ಗ್ರಾಹಕರಿಗೆ ಮತ್ತಷ್ಟು`ಖಾರ’ವಾಗಿರುವ ಒಣ ಮೆಣಸಿನಕಾಯಿ
ಗಗನಕ್ಕೇರುತ್ತಿರುವ ಬೆಲೆ
Team Udayavani, May 26, 2023, 8:55 PM IST
ರಬಕವಿ-ಬನಹಟ್ಟಿ: ಊಟದಲ್ಲಿ ಖಾರ ಬಹಳಷ್ಟು ಪ್ರಾಮುಖ್ಯತೆ ಪಡೆದಿದ್ದು ಒಣ ಮೆಣಸಿನಕಾಯಿಯಂತೂ ಅಡುಗೆಗೆ ಅಗತ್ಯ ಬೇಕಾದಂತಹ ವಸ್ತುವಾಗಿದೆ. ಮಾರುಕಟ್ಟೆಯಲ್ಲಿ ಒಣ ಮೆನಸಿನಕಾಯಿ ಬೆಲೆ ಗಗನಕ್ಕೇರುತ್ತಿದ್ದು, ಗ್ರಾಹಕರಿಗೆ ಖರೀದಿಯು ಮತ್ತಷ್ಟು ಖಾರವಾಗಿದೆ.
ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ಬೆಲೆಯ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ. ವಾರದಿಂದ ವಾರಕ್ಕೆ ಬೆಲೆಯಲ್ಲಿ ಅಜಗಜ ವ್ಯತ್ಯಾಸವಾಗುತ್ತಿದೆ. ಮಾರಾಟಗಾರರು ಕೂಡಾ ದಾಸ್ತಾನು ಮಾಡಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಬಹಳಷ್ಟು ಖರೀದಿ ಮಾಡಿ ಹಾನಿಯನ್ನು ಅನುಭವಿಸುವ ಬದಲಾಗಿ ಸ್ವಲ್ಪ ಪ್ರಮಾಣದಲ್ಲಿ ಖರೀದಿಸಿ ಅದನ್ನೇ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.
ಬೆಲೆ ಕಡಿಮೆಯಾದಾಗ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಬೇಕು ಎಂದರೆ ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ. ಇನ್ನೂ ಬಹಳಷ್ಟು ಖರೀದಿ ಮಾಡಿಟ್ಟುಕೊಳ್ಳಬೇಕು ಎಂದರೆ ಯಾವಾಗ ಬೆಲೆ ಕಡಿಮೆಯಾಗುತ್ತದೆ ಎಂಬ ಅಳುಕಿನಲ್ಲಿ ವ್ಯಾಪಾರಸ್ಥರು ಇದ್ದಾರೆ.ಈ ಭಾಗದಲ್ಲಿ ಒಣ ಮೆನಸಿನಕಾಯಿ ಹುಬ್ಬಳ್ಳಿ ಮತ್ತು ರಾಯಚೂರನಿಂದ ಬರುತ್ತದೆ. ಕಳೆದ ಬಾರಿ ಸುರಿದ ಮಳೆಯಿಂದಾಗಿ ಮತ್ತು ಮೆನಸಿನಕಾಯಿ ಬೇರೆ ರಾಜ್ಯಗಳಿಗೆ ಹೋಗುತ್ತಿರುವುದರಿಂದ ಮೆಣಸಿನಕಾಯಿ ಬೆಲೆ ಹಿಡಿತಕ್ಕೆ ಬರುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ಮೆನಸಿನಕಾಯಿ ಮಾರಾಟಗಾರರು.
ಮೆಣಸಿನಕಾಯಿ ಬೆಲೆ ಕೇಳಿದ ಕೂಡಲೇ ಖರೀದಿಸಲು ಧೈರ್ಯ ಮಾಡದ ಗ್ರಾಹಕರು ಮತ್ತೆ ಮುಂದೆ ನೋಡಿದರಾಯಿತು ಎಂದು ಹೋಗುತ್ತಾರೆ. ಒಂದೆರಡು ವಾರದ ನಂತರ ಮರಳಿ ಬಂದರೆ ಮತ್ತಷ್ಟು ಬೆಲೆ ಹೆಚ್ಚಾಗಿರುತ್ತದೆ. ಇನ್ನೂ ಬೇಸಿಗೆಯು ಮುಕ್ತಾಯದ ಹಂತದಲ್ಲಿದ್ದು ಖಾರವನ್ನು ಮಾಡಿಕೊಳ್ಳುವವರ ಸಂಖ್ಯೆಯ ಕೂಡಾ ಹೆಚ್ಚಾಗಿರುವುದರಿಂದ ಬೆಲೆ ಏರಿಕೆಗೆ ಮತ್ತೊಂದು ಕಾರಣವಾಗಿದೆ.
ಬ್ಯಾಡಗಿ ಮೆಣಸಿನಕಾಯಿಯಲ್ಲಿಯೇ ಹತ್ತಾರು ನಮೂನೆಗಳು ಇವೆ.450 ರೂ. ರಿಂದ ಆರಂಭವಾಗಿದ್ದು, ಉತ್ತಮ ಗುಣಮಟ್ಟದ ಮೆಣಸಿನಕಾಯಿ 850 ರೂ.ದರವಿದೆ. ಅದೇ ರೀತಿಯಾಗಿ ಬಳ್ಳಾರಿ ಬ್ಯಾಡಗಿಯ ಮೆನಸಿನಕಾಯಿ 350 ರೂ. ನಿಂದ 400 ರೂ.ವರೆಗೆ ದೊರೆಯುತ್ತಿದೆ. ಇನ್ನೂ ಗುಂಟೂರ ಮೆನಸಿನಕಾಯಿ 200 ರಿಂದ 350 ರೂ.ವರೆಗೆ ಮಾರಾಟವಾಗುತ್ತಿದೆ.
ಸದ್ಯ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಅರ್ಧದಷ್ಟು ಇರಬೇಕಾಗಿತ್ತು. ಆದರೆ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿರುವುದರಿಂದ ಗ್ರಾಹಕರು ಕೂಡಾ ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೆನಸಿನಕಾಯಿ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳುತ್ತಿದ್ದಾರೆ. ಉತ್ತಮ ಗುಣಮಟ್ಟದ ಬ್ಯಾಡಗಿ ಮೆನಸಿಕಾಯಿಯನ್ನು ಮೊದಲು ಹತ್ತಾರು ಚೀಲದಷ್ಟು ಖರೀದಿ ಮಾಡುತ್ತಿದ್ದೇವು. ಈಗ ಬೆಲೆ ಹೆಚ್ಚಾಗಿರುವುದರಿಂದ ಮತ್ತು ಮುಂದಿನ ದಿನಗಳಲ್ಲಿ ಬೆಲೆಯ ಅನಿಶ್ಚಿತತೆಯಿಂದಾಗಿ ಕೇವಲ ಒಂದು ಚೀಲ ಮಾತ್ರ ಖರೀದಿ ಮಾಡಿದ್ದೇವೆ ಎನ್ನುತ್ತಾರೆ ಸ್ಥಳೀಯ ಮೆನಸಿಕಾಯಿ ಮಾರಾಟಗಾರ ಸಂಜಯ ಸುಟ್ಟಟ್ಟಿ.
ಎರಡು ದಶಕಗಳಲ್ಲಿ ಬೆಲೆಯಲ್ಲಿ ಇಷ್ಟೊಂದು ಏರು ಪೇರುಗಳಾಗಿರಲಿಲ್ಲ. ಆದ್ದರಿಂದ ಓಣ ಮೆನಸಿನಕಾಯಿಯು ಮಾರಾಟಗಾರರಿಗೂ ಮತ್ತು ಖರೀದಿ ಮಾಡುವ ಗ್ರಾಹಕರಿಗೂ ಮತ್ತಷ್ಟು ಖಾರವಾಗಿ ಪರಿಣಮಿಸಿದೆ. ಇದರಿಂದಾಗಿ ಬಡ ವರ್ಗದ ಜನರು ಒಣ ಮೆಣಸಿನಕಾಯಿ ಬದಲಾಗಿ ಮನೆಯಲ್ಲಿ ಹಸಿ ಮೆನಸಿಕಾಯಿಯ ಚಟ್ನಿಯನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
– ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.