ಕುಡಿವ ನೀರಿಗಾಗಿ ನಿತ್ಯ ಹೈರಾಣು
ನೀರಿಗಾಗಿ ಬಿಸಿಲಲ್ಲಿ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ •ತಪ್ಪದ ತೊಂದರೆ
Team Udayavani, May 11, 2019, 11:17 AM IST
ಬನಹಟ್ಟಿ: ರಬಕವಿ ಶುದ್ಧೀಕರಣ ಘಟಕದ ಟ್ಯಾಂಕ್ ಎದುರಿಗೆ ನೀರಿಗಾಗಿ ಕೊಡಗಳ ಜೊತೆ ಬಿಸಿನಲ್ಲಿ ನಿಂತ ಮಕ್ಕಳು.
ಬನಹಟ್ಟಿ; ಮಳೆ ನಿಂತರೂ ಹನಿ ನಿಂತಿಲ್ಲ…ಕೃಷ್ಣೆಯ ಒಡಲು ಖಾಲಿಯಾದ ಬಳಿಕ ರಬಕವಿ ನೀರು ಸರಬರಾಜು ಮಾಡುವ ನೀರು ಶುದ್ಧಿಕರಣ ಘಟಕ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ ಶುದ್ಧೀಕರಣ ಟ್ಯಾಂಕ್‌ಗಳಲ್ಲಿ ಸಂಗ್ರಹವಾದ ನೀರನ್ನು ನಗರಸಭೆ ಸಿಬ್ಬಂದಿ ಸಣ್ಣ ಗಾತ್ರದ ಪೈಪ್ ಅಳವಡಿಸಿ ಸಾರ್ವ ಜನಿಕರ ನಿತ್ಯ ಬಳಕೆಗೆ ವಿತರಿಸುವ ಕೆಲಸ ಮಾಡುತ್ತಿದ್ದಾರೆ.
ಹೌದು, ರಬಕವಿಯ ಗುಡ್ಡದ ನಿವಾಸಿಗಳಿಗೆ ಕುಡಿಯುವ ನೀರಿನ ತೊಂದರೆ ಇದೆ. ಆದರೆ ಆಶ್ರಯ ಕಾಲೋನಿಯಲ್ಲಿ ಚಿಕ್ಕ ಚಿಕ್ಕ ಸಿಂಟೆಕ್ಸ ಟ್ಯಾಂಕ್‌ಗಳನ್ನು ನಿರ್ಮಿಸಿ ಬೋರವೆಲ್ ಪೈಪ್ ಸಂಪರ್ಕ ಕಲ್ಪಿಸಿ ನೀರು ಕೊಡುವ ಕೆಲಸವನ್ನು ನಗರಸಭೆ ಮಾಡುತ್ತಿದೆಯಾದರೂ ಅಕ್ಕಪಕ್ಕ ಪ್ರದೇಶದ ಹಾಗೂ ನೀರಿನ ಟಾಕಿ ಬಲಭಾಗದಲ್ಲಿ ವಾಸವಿರುವ ಜನರು ನೀರಿಗಾಗಿ ನಿತ್ಯ ಹೋರಾಟ ಮಾಡುವಂತಾಗಿದೆ. ಸುಡುಬಿಸಿಲಿನಲ್ಲಿಯೂ ಸರದಿಯಲ್ಲಿ ನಿಂತು ನೀರು ಪಡೆಯುವಂತಾಗಿದೆ.
ಕೆಲವು ಕಡೆಗಳಲ್ಲಿ ಬೋರವೆಲ್ ಇಲ್ಲದ ವಿಷಯ ಕಂಡುಬಂದರೆ ಅಲ್ಲಿ ಟ್ಯಾಂಕ್‌ರಗಳ ಮೂಲಕ ನೀರು ಕೊಡುವ ವ್ಯವಸ್ಥೆ ಮಾಡಿದ್ದಾರೆಂದು ಇಲ್ಲಿನ ಕೆಲವು ಸಾರ್ವಜನಿಕರು ಹೇಳುತ್ತಿದ್ದಾರೆ. ಆದರೆ ಯಾವಾಗ ನೀರು ಬರುತ್ತೆ ಎಂಬುವುದು ನಮಗೆ ತಿಳಿಯುವುದಿಲ್ಲ. ನದಿಗೆ ನೀರು ಬರುತ್ತದೆ ಎಂದು ಬರೀ ಬೊಗಳೆ ಬಿಡುತ್ತಿದ್ದಾರೆ. ಇನ್ನೂ ನೀರು ನದಿಗೆ ಬಂದಿಲ್ಲ ಬೇಗ ಜನಪ್ರತಿನಿಧಿಗಳು ನೀರು ಬಿಡಿಸುವ ವ್ಯವಸ್ಥೆ ಮಾಡಬೇಕು.-ಚನ್ನಪ್ಪ ಹೌದನವರ, ಗುಡ್ಡದ ನಿವಾಸಿ. ರಬಕವಿ
ರಬಕವಿ ನೀರು ಶುದ್ಧಿಕರಣ ಘಟಕದ ಟ್ಯಾಂಕ್‌ನಲ್ಲಿ ಉಳಿದಿರುವ ನೀರು ಅಷ್ಟು ಶುದ್ಧವಾಗಿಲ್ಲ. ಈ ನೀರನ್ನು ಯಾರು ಕುಡಿಯಲು ಬಳಸಬಾರದು. ನೀರು ಅಮೂಲ್ಯವಾಗಿದ್ದರಿಂದ ನಿತ್ಯ ಮನೆಬಳಕೆಗೆ ಮಾತ್ರ ಬಳಸಲು ನಾವು ವಿತರಿಸುತ್ತಿದ್ದೇವೆ. ಕುಡಿಯಲು ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕೇವಲ ರೂ. 2ಕ್ಕೆ 10 ಲೀಟರ್ ನೀರು ಕೊಡುವ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ನೀರು ತಂದು ಕುಡಿಯಬೇಕು. ನಗರದಲ್ಲಿ ನೀರಿನ ತೊಂದರೆಯಾಗದಂತೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಮ್ಮ ಸಿಬ್ಬಂದಿ 24 ಗಂಟೆಯೂ ನೀರಿನ ವ್ಯವಸ್ಥೆಗಾಗಿ ಶ್ರಮಿಸುತ್ತಿದ್ದಾರೆ. ಅಂತಹ ಯವುದೇ ತೊಂದರೆ ಇಲ್ಲ. ತೊಂದರೆಯಾದರೆ ಕೂಡಲೇ ನಗರಸಭೆಗೆ ಕಚೇರಿಗೆ ಬಂದು ಮಾಹಿತಿ ನೀಡಬೇಕು, ವ್ಯವಸ್ಥೆ ಮಾಡಲಾಗುವುದು
-ಆರ್.ಎಂ. ಕೊಡಗೆ ಪೌರಾಯುಕ್ತರು. ನಗರಸಭೆ ರಬಕವಿ ಬನಹಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ
ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು
Karkala: ಲೈಸೆನ್ಸ್ ಇಲ್ಲದ ವ್ಯಾಪಾರಕ್ಕೆ ಕಡಿವಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.