳ್ಳಲು ಮುಂದಾದರೆ ರಕ್ತ ಹರಿದರೂ ಚಿಂತೆಯಿಲ್ಲ ರೈತರ ಜಮೀನು ಬಿಟ್ಟು ಕೊಡಲ್ಲ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ನಗರದ ನಿರೀಕ್ಷಣಾ ಮಂದಿರದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ, ಸಚಿವರು, ಅಧಿಕಾರಿಗಳು ಯಾವುದೆ ರೈತರಿಗೆ ನೋಟಿಸ್ ನೀಡಿಲ್ಲ ಎಂದು ಹೇಳುತ್ತಿದ್ದರೂ ತೇರದಾಳ 420 ಎಕರೆಯ 110 ರೈತರಿಗೆ ನೋಟಿಸ್ ನೀಡಿದೆ. ಕಾಂಗ್ರೆಸ್ ಸರ್ಕಾರ ಮತ ರಾಜಕಾರಣ ಮಾಡುತ್ತಿದೆ.
ರೈತರಿಗೆ ದ್ರೋಹ ಬಗೆಯುತ್ತಿದೆ. ತೇರದಾಳದ ನೂರಾರು ರೈತರು 2018 ರಿಂದ ತಮ್ಮ ಜಮೀನು ಉಳಿಸಿಕೊಳ್ಳುವುದಕ್ಕೆ ಬೆಂಗಳೂರಿನ ವಕ್ಫ್ ಬೋರ್ಡ್‌ಗೆ ಅಲೆಯುತ್ತಿವೆ. ವಕ್ಫ್ ಬೋರ್ಡ್ ಮತ್ತು ಕಾನೂನು ರದ್ದು ಮಾಡಬೇಕು. ಸರ್ಕಾರ ರೈತರ ಜಮೀನುಗಳಿಗೆ ಬೇಲಿ ಹಾಕಿ ದಿಗ್ಬಂಧನ ಹಾಕುತ್ತಿರುವುದು ಖೇದಕರ ಸಂಗತಿ ಎಂದರು.
ಮತಗಳ ಓಲೈಕೆ: ದೇಶದಲ್ಲಿ 1990ರ ಅವಧಿಯಲ್ಲಿ 1.06 ಲಕ್ಷ ಎಕರೆಯಷ್ಟು ಹೊಂದಿದ್ದ ಭೂಮಿ ಇದೀಗ 2024 ಕ್ಕೆ 9.06 ಲಕ್ಷ
ಎಕರೆಯಷ್ಟು ಭೂಮಿ ಹೊಂದಿದೆ. ಕೇವಲ ಮುಸ್ಲಿಂ ಸಮುದಾಯದ ಮತಗಳ ಓಲೈಕೆಗೆ ಕಾಂಗ್ರೆಸ್ ನೀಚ ಕೆಲಸಕ್ಕಿಳಿದು ರೈತರ ಜಮೀನು ಕಸಿದುಕೊಳ್ಳುವ ಸ್ವಾರ್ಥ ರಾಜಕಾರಣವನ್ನು ವಿರೋಧಿಸುತ್ತೇನೆಂದು ಸವದಿ ಕಿಡಿಕಾರಿದರು.
ತೇರದಾಳದ ರೈತ ಭೂಪಾಲ ಮಾನಗಾವಿ ಮಾತನಾಡಿ, 2018ರಿಂದ ಬೆಂಗಳೂರಿಗೆ ಹೋಗಿ ಬರುತ್ತಿದ್ದೇವೆ. ನಮಗೆ ವಕ್ಫ್ ಬೋರ್ಡ್‌ನಿಂದ ನೋಟಿಸ್ ಬಂದಿವೆ. ನಾವು ತಲೆ ತಲಾಂತರದಿಂದ ಉಳುಮೆ ಮಾಡುತ್ತಿದ್ದೇವೆ ಎಂದರು. ಮತ್ತೊರ್ವ ರೈತ ಹುಸೇನ್ ಇನಾಮದಾರ ಮಾತನಾಡಿ, ನಮ್ಮದು 120 ಎಕರೆ ಜಮೀನು , ಇದ್ದು 64 ಜನ ಸಹೋದರರು ಇದ್ದೇವೆ. ನಮಗೂ ಕೂಡಾ ನೋಟಿಸ್ ಬಂದಿವೆ ಎಂದರು.
ಶ್ರೀಶೈಲ ಬೀಳಗಿ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಗಂಗಪ್ಪ ಉಳ್ಳಾಗಡ್ಡಿ, ಪರಶುರಾಮ ಗಾಡಿವಡ್ಡರ, ನಿಂಗಪ್ಪ ಜಕ್ಕನ್ನವರ, ನೇಮಣ್ಣ ಶೇಡಬಾಳ, ಪ್ರಭು ಬಡಿಗೇರ ಸೇರಿದಂತೆ ತೇರದಾಳದ ಅನೇಕ ರೈತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkodi: ಕಾನೂನು ಪದವಿ ಓದುತ್ತಿದ್ದ ಯುವಕ ಆತ್ಮಹ*ತ್ಯೆ
ಆಲಮಟ್ಟಿ ಅಣೆಕಟ್ಟೆ ಎತ್ತರ ಕಡಿತ ವದಂತಿ; ಆರು ದಶಕಗಳ ಬೇಡಿಕೆ ಕೃಷ್ಣಾರ್ಪಣ
Waqf Issue: ಬಸವಣ್ಣನವರ ಕುರಿತ ಹೇಳಿಕೆಗೆ ಬಸನಗೌಡ ಯತ್ನಾಳ್ ಕೊಟ್ಟ ಸಮರ್ಥನೆ ಏನು?
Waqf Issue: ಪಕ್ಷದ ಕಾರ್ಯಕರ್ತನಾಗಿ ಯಾರೇ ಹೋರಾಟಕ್ಕೆ ಕರೆದರೂ ಹೋಗ್ತಿನಿ: ಪ್ರತಾಪ್ ಸಿಂಹ
Mudhol: ಮುಖ್ಯಮಂತ್ರಿ ಕುರ್ಚಿ ಮೇಲೆ 5 ಜನ ಟವೆಲ್… ಸಂಸದ ಗೋವಿಂದ ಕಾರಜೋಳ ಬಾಂಬ್
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!
Puttur: ರಸ್ತೆ ಬದಿಯಲ್ಲಿ ಶವ ಇರಿಸಿದ ಪ್ರಕರಣ; ಮೂವರಿಗೆ ಜಾಮೀನು
Karkala: ಕೌಟುಂಬಿಕ ಹಿಂಸೆ ಆರೋಪ; ವಿಷ ಸೇವಿಸಿದ್ದ ವಿವಾಹಿತ ಮಹಿಳೆ ಸಾವು
Karkala: ಅಪರಿಚಿತ ಬೈಕ್ ಸವಾರನಿಂದ ಚಿನ್ನದ ಸರ ಸುಲಿಗೆ; ಪ್ರಕರಣ ದಾಖಲು
Cyclone Fengal: ತಿರುವಣ್ಣಾಮಲೈಯಲ್ಲಿ ಭೂ ಕುಸಿತ: 7 ಮಂದಿ ಪೈಕಿ ನಾಲ್ವರ ಮೃತದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.