ಎಲ್ಲರೂ ಪರಿಸರ ಸಂರಕ್ಷಣೆಗೆ ಒತ್ತು ನೀಡಿ: ಶ್ರೀ ಅಭಿನವ ಜಾತವೇದ ಶಿವಾಚಾರ್ಯ ಮುನಿಗಳು
ಪರಿಸರ ಕೊಟ್ಟಿರುವ ಗಿಡ-ಮರ ಕಾಪಾಡಿ ; ಹೊಗೆ ಬಿಡುವ ವಾಹನಗಳ ಬಳಕೆ ಕಡಿಮೆ ಮಾಡಿ
Team Udayavani, Jun 13, 2022, 2:31 PM IST
ಹುನಗುಂದ: ಮನುಷ್ಯ ಅಭಿವೃದ್ಧಿ ವೈಜ್ಞಾನಿಕವಾಗಿ ಅಭಿವೃದ್ಧಿಯಾದಂತೆ. ಇಂದು ಅನೇಕ ಬೆಳವಣಿಗೆಗಳಲ್ಲಿ ಪರಿಸರ ನಾಶವಾಗುತ್ತಿದೆ. ಹಿಂದಿನವರು ಹಾಕಿದ ಸಸಿಗಳನ್ನು ನಾವು ಅಭಿವೃದ್ಧಿಯ ಹೆಸರಿನಲ್ಲಿ ಮತ್ತು ಇನ್ನಿತರ ನೆಪವೊಡ್ಡಿ ಸಸಿಗಳನ್ನು ನಾಶ ಮಾಡುತ್ತಿದ್ದೇವೆ ಪ್ರತಿಯೊಬ್ಬ ಪ್ರಜೆ, ಪ್ರತಿಯೊಬ್ಬ ಮಗು ಸಸಿಗಳನ್ನು ನೆಟ್ಟು ಅದನ್ನು ಪೋಷಿಸುವ ಮೂಲಕ ಪ್ರಕೃತಿಯನ್ನು ಕಾಪಾಡಿ. ಅದು ನಮ್ಮನ್ನು ಕಾಪಾಡುತ್ತದೆ ಎಂದು ಕೂಡಲಸಂಗಮ ಸಾರಂಗಮಠದ ಶ್ರೀ ಅಭಿನವ ಜಾತವೇದ ಶಿವಾಚಾರ್ಯ ಮುನಿಗಳು ಹೇಳಿದರು.
ನೆಹರೂ ಯುವ ಕೇಂದ್ರ ಬಾಗಲಕೋಟೆ, ಸಾಮಾಜಿಕ ಅರಣ್ಯ ವಲಯ ಅರಣ್ಯ ಇಲಾಖೆ ಹುನಗುಂದ, ಆರಾಧ್ಯ ಸಮಗ್ರ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಹುನಗುಂದ, ಲಾಯನ್ಸ್ ಕನ್ನಡ, ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಹುನಗುಂದ ಹಾಗೂ ರೀಚ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊರೊನಾ ಸಮಯದಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿದ್ದು, ಪ್ರಕೃತಿಯನ್ನು ಸಮರ್ಪಕವಾಗಿ ಕಾಪಾಡಿಕೊಂಡಿಲ್ಲವೆನ್ನುವುದರ ದ್ಯೋತಕವಾಗಿತ್ತು. ಪರಿಸರ ಕೊಟ್ಟಿರುವ ಗಿಡ, ಮರಗಳನ್ನು ಕಾಪಾಡಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು..
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹುನಗುಂದ ಸಾಮಾಜಿಕ ಅರಣ್ಯ ವಲಯ ಅರಣ್ಯಾ ಧಿಕಾರಿ ಎಸ್.ಡಿ ಬಬಲಾದಿ, ಕಾರು, ಬೈಕ್ ಸೇರಿದಂತೆ ಹೊಗೆ ಬಿಡುವ ವಾಹನಗಳ ಬಳಕೆ ಕಡಿಮೆ ಮಾಡಿದರೆ ಪರಿಸರವನ್ನು ಸಂರಕ್ಷಿಸಬಹುದು. ಜತೆಗೆ ಜನರು ತಮ್ಮ ಮನೆಯ ಆವರಣ, ಹೊಲಗಳಲ್ಲಿ ಸೇರಿದಂತೆ ತಮ್ಮ ಸುತ್ತಮುತ್ತಲಿನ ಜಾಗಗಳಲ್ಲಿ ಕನಿಷ್ಟ ಒಂದು ಸಸಿಯನ್ನಾದರೂ ನಿಟ್ಟು ಪರಿಸರ ಸಂರಕ್ಷಿಸುವ ಕಾರ್ಯದಲ್ಲಿ ಪ್ರತಿಯೊಬ್ಬರ ಕಾರ್ಯವೂ ಪ್ರಮುಖವಾಗಿದ್ದು, ಎಲ್ಲರೂ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.
ಲಯನ್ಸ್ ಕಾನ್ವೆಂಟ್ ಸ್ಕೂಲ್‌ನ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಅವಾರಿ, ಪರಿಸರ ಮಾಲಿನ್ಯ ಸಮಸ್ಯೆ ಬರಿ ಗ್ರಾಮೀಣ ಮಟ್ಟದ ಸಮಸ್ಯೆಯಲ್ಲ, ಇದು ಇಡೀ ಜಗತ್ತಿನ ಸಮಸ್ಯೆ. ಕೇವಲ ಭಾರತದಲ್ಲಿ ಮಾತ್ರ ವಾಯುಮಾಲಿನ್ಯದ ಸಮಸ್ಯೆಯಿಲ್ಲ. ಬೇರೆ ಬೇರೆ ರಾಷ್ಟ್ರಗಳಲ್ಲಿ ಮೊಬೈಲ್ ಬಳಕೆಯಿಂದಲೂ ವಾಯುಮಾಲಿನ್ಯವಾಗುತ್ತಿದೆ. ಅದರಲ್ಲೂ ಭಾರತದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ವಾಯುಮಾಲಿನ್ಯ ವಿಪರೀತ ಹೆಚ್ಚುತ್ತಿದ್ದು, ಇಂದಿನ ಜನಾಂಗ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದರ ಮೂಲಕ ಪರಸರ ಸಂರಕ್ಷಿಸಬೇಕು ಎಂದರು.
ಬಸವರಾಜ ಗದ್ದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೀಜ್ ಸಂಸ್ಥೆಯ ಅಧ್ಯಕ್ಷ ಜಿ.ಎನ್. ಸಿಂಹ, ನೆಹರು ಯುವ ಕೇಂದ್ರದ ಲೆಕ್ಕ ಹಾಗೂ ಕಾರ್ಯಕ್ರಮ ಅಧಿಕಾರಿ ರಾಮರಾವ್ ಬಿರಾದಾರ, ಹುನಗುಂದ ತಾಲೂಕು ಪಂಚಾಯತ ಸಾಮಾಜಿಕ ಲೆಕ್ಕ ಪರಿಶೋಧಕ ಬಿ.ಜಿ. ರಾಘಾಪೂರ, ಆರಾಧ್ಯ ಸಮಗ್ರ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಮಹಾಂತೇಶ ಮಲಗಿಹಾಳ, ಮಹಾಂತೇಶ ಹಳ್ಳೂರ, ಎಸ್.ಬಿ. ಪಾಟೀಲ, ಶಿಕ್ಷಕಿ ಎಸ್.ಡಿ. ನದಾಫ್, ಗುರುಮಾತೆ ಎಸ್.ಬಿ ಬಳಿಗಾರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.