Bore well ನೀರು ತುಂಬಲು ಹೋದ ಯುವತಿಗೆ ವಿದ್ಯುತ್ ಶಾಕ್: ಚಿಂತಾಜನಕ
Team Udayavani, Apr 6, 2024, 6:57 PM IST
ರಬಕವಿ-ಬನಹಟ್ಟಿ : ಬನಹಟ್ಟಿ ನಗರದ ಮುಖ್ಯರಸ್ತೆಯಲ್ಲಿನ ವಿಟ್ಠಲಮಂದಿರ ಬಳಿಯ ನಗರಸಭೆಯ ಬೋರವೆಲ್‌ನಿಂದ ಅಂಗಡಿಗೆ ನೀರು ತರಹೋದ ಯುವತಿಗೆ ವಿದ್ಯುತ್ ಆಘಾತಕ್ಕೀಡಾದ ಘಟನೆ ಶನಿವಾರ ನಡೆದಿದೆ.
ಬನಹಟ್ಟಿಯ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಮಪುರ ನಿವಾಸಿ ಶೃತಿ ಹಾಸಿಲಕರ(24) ನೀರು ತರಲೆಂದು ಪಕ್ಕದ ಬೋರವೆಲ್‌ನತ್ತ ತೆರಳಿ, ಗುಂಡಿ ಒತ್ತುತ್ತಿದ್ದಂತೆಯೇ ವಿದ್ಯುತ್ ಸ್ಪರ್ಶದಿಂದ ತೀವೃ ಆಘಾತಗೊಂಡು ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ.
ದಾರಿಹೋಕರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಪರಿಸ್ಥಿತಿ ಚಿಂತಾಜನಕವಾಗಿದ್ದು, ಪರೀಕ್ಷೆ ನಂತರ ಸ್ಥಿತಿಗತಿಯ ಬಗ್ಗೆ ತಿಳಿಯುತ್ತದೆಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸಾ ವೆಚ್ಚವನ್ನು ನಗರಸಭೆ ವತಿಯಿಂದ ಪಾವತಿಸಲಾಗುತ್ತದೆಂದು ಪೌರಾಯುಕ್ತರು ತಿಳಿಸಿದ್ದಾರೆ. ಯಾವುದೇ ಪ್ರಕರಣ ದಾಖಲಾಗಿಲ್ಲ.
ಪ್ರಮುಖ ಮಾರುಕಟ್ಟೆ ಮತ್ತು ಜನವಸತಿ ಪ್ರದೇಶದಲ್ಲಿರುವ ಕೊಳವೆಭಾವಿಯಲ್ಲಿನ ವೈರ್‌ಗಳು ಕಳ್ಳತನವಾಗಿದ್ದು, ಸಂಪರ್ಕ ಬೋರ್ಡ್ ಅತೀ ಕೆಳಗಡೆ ಇರುವುದರಿಂದ ಚಿಕ್ಕ ಮಕ್ಕಳಿಗೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಬೋರ್ಡ್ ಗೆ ವಿದ್ಯುತ್ ನಿರೋಧಕ ವ್ಯವಸ್ಥೆಯಿಲ್ಲ. ವಾರ್ಡ್ ಸದಸ್ಯ ಪ್ರಭಾಕರ ಮೊಳೇದ ಮತ್ತು ನಗರಸಭೆ ಸಿಬಂದಿ ಬಂದ ಕೂಡಲೇ ಸಾರ್ವಜನಿಕರು ವಿದ್ಯುತ್ ಸಂಪರ್ಕದಲ್ಲಿನ ದೋಷಗಳ ಕುರಿತಾಗಿ ತರಾಟೆಗೆ ತೆಗೆದುಕೊಂಡರು.
ಜನತೆಗೆ ಜೀವಸೆಲೆಯಾಗಿದ್ದ ಬೋರವೆಲ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಬೋರ್ಡ್ ದುರಸ್ತಿಗಾಗಿ ನಗರಸಭೆ ಸಿಬಂದಿ ವಶಕ್ಕೆ ಪಡೆದಿದ್ದಾರೆ. ವಸತಿ ಮತ್ತು ಮಾರುಕಟ್ಟೆ ಪ್ರದೇಶದ ಈ ಬೋರ್‌ನಿಂದ ಜನತೆಗೆ ನೀರಿನ ಬವಣೆ ತಪ್ಪಿದ್ದು, ಬೋರ್ಡ್ನಲ್ಲಿನ ದೋಷ ಮಾತ್ರ ಸಿಬಂದಿ ಸರಿಪಡಿಸಿರಲಿಲ್ಲವಾದ್ದರಿಂದ ಇಂಥ ಅನಾಹುತ ನಡೆದಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಸ್ಥಳೀಯರು ನಗರಸಭೆ ವಿರುದ್ಧ ಹರಿಹಾಯ್ದರು.
ಅನೇಕ ಕಡೆಗಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ಬೇಸಿಗೆ ದಿನಗಳ ಕಾರಣ ಬಹುತೇಕ ಮಹಿಳೆಯರು ನೀರಿಗಾಗಿ ಬೀದಿಗೆ ಬೀಳುವದು ಸಹಜ. ಅನಾಹುತಗಳಿಗೆ ಅವಕಾಶ ನೀಡದೆ, ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಸೋಮನಾಥ ಗೊಂಬಿ, ರವಿ ಸಂಪಗಾAವಿ, ರಾಜು ಕುಲಕರ್ಣಿ, ರಾಜು ಬಡಿಗೇರ, ಮೋಹನ ಪತ್ತಾರ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಭೇಟಿ
ಘಟನೆ ನಡೆದ ಕೆಲ ಹೊತ್ತಿನಲ್ಲಿಯೇ ನಗರಸಭಾ ಪೌರಾಯುಕ್ತ ಜಗದೀಶ ಈಟಿ, ಸದಸ್ಯ ಪ್ರಭಾಕರ ಮೊಳೇದ ಸೇರಿದಂತೆ ಅನೇಕ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
ಭೀಕರ ಬರದ ದಶಕದ ಹಿಂದಿನ ಕಾಲದಲ್ಲಿ ಜನತೆಗೆ ನೀರೊದಗಿಸುವತ್ತ ಬಂದಿರುವ ಬೋರ್‌ವೆಲ್ ಈಗಲೂ ನೀರಿನ ಬವಣೆ ತಪ್ಪಿಸಿದೆ. ನಮ್ಮ ಸಿಬ್ಬಂದಿ ವಿದ್ಯುತ್ ಸಂಪರ್ಕ ಹೊಂದಿದ ಬೋರ್ಡ್ನ್ನು ಕೊಂಚ ಎತ್ತರದಲ್ಲಿ ಅಳವಡಿಸಬೇಕೆಂದು ಸೂಚಿಸಿದ್ದೇನೆ. ಸಾರ್ವಜನಿಕರು ಜವಾಬ್ದಾರಿಯಿಂದ ಮತ್ತು ಎಚ್ಚರಿಕೆಯಿಂದ ಬಟನ್ ಬಳಸಬೇಕು. ಮಾನವೀಯತೆ ಹಿನ್ನೆಲೆಯಲ್ಲಿ ಬಡಕುಟುಂಬದ ಶೃತಿಯವರ ವೈದ್ಯಕೀಯ ವೆಚ್ಚವನ್ನು ನಗರಸಭೆ ಭರಣಾ ಮಾಡಲು ನಿರ್ಧರಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಜಗದೀಶ ಈಟಿ ತಿಳಿಸಿದ್ದಾರೆ.
ಬೇಸಿಗೆ ಸಂದರ್ಭದಲ್ಲಿ ಪ್ರದೇಶದ ನಿವಾಸಿಗಳ ಅನುಕೂಲಕ್ಕಾಗಿ ಕೊರೆಸಿದ ಬೋರ್ ವೆಲ್ ನಿಂದ ನಮಗೆಲ್ಲ ಪ್ರಯೋಜನವಾಗಿದೆ. ಆದರೆ ಈ ತಿಂಗಳಲ್ಲೇ ಎರಡು ಬಾರಿ ದುರಸ್ತಿಗೊಂಡ ಕೊಳವೆಬಾವಿಸೂಕ್ತ ನಿರ್ವಹಣೆ ಮತ್ತು ವೈರ್, ಬಟನ್‌ಗಳನ್ನು ವಿದ್ಯುತ್ ನಿರೋಧಕ ರೀತಿಯಲ್ಲಿ ಬಳಸದ ಕಾರಣ ಪ್ರತಿ ಬಾರಿ ನಮಗೆ ವಿದ್ಯುತ್ ಪ್ರವಹಿಸುವ ಅನುಭವ ಆಗುತ್ತಿತ್ತು. ಹಲವಾರು ಬಾರಿ ಸಿಬಂದಿ ಮತ್ತು ಸದಸ್ಯರಿಗೆ ಸರಿಪಡಿಸಲು ಕೋರಿದ್ದರೂ ಆಗಿರಲಿಲ್ಲ. ಇಂಥ ಘಟನೆ ಮರುಕಳಿಸದಂತೆ ಮತ್ತು ಬಳಕೆದಾರರ ಹಿತ ಕಾಯುವತ್ತ ನಗರಸಭೆ ಕೆಲಸ ನಿರ್ವಹಿಸಿ ಹೊಸ ಪೆಟ್ಟಿಗೆಯನ್ನು ಅಳವಡಿಸಬೇಕು ಎಂದು ಬನಹಟ್ಟಿ ಹಿರಿಯ ನಾಗರಿಕ ಮಹಾಶಾಂತ ಶೆಟ್ಟಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.