ಕುಂದರಗಿ ಕುವರಿಗೆ ಪೈಲೆಟ್‌ ಆಗುವ ಕನಸು..!


Team Udayavani, Oct 4, 2018, 3:42 PM IST

4-october-16.gif

ಬಾಗಲಕೋಟೆ: ಜಿಲ್ಲೆಯ ಗ್ರಾಮೀಣ ಪ್ರತಿಭೆಯೊಂದು ದೂರದ ಆಸ್ಟ್ರೇಲಿಯಾದಲ್ಲಿ ಪೈಲೆಟ್‌ ತರಬೇತಿ ಪಡೆಯುತ್ತಿದ್ದು, ಇನ್ನೇನು ಎರಡು ವರ್ಷ ಕಳೆದರೆ ಆಸ್ಟ್ರೇಲಿಯಾದ ಆಗಸದಲ್ಲಿ ಈಕೆ ಬಾಗಲಕೋಟೆ ಜಿಲ್ಲೆಯ ಕೀರ್ತಿ ಹೆಚ್ಚಿಸಲಿದ್ದಾಳೆ.

ಹೌದು. ಸದ್ಯ ಆಸ್ಟ್ರೇಲಿಯಾದ ಅಡಿಲೇಡ್‌ ನಗರದ ಬ್ರಾಯಿಟನ್‌ ಸೆಕೆಂಡರಿ ಸ್ಕೂಲ್‌ನಲ್ಲಿ 9ನೇ ತರಗತಿ ಓದುತ್ತಿರುವ ಬೀಳಗಿ ತಾಲೂಕಿನ ಕುಂದರಗಿ ಗ್ರಾಮದ ಪ್ರೀತಿಕಾ ವೆಂಕಟೇಶ ಗಾಣಗೇರ(14) ಎಂಬ ಕುವರಿಯ ಪೈಲೆಟ್‌ ಆಗುವ ಕನಸು ನನಸು ಮಾಡಲು ಆಸ್ಟ್ರೇಲಿಯಾ ಸರ್ಕಾರ ಸಹಕಾರ ನೀಡಿದೆ. ಆಕೆಯ ಜಾಣ್ಮೆ, ಚಾಣಾಕ್ಷತನಕ್ಕೆ ಕೈ ಜೋಡಿಸಿದೆ. ಸರ್ಕಾರದ ಶಿಷ್ಯವೇತನದಡಿ ಆಸ್ಟ್ರೇಲಿಯನ್‌ ಏರ್‌ ಲೀಗ್‌ನ ಪ್ರಾಮರಿ ಸ್ಕೂಲ್‌ ಆಫ್‌ ಎಲಿಯೇಶನ್‌ನಲ್ಲಿ ಆರು ವರ್ಷಗಳಿಂದ ಪೈಲೆಟ್‌ ತರಬೇತಿ ಪಡೆಯುತ್ತಿದ್ದಾಳೆ.

8 ವರ್ಷದವಳಿದ್ದಾಗಲೇ ತರಬೇತಿ: ಪ್ರೀತಿಕಾ ಪೈಲೆಟ್‌ ಆಗುವ ಕನಸು ಕಂಡಿದ್ದು ಅವರ ಸಹೋದರ ಮಣಿಸಾಗರರಿಂದ. ತನಗೆ 8 ವರ್ಷ ಇರುವಾಗಲೇ ಪೈಲೆಟ್‌ ತರಬೇತಿ ಪಡೆಯುತ್ತಿದ್ದು, ಆಸ್ಟ್ರೇಲಿಯಾ ಮಾಧ್ಯಮಗಳು ಇದನ್ನು ದೊಡ್ಡ ಸುದ್ದಿಯನ್ನೂ ಮಾಡಿವೆ.

ತಂದೆ-ತಾಯಿ ಉದ್ಯೋಗದಲ್ಲಿ: ಪ್ರೀತಿಕಾ ತಂದೆ ವೆಂಕಟೇಶ ಗಾಣಿಗೇರ ಎನ್‌ಟಿಟಿಎಫ್‌ ಎಂಜಿನಿಯರ್‌ ಆಗಿದ್ದು,ಆಸ್ಟ್ರೇಲಿಯಾದಲ್ಲಿ ಉದ್ಯೋಗಿಯಾಗಿದ್ದಾರೆ. ತಾಯಿ ಬಾಗಲಕೋಟೆಯ ಅರ್ಚನಾ ಸಜ್ಜನ (ಗಾಣಗೇರ) ಕೂಡ ಅಲ್ಲಿಯೇ ಉದ್ಯೋಗಿಯಾಗಿದ್ದಾರೆ. ಮಣಿಸಾಗರ ಎಂಬ ಪುತ್ರ ಬಿಇ ಎಲೆಕ್ಟ್ರಾನಿಕ್ಸ್‌ ವ್ಯಾಸಂಗ ಮಾಡುತ್ತಿದ್ದು, ಪುತ್ರಿ ಪ್ರೀತಿಕಾ 9ನೇ ತರಗತಿ ಜತೆಗೆ ಪೈಲೆಟ್‌ ತರಬೇತಿ ಪಡೆಯುತ್ತಿದ್ದಾಳೆ. ಆಸ್ಟ್ರೇಲಿಯಾದಲ್ಲಿ ಪೈಲೆಟ್‌ ಆಗಲು 16 ವರ್ಷ ಕಡ್ಡಾಯ ಮಾಡಿದೆ.

ಭಾರತದಲ್ಲಿ ಸೇವೆ ಸಲ್ಲಿಸುವ ಆಸೆ: ಹಲವರು ಭಾರತದಲ್ಲಿ ಶಿಕ್ಷಣ ಕಲಿತು, ವಿದೇಶದಲ್ಲಿ ಕೆಲಸ ಮಾಡುತ್ತಾರೆ. ಆದರೆ, ವಿದೇಶದಲ್ಲಿ ಕಲಿತು ಭಾರತದಲ್ಲಿ ಸೇವೆ ಸಲ್ಲಿಸಬೇಕೆಂಬ ಆಸೆ ಇದೆ. ತನ್ನ ವ್ಯಾಸಂಗ ಮತ್ತು ಪೈಲೆಟ್‌ ತರಬೇತಿ ಮುಗಿದ ಬಳಿಕ ಭಾರತಕ್ಕೆ ಬಂದು ಇಲ್ಲಿನ ಹೆಣ್ಣು ಮಕ್ಕಳಿಗೆ ಪೈಲೆಟ್‌ ತರಬೇತಿ ಕೊಡುವ ಆಸೆ ಹೊಂದಿದ್ದಾಳೆ. ಮಗಳ ಆಸೆಗೆ ತಾಯಿ ಅರ್ಚನಾ ಬೆಂಗಾವಲಾಗಿ ನಿಂತಿದ್ದಾರೆ.

ದೊಡ್ಡ ದೊಡ್ಡ ನಗರಗಳಲ್ಲಿರುವವರು, ಶ್ರೀಮಂತರು ಮಾತ್ರ ಪೈಲೆಟ್‌ ಆಗುತ್ತಾರೆ ಎಂಬ ಮಾತು ಸುಳ್ಳು. ಉತ್ತಮ ಗುರಿ, ಸದೃಢ ಮನಸ್ಸಿನೊಂದಿಗೆ ಕಲಿತರೆ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುತ್ತಾಳೆ ಪ್ರೀತಿಕಾ.

ನಾನು ಪೈಲೆಟ್‌ ಆಗಬೇಕೆಂಬ ಆಸೆ ಬಂದಿದ್ದು 8ನೇ ವಯಸ್ಸಿಗೆ. ಆಗ ತಾಯಿಗೆ ಏರ್ಪಾಡು ಮಾಡಿದರು. ಶಿಷ್ಯವೇತನದಲ್ಲೇ ತರಬೇತಿ ಪಡೆ ಯುತ್ತಿದ್ದೇನೆ. ತರಬೇತಿ ಬಳಿಕ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಪೈಲೆಟ್‌ ತರಬೇತಿ ಕೊಡಬೇಕೆಂಬ ಗುರಿ ಇದೆ. ಭಾರತೀಯ ಮಹಿಳೆಯರೂ ವಿಶ್ವ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂಬುದು ನನ್ನ ಆಸೆ.
ಪ್ರೀತಿಕಾ ಗಾಣಗೇರ 

ಎಷ್ಟೋ ಜನರು ನಮ್ಮಲ್ಲಿ ಕಲಿತು, ವಿದೇಶದಲ್ಲಿ ಉದ್ಯೋಗ ಮಾಡುತ್ತಾರೆ. ಆದರೆ ಪ್ರೀತಿಕಾ ವಿದೇಶದಲ್ಲಿ ಶಿಕ್ಷಣ, ತರಬೇತಿ ಪಡೆದು ಭಾರತದಲ್ಲಿ ಪೈಲೆಟ್‌ ತರಬೇತಿ ಕೊಡುವ ಗುರಿ ಹಾಕಿಕೊಂಡಿದ್ದು ಹೆಮ್ಮೆಯ ವಿಷಯ.
ಡ್ಯಾನಿಯಲ್‌ ನ್ಯೂಟನ್‌,
ಸಾಮಾಜಿಕ ಕಾರ್ಯಕರ್ತ

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.