ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ: ವಜ್ರೇಶ್ವರಿ
Team Udayavani, Jun 10, 2020, 11:56 AM IST
ಲೋಕಾಪುರ: ಪರಿಸರ ಸ್ವಚ್ಛವಾಗಿಟ್ಟು ಕೊಳ್ಳುವುದು ಎಲ್ಲರ ಹೊಣೆ ಎಂದು ಪಶು ವೈದ್ಯೆ ಡಾ| ಎಸ್. ವಜ್ರೇಶ್ವರಿ ಹೇಳಿದರು. ದಾದನಟ್ಟಿ ಪಶು ಚಿಕಿತ್ಸಾಲಯ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಸಸಿ ನೆಟ್ಟು ಅವರು ಮಾತನಾಡಿದರು.
ಪಶು ವೈದ್ಯ ಪರೀಕ್ಷಕರು ಡಾ| ಎಸ್.ಎ. ಘಟ್ಟೆಪ್ಪನ್ನವರ, ಎಸ್.ಟಿ. ದುಂಡಪ್ಪಗೋಳ ಇದ್ದರು. ಪಶು ಆಸ್ಪತ್ರೆಯಲ್ಲಿ ವೈದ್ಯ ಡಾ| ಎನ್.ಬಿ. ಹುಣಶಿಕಟ್ಟಿ ಪರಿಸರ ದಿನಾಚರಣೆ ನಿಮಿತ್ತ ಸಸಿಗಳಿಗೆ ನೀರುಣಿಸಿದರು. ಈ ವೇಳೆ ಅಕ್ಬರಸಾಬ ತೊರಗಲ್ ಸೇರಿದಂತೆ ಸಿಬ್ಬಂದಿ ಇದ್ದರು. ಬಿ. ಶ್ರೀರಾಮುಲು ಯುವ ಬ್ರಿಗೇಡ್ ವತಿಯಿಂದ ಪರಿಸರ ದಿನಾಚರಣೆ ನಿಮಿತ್ತ ವೆಂಕಟೇಶ ನಗರದಲ್ಲಿ ಉಚಿತವಾಗಿ ಪ್ರತಿ ಮನೆಗಳಿಗೆ ಸಸಿ ವಿತರಿಸಲಾಯಿತು. ಬ್ರಿಗೇಡ್ ಜಿಲ್ಲಾಧ್ಯಕ್ಷ ಕಿಶೋರಾ ಪಾಟೀಲ, ವೆಂಕಟೇಶ ತುಳಸಿಗೇರಿ, ಪ್ರಶಾಂತ ತಿರಕಣ್ಣವರ, ಮೌನೇಶ ಪತ್ತಾರ, ಪುನೀತ ಶಿಂಧೆ ಇದ್ದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.