ಕೃಷ್ಣೆ ಒಡಲು ಖಾಲಿ: ನೀರಿನ ಸಮಸ್ಯೆ ತೀವ್ರ
Team Udayavani, Apr 26, 2019, 3:15 PM IST
ತೇರದಾಳ: ಕೃಷ್ಣಾ ನದಿಯ ಒಡಲು ಖಾಲಿಯಾಗಿದ್ದು, ತೇರದಾಳ ಸೇರಿದಂತೆ ಈ ಭಾಗದ ಜನತೆಗೆ ಜೀವಜಲವಿಲ್ಲದೆ ತೀವ್ರತರ ಸಂಕಷ್ಟ ಎದುರಾಗಿದೆ.
ಹಳಿಂಗಳಿಯ ಕೃಷ್ಣಾ ನದಿಯಿಂದ ಪಡೆಯಲಾಗುತ್ತಿದ್ದ ನೀರು ಐದು ದಿನಗಳಿಂದ ಸ್ಥಗಿತಗೊಂಡಿದ್ದು, ಜಾಕ್‌ವೆಲ್ನ ಬಳಿ ನದಿಯು ನೀರಿಲ್ಲದೆ ಸಂಪೂರ್ಣ ಬರಿದಾಗಿದೆ. ಇದರಿಂದ ನಗರ ಸೇರಿದಂತೆ ಸುತ್ತಮುತ್ತಲಿನ ಕೆಲ ಕಡೆ ಜನ-ಜಾನುವಾರುಗಳಿಗೆ ನೀರಿನ ಆತಂಕ ಎದುರಾಗಿದೆ. ಇದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಲ್ಲಿ ಪುರಸಭೆ ಸಾಕಷ್ಟು ಕಸರತ್ತು ಮಾಡುತ್ತಿದೆ.
ನಗರಕ್ಕೆ ಹಳಿಂಗಳಿ ಸಮೀಪದ ನದಿಯಿಂದ ಸರಬರಾಜು ಆಗುತ್ತಿದ್ದ ಜಾಕವೆಲ್ನಲ್ಲಿ ನೀರಿಲ್ಲ. ನದಿ ಇನ್ನೊಂದು ಭಾಗದ ಮಡುವಿನಲ್ಲಿದ್ದ ನೀರು ತರಲು ಜೆಸಿಬಿ ಯಂತ್ರದ ಮೂಲಕ ಕಾಲುವೆ ಕೊರೆಸಿ ನೀರು ಹರಿಸಲಾಗಿತು. ಆದರೆ, ಈಗ ನದಿಪಾತ್ರದಲ್ಲಿರುವ ನೀರೆತ್ತುವ ಪಂಪ್‌ಸೆಟ್‌ಗಳು ಇರುವ ಸ್ವಲ್ಪ ನೀರನ್ನು ಬೆಳೆಗಳಿಗೆ ಸಾಗಿಸುತ್ತಿವೆ. ಇದರಿಂದ ನಗರದ ಜನತೆಗೆ ಕುಡಿಯುವ ನೀರು ದೊರಕುತ್ತಿಲ್ಲ.
ಚುನಾವಣೆ ಕಾರ್ಯನಿಮಿತ್ತ ತೊಡಗಿದ್ದ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ನದಿಪಾತ್ರದ ಪಂಪ್‌ಸೆಟ್‌ಗಳ ಮಾಲಿಕರು ಬೆಳೆಗಳಿಗೆ ನೀರು ಸಾಗಿಸುವುದನ್ನು ನಿಲ್ಲಿಸಿದರೆ 10-12ದಿನವರೆಗೆ ಜೀವಜಲ ಲಭ್ಯವಾಗಬಹುದು.
ನೆರೆಯ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಶೀಘ್ರವೇ ನದಿಗೆ ನೀರು ಬಿಡಿಸಿಕೊಂಡು ಬರುವ ಕೆಲಸವನ್ನು ಸರ್ಕಾರದ ಮಟ್ಟದಲ್ಲಿ ಮಾಡಿಸಲು ಜನಪ್ರತಿನಿಧಿಗಳು ಪ್ರಯತ್ನಿಸಬೇಕು. ಒಂದು ಕಡೆ ಕೃಷ್ಣೆ ಬತ್ತಿ ಹೋಗಿದೆ. ಇನ್ನೊಂದು ಕಡೆ ಕೊಳವೆ ಬಾವಿಗಳು ಬಿಕ್ಕುತ್ತಿವೆ. ಹೀಗಾಗಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.
ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆಯ ಎಚ್ಚರಿಕೆ: ನದಿ ನೀರು ನಿಂತು ಹೋಗಿರುವುದರಿಂದ ನಗರದಲ್ಲಿ ಈಗಾಗಲೆ 56 ಕೊಳವೆಬಾವಿಗಳ ಮುಖಾಂತರ ಅನೇಕ ವಾರ್ಡ್‌ಗಳಲ್ಲಿ ನೀರು ಸರಬರಾಜು ಆಗುತ್ತಿದೆ. ಇನ್ನೂ 16 ಕೊಳವೆ ಬಾವಿಗಳನ್ನು ಪುರಸಭೆಯವರು ಕೊರಿಸುವ ತಯಾರಿಯಲ್ಲಿದ್ದಾರೆ. ಹಾಗೂ ಕೊಳವೆ ಬಾವಿ ಹೊಂದಿದ ಖಾಸಗಿಯವರಿಂದಲೂ ವಿನಂತಿಸಿ ನೀರು ಪಡೆಯುವ ಯೋಚನೆ ಮಾಡಿದ್ದಾರೆ. ಆದರೆ ಗುಡ್ಡದ ಪ್ರದೇಶದಲ್ಲಿರುವ ಶಿಕ್ಷಕರ ಕಾಲೋನಿ ಸೇರಿದಂತೆ ಕೆಲವು ಕಡೆ ಕೊಳವೆ ಬಾವಿಗಳೂ ಇಲ್ಲ, ಜನ ಮಾತ್ರ ದುಬಾರಿ ಹಣ ತೆತ್ತು ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುತ್ತಿದ್ದಾರೆ.
ನಮ್ಮ ಕಾಲೋನಿಗೂ ಬೇಸಿಗೆ ಕಾಲಕ್ಕೆ ನೀರಿನ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲಿ ಕೊಳವೆ ಬಾವಿ ಇಲ್ಲದಿದ್ದರೆ ಬೇರೆ ಕಡೆಯಿಂದ ಪೈಪ್‌ಗ್ಳ ಮೂಲಕ ನೀರು ತಂದು, ಇಲ್ಲಿ 3-4 ಸಿಸ್ಟರ್ನ್ ಅಳವಡಿಸಿದರೆ ಸಮಸ್ಯೆಗೆ ಪರಿಹಾರವಾಗುತ್ತದೆ. ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದರೆ, ಈ ಭಾಗದ ಮಹಿಳೆಯರು ಸೇರಿದಂತೆ ಖಾಲಿ ಕೊಡಗಳೊಂದಿಗೆ ಬಂದು ಪುರಸಭೆಗೆ ಮುತ್ತಿಗೆ ಹಾಕಿ
ಪ್ರತಿಭಟಿಸುವುದಾಗಿ ನಿವಾಸಿಗಳಾದ ಎಸ್.ಎನ್. ನಡುವಿನಮನಿ, ಜಿ.ಎಚ್. ಹಾವಣ್ಣವರ, ಕೆ.ಐ. ಪತ್ತಾರ, ಎಂ.ಡಿ. ಓಗಿ, ಎಂ.ಸಿ. ಕುಂಚಗನೂರ, ಎಸ್.ಎನ್. ಅಳಗುಂಡಿ, ಜೆ.ಎನ್. ಸನದಿ, ಎಸ್.ವ್ಹಿ. ಹಿರೇಮಠ, ಪಿ.ಎಸ್. ಶೆಟ್ಟಿ, ಅಶೋಕ ಮೋಪಗಾರ, ಎಸ್.ಆರ್. ರಾವಳ ಎಚ್ಚರಿಕೆ ನೀಡಿದ್ದಾರೆ.
ಬಾರದ ಕಾಲುವೆ ನೀರು: ಘಟಪ್ರಭಾ ಎಡದಂಡೆ ಕಾಲುವೆಗೆ ಈ ಭಾಗದ ಕೆರೆ ತುಂಬಿಸಿಕೊಳ್ಳಲು ಒಂದು ವಾರ ನೀರು ಹರಿಸಲಾಗಿತ್ತು. ಹಣ ಖರ್ಚು ಮಾಡಿ ಕೆರೆ ತುಂಬಿಸಿಕೊಳ್ಳಲು ಕಾಲುವೆ ದುರಸ್ತಿ ಮಾಡಿಸಿದ್ದರೂ ಸಹ ತೇರದಾಳ ಸೇರಿದಂತೆ ಈ ಭಾಗದ ಯಾವ ಕೆರೆಗೂ ನೀರು ಬಂದು ತಲುಪಲಿಲ್ಲ.
ನದಿಯಲ್ಲಿನ ನೀರು ಜಾಕ್‌ವೆಲ್ದಿಂದ ದೂರ ಹೋಗಿದೆ. ಕಾಲುವೆ ಮೂಲಕ ಜಾಕ್‌ವೆಲ್ಗೆ ನೀರು ತಂದರೆ 8-10 ದಿನಗಳವರೆಗೆ ನೀರು ದೊರಕುತ್ತದೆ. ಆದರೆ ಪಂಪ್‌ಸೆಟ್‌ಗಳು ಮಾತ್ರ ನಿರಂತರವಾಗಿ ನೀರು ಸೆಳೆಯುತ್ತಿವೆ. ಕುಡಿಯಲು ನೀರು ಸಾಗಿಸಬೇಕಾಗಿರುವ ಬಗ್ಗೆ ಮನವರಿಕೆ ಮಾಡಿ, ಕೆಲ ಪ್ರಮುಖರ ಮೋಟಾರ್‌ಗಳನ್ನೆ ಪಡೆದು, ಜೆಸಿಬಿಯಿಂದ ಕಾಲುವೆ ಮಾಡಲಾಗುತ್ತಿದೆ. ನಗರಕ್ಕೆ ನೀರು ಪೂರೈಸುವ ವ್ಯವಸ್ಥೆ ಮಾಡುತ್ತಿದ್ದೇವೆ.
•ಮಹಾವೀರ ಬೋರನ್ನವರ. ಮುಖ್ಯಾಧಿಕಾರಿ, ತೇರದಾಳ.
ಕೊಯ್ನಾದಿಂದ 2 ಟಿಎಂಸಿ ನೀರು ಹರಿಸಲು ಆಗ್ರಹಿಸಿ ಮನವಿ
ಜಮಖಂಡಿ: ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ 2 ಟಿಎಂಸಿ ನೀರು ಬಿಡುವಂತೆ ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಗುರುವಾರ ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಅಂದಾಜು 70 ಹಳ್ಳಿಗಳ ಜನ- ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದು, ಬೇಸಿಗೆ ಸಮಯದಲ್ಲಿ ಭೀಕರ ನೀರಿನ ಸಮಸ್ಯೆ ಎದುರಿಸಬೇಕಾಗಿದೆ. ಕೃಷ್ಣಾ ನದಿಯಲ್ಲಿ ನೀರು ಇಲ್ಲದೆ ಕುಡಿಯಲು ಬೇರೆ ಕಡೆಯಿಂದ ನೀರು ಪೂರೈಸುವ ಪರಿಸ್ಥಿತಿ ಅನಿವಾರ್ಯವಾಗಿದೆ. ಎರಡು ತಾಲೂಕಿನಲ್ಲಿ ಲಕ್ಷಾಂತರ ಎಕರೆ ಬೆಳೆದ ಕಬ್ಬು, ಇನ್ನಿತರ ಬೆಳೆಗಳು ಒಣಗಿ ಹೋಗುತ್ತವೆ. ಇದರಿಂದ ರೈತಾಪಿ ಜನ ಕಂಗಾಲಾಗಿ ದ್ದಾರೆ. ಕಳೆದ ವರ್ಷ ಮಳೆಗಾಲ ಸರಿಯಾಗಿ ಆಗದ ಕಾರಣ ಸಮಸ್ಯೆ ದೊಡ್ಡದಾಗುತ್ತಿದೆ. ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ.
ಕೊಯ್ನಾ ಜಲಾಶಯದಿಂದ ನದಿಗೆ ಕನಿಷ್ಠ 2 ಟಿಎಂಸಿ ನೀರು ಬಿಡುವುದು ಅವಶ್ಯವಾಗಿದೆ. ಕೂಡಲೇ ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಜೊತೆ ಸಂಪರ್ಕಿಸುವ ಮೂಲಕ 2 ಟಿಎಂಸಿ ನೀರು ಬಿಡುಗಡೆಗೆ ಪ್ರಯತ್ನಿಸಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಹಾಗೂ ಶಾಸಕ ಶ್ರೀಮಂತ ಪಾಟೀಲ ಅವರು ಸಚಿವರಿಗೆ ಒತ್ತಾಯಸಿದರು.
ಇದೇ ಸಂದರ್ಭದಲ್ಲಿ ಶಾಸಕ ಆನಂದ ನ್ಯಾಮಗೌಡ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಚರ್ಚೆ ನಡೆಸಿ, ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.