ವಿದ್ಯುತ್ ಬಿಲ್: ಗೊಂದಲ ಬೇಡ
Team Udayavani, May 7, 2020, 2:30 PM IST
ಬಾಗಲಕೋಟೆ: ಜಿಲ್ಲಾ ಹೆಸ್ಕಾಂ ವೃತ್ತ ವ್ಯಾಪ್ತಿಯಲ್ಲಿ ಬರುವ ಗ್ರಾಹಕರಿಗೆ ಮೇ-2020 ನೇ ತಿಂಗಳಿನಲ್ಲಿ ಮಾಪಕ ಓದುಗರು ನೇರವಾಗಿ ಗ್ರಾಹಕರ ಮಾಪಕಗಳನ್ನು ಓದಿ ರೀಡಿಂಗ್ ಪ್ರಕಾರ ಬಿಲ್ಲನ್ನು ನೀಡಲಾಗುತ್ತಿದೆ ಎಂದು ಬಾಗಲಕೋಟೆ ಹೆಸ್ಕಾಂನ ಅಧಿಧೀಕ್ಷಕ ಅಭಿಯಂತರು ತಿಳಿಸಿದ್ದಾರೆ.
ಕೋವಿಡ್-19 ಹರಡುವುದನ್ನು ತಡೆಗಟ್ಟುವ ಹಾಗೂ ಮುಂಜಾಗ್ರತೆ ಕ್ರಮ ಅನುಸರಿಸುವ ಸಂಬಂಧ ಹಿನ್ನಲೆಯಲ್ಲಿ ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಹೆಸ್ಕಾಂ ಜಿಲ್ಲಾ ವೃತ್ತ ವ್ಯಾಪ್ತಿಯಲ್ಲಿ ಬರುವ ಗ್ರಾಹಕರಿಗೆ ಏಪ್ರಿಲ್‌ನಲ್ಲಿ 3 ತಿಂಗಳಿನಲ್ಲಿ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಬಿಲ್ ಮಾಡಲಾಗಿತ್ತು. ಆದರೆ ಮೇ ತಿಂಗಳಿನ ಬಿಲ್‌ನಲ್ಲಿ ಹೊಂದಾಣಿಕೆ ಮಾಡಿ ಬಿಲ್ ನೀಡಲಾಗುತ್ತಿದೆ. ಮೇ ತಿಂಗಳಿನ ಬಿಲ್ ಒಟ್ಟು ಎರಡು ತಿಂಗಳ ಬಳಕೆಯ ಬಿಲ್ ಆಗಿದೆ. ಗ್ರಾಹಕರು ಮೇ ತಿಂಗಳಿನಲ್ಲಿ ಅಧಿಕ ಬಿಲ್ಲು ಬರುವುದು ಎಂದು ಹಾಗೂ ಹೆಚ್ಚಿನ ಸ್ಲ್ಯಾಬ್ ಲೆಕ್ಕಾಚಾರ ಆಗುತ್ತದೆ ಎಂದು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಏಪ್ರಿಲ್‌ನ ಸರಾಸರಿ ಬಿಲ್ಲನ್ನು ಪಾವತಿಸಿದ್ದಲ್ಲಿ ಮೇ ಮಾಹೆಯ ಬಿಲ್ಲಿನಲ್ಲಿ ಆ ಮೊತ್ತವನ್ನು ಕಡಿತಗೊಳಿಸಿ ಬಾಕಿ ಇಲ್ಲವೆಂದು ನಮೂದಿಸಲಾಗಿರುತ್ತದೆ. ಒಂದು ವೇಳೆ ಪಾವತಿ ಮಾಡದಿದ್ದಲ್ಲಿ ಬಾಕಿಯ ಕಾಲಂನಲ್ಲಿ ಬಾಕಿ ಎಂದು ತೋರಿಸಿ, ಮೇ ಮಾಹೆಯ ಬಿಲ್‌ನಲ್ಲಿ ಏಪ್ರಿಲ್ ಮಾಹೆಯ ಸರಾಸರಿ ಆಧಾರದ ಮೇಲಿಂದ ಮಾಡಿದ ಬಿಲ್‌ನ ಮೊತ್ತವನ್ನು ಕಡಿತಗೊಳಿಸಿ ಬಿಲ್ಲನ್ನು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಉಪ ವಿಭಾಗ, ಶಾಖಾ ಕಚೇರಿಗಳ, ನಗದು ಕೌಂಟಟ್‌ಗೆ ಭೇಟಿ ನೀಡಿ, ಬಿಲ್ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.