ಸಮೀಕ್ಷೆಗೆ ಜನ ಮಾಹಿತಿಯೇ ಕೊಡ್ತಿಲ್ಲ!

| ಸಮೀಕ್ಷೆಯಿಂದ ಕೈಬಿಡಿ; ಆಶಾ-ಅಂಗನವಾಡಿ ಕಾರ್ಯಕರ್ತೆಯರಿಂದ ಕೇಳಿ ಬಂದ ಕೂಗು

Team Udayavani, Mar 26, 2021, 6:36 PM IST

ಸಮೀಕ್ಷೆಗೆ ಜನ ಮಾಹಿತಿಯೇ ಕೊಡ್ತಿಲ್ಲ!

ಬಾಗಲಕೋಟೆ: ಜಿಲ್ಲೆಯಾದ್ಯಂತ ಕುಟುಂಬ ಸಮೀಕ್ಷೆ ಆರಂಭಗೊಂಡಿದ್ದು, ಸಮೀಕ್ಷೆಗಾರರು ಕೇಳುವ ಮಾಹಿತಿಯನ್ನು ಜನರು ಕೊಡುತ್ತಿಲ್ಲ. ಹೀಗಾಗಿ ಸಮೀಕ್ಷೆಗೆನೇಮಕಗೊಂಡ ಆಶಾ, ಅಂಗನವಾಡಿ ಕಾರ್ಯ ಕರ್ತೆಯರು ನಮ್ಮನ್ನು ಸಮೀಕ್ಷೆ ಯಿಂದ ಕೈಬಿಡಿ ಎಂಬ ಕೂಗು ಹಾಕಿದ್ದಾರೆ.

ಹೌದು. ಪ್ರತಿವರ್ಷ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆಯಿಂದ ಸಂತಾನೋತ್ಪತ್ತಿ ಹಾಗೂ ಮಗುವಿನ ಆರೋಗ್ಯಕಾರ್ಯಕ್ರಮದಡಿ ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆಯಿಂದ ಸಮಗ್ರ ಶಿಶುಅಭಿವೃದ್ಧಿ ಯೋಜನೆಯಡಿ ಪ್ರತ್ಯೇಕ ಸಮೀಕ್ಷೆನಡೆಸಲಾಗುತ್ತಿತ್ತು. ಈ ಬಾರಿ ಎರಡೂಇಲಾಖೆಗಳು ಒಟ್ಟಿಗೇ ಸಮೀಕ್ಷೆ ನಡೆಸುತ್ತಿವೆ. ಮಾಹಿತಿಗೆ ಕುಟುಂಬಗಳ ನಿರಾಕರಣೆ: ಕಳೆದತಿಂಗಳು, ಪಡಿತರ ಚೀಟಿ ವಿಷಯದಲ್ಲಿ ಸಚಿವ ಉಮೇಶ ಕತ್ತಿ ಅವರ ಹೇಳಿಕೆ ಸಮೀಕ್ಷೆಗೆ ತೀವ್ರ ಅಡ್ಡಿಯಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ.

ಯಾರು ಬೈಕ್‌, ಟಿವಿ, ಬ್ರಿಜ್‌ ಹೊಂದಿರುತ್ತಾರೋ ಅವರ ಪಡಿತರ ಚೀಟಿ ರದ್ದುಪಡಿಸಲಾಗುವುದು ಎಂಬ ಹೇಳಿಕೆ ಕೊಟ್ಟಿದ್ದರು. ಇದಕ್ಕೆ ಇಡೀ ರಾಜ್ಯಾದ್ಯಂತತೀವ್ರ ವಿರೋಧ ವ್ಯಕ್ತವಾದ ಬಳಿಕ ಅಂತಹ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳು ಹೇಳಿದ್ದರು. ಇದಾದ ಬಳಿಕ ರಾಜ್ಯಾದ್ಯಂತ ಕುಟುಂಬ ಸಮೀಕ್ಷೆ ನಡೆಯುತ್ತಿದ್ದು, ಸಮೀಕ್ಷೆಗೆ ಹೋದಲೆಲ್ಲ,ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.ಕುಟುಂಬ ಸಮೀಕ್ಷೆಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಈ ಕಾರ್ಯಕ್ಕಾಗಿ ಅವರಿಗೆ ಪ್ರತ್ಯೇಕಸಂಭಾವನೆ ಇಲ್ಲ. ಅಲ್ಲದೇ ಇದು ಆನ್‌ಲೈನ್‌-ಆಫ್‌ಲೈನ್‌ ಸಮೀಕ್ಷೆ ನಡೆಸುತ್ತಿದ್ದು, ಸಮೀಕ್ಷೆಗಾರರು ಮೊಬೈಲ್‌, ಟ್ಯಾಬ್‌ ಮೂಲಕ ದಾಖಲೀಕರಣ ಮಾಡಬೇಕು.4ರಿಂದ 5 ಸಾವಿರ ಗೌರವಧನಕ್ಕೆ ಕೆಲಸಮಾಡುವ ಆಶಾಗಳು, ಹೊಸ ಮೊಬೈಲ್‌ಖರೀದಿಸಿ, ಸಮೀಕ್ಷೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಕಣ್ಣೀರಿಟ್ಟ ಆಶಾಗಳು: ನಾವು ತಿಂಗಳಿಗೆ 4ಸಾವಿರಕ್ಕೆ ಕೆಲಸ ಮಾಡುತ್ತಿದ್ದೇವೆ.ಅಧಿಕಾರಿಗಳು ಹೊಸ ಮೊಬೈಲ್‌ ಖರೀದಿಸಿಮನೆ ಮನೆಗೆ ಹೋಗಿ ಕುಟುಂಬ ಸಮೀಕ್ಷೆಮಾಡಿ ಎಂದು ಹೇಳುತ್ತಿದ್ದಾರೆ. ನಿತ್ಯ ದುಡಿದು ತಿನ್ನುವ ನಮಗೆ 10ರಿಂದ 15 ಸಾವಿರ ಕೊಟ್ಟುಹೊಸ ಮೊಬೈಲ್‌ ಖರೀದಿ ಹೇಗೆ ಸಾಧ್ಯ.ಅಷ್ಟೊಂದು ಹಣ ಕೊಟ್ಟು ಮೊಬೈಲ್‌ಖರೀದಿಸಿದರೂ ಕುಟುಂಬ ಸಮೀಕ್ಷೆ ಕೆಲಸಕ್ಕೆಪ್ರತ್ಯೇಕವಾಗಿ ಸಂಭಾವನೆ ಕೊಡುತ್ತಿಲ್ಲ.ಕೊಟ್ಟರೆ ಅದೇ ಹಣವನ್ನು ಮೊಬೈಲ್‌ಅಂಗಡಿಗೆ ಕೊಡಬಹುದಿತ್ತು. ಪಗಾರಕೊಡದೇ, ಪುಕ್ಕಟೆ ದುಡಿ ಅಂದ್ರೆ ನಾವು ಹೇಗೆದುಡಿಯಬೇಕು ಎಂದು ಆಶಾಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವಿಷಯಕ್ಕಾಗಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿದ ಬೃಹತ್‌ ಪ್ರತಿಭಟನೆ ವೇಳೆ ಹಲವು ಆಶಾಗಳು,ಆರ್ಥಿಕ ಹೊರೆಯಾಗುತ್ತಿರುವ ಇ-ಸಮೀಕ್ಷೆಕಾರ್ಯದಿಂದ ನಮ್ಮನ್ನು ಕೈಬಿಡಿ ಎಂದುಕಣ್ಣೀರು ಹಾಕಿದ್ದಾರೆ. ಆದರೆ ಅಧಿಕಾರಿಗಳುಮಾತ್ರ ಇದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ.

ಏನಿದು ಕುಟುಂಬ ಸಮೀಕ್ಷೆ?: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಶಾ ಹಾಗೂಅಂಗನವಾಡಿ ಕಾರ್ಯಕರ್ತೆಯರ ಮೂಲಕಜಿಲ್ಲೆಯಾದ್ಯಂತ ಸಮೀಕ್ಷೆ ನಡೆಸಲಾಗುತ್ತಿದೆ.ಸಮೀಕ್ಷೆಗೆ ಮೂಲಭೂತ ಸಲಕರಣೆ ಇಲ್ಲದಕಾರಣ ಅಂಗನವಾಡಿ ಕಾರ್ಯಕರ್ತೆಯರು ಸದ್ಯಕ್ಕೆ ಇ-ಸಮೀಕ್ಷೆ ಮಾಡುತ್ತಿಲ್ಲ. ಅವರುತಮ್ಮ ನಿತ್ಯದ ಕೆಲಸ-ಕಾರ್ಯಗಳಲ್ಲಿಮಗ್ನರಾಗಿದ್ದಾರೆ. ಆದರೆ, ಆಶಾಗಳಿಗೆ ಸಮೀಕ್ಷೆ ಮಾಡಲೇಬೇಕೆಂದು ಒತ್ತಡಹಾಕುವ ಪ್ರಕ್ರಿಯೆ ನಡೆಯುತ್ತಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಸಮೀಕ್ಷೆ ನಡೆಸುವ ಆಶಾಗಳಿಗೆ ಕೆಲವುಪ್ರಶ್ನಾವಳಿ ನೀಡಿದ್ದು, ಪ್ರತಿಯೊಂದುಕುಟುಂಬಕ್ಕೂ ಭೇಟಿ ನೀಡಿ ಆ ಮಾಹಿತಿಯನ್ನುಆನ್‌ಲೈನ್‌ ಮೂಲಕ ದಾಖಲಿಸಬೇಕು. ಒಂದು ಕುಟುಂಬದಲ್ಲಿ ಎಷ್ಟು ಜನರಿದ್ದಾರೆ, ಹೆಣ್ಣು-ಗಂಡು ಮಕ್ಕಳು, ಖಾಸಗಿ-ಸರ್ಕಾರಿ ನೌಕರಿ, ಕೃಷಿ-ಖುಷ್ಕಿ ಭೂಮಿ, ಪಡಿತರ ಚೀಟಿಯ ವಿಧ, ಮೊಬೈಲ್‌, ಬೈಕ್‌, ಕಾರು,  ಮನೆಯಲ್ಲಿ ಫ್ರೀಜ್‌ ಹೀಗೆ ವಿವಿಧ ಮಾಹಿತಿಕಲೆ ಹಾಕಲಾಗುತ್ತಿದೆ. ಈ ರೀತಿಯ ಮಾಹಿತಿಪಡೆಯಲು ಕುಟುಂಬಗಳ ಬಳಿ ಹೋದಾಗ ಬಹುತೇಕರು ಮಾಹಿತಿ ಕೊಡುತ್ತಿಲ್ಲ.

ಕಾರಣ ಸರಿಯಾದ ಮಾಹಿತಿ ಕೊಟ್ಟರೆ ನಮ್ಮ ಪಡಿತರ ಚೀಟಿ ರದ್ದು ಮಾಡುತ್ತಾರೆಂಬಆತಂಕ ಕುಟುಂಬದವರದ್ದು. ಒಟ್ಟಾರೆಜಿಲ್ಲೆಯಲ್ಲಿ ಕಳೆದೊಂದು ವಾರದಿಂದನಡೆಯುತ್ತಿರುವ ಕುಟುಂಬ ಸಮೀಕ್ಷೆಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರುವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತ ಕುಟುಂಬದವರೂ ಸರಿಯಾದ ಮಾಹಿತಿಕೊಡಲು ಹಿಂಜರಿಯುತ್ತಿದ್ದಾರೆ. ಕುಟುಂಬಸಮೀಕ್ಷೆಯ ನಿಜವಾದ ಅಗತ್ಯತೆಯನ್ನುಅಧಿಕಾರಿಗಳು ಸಾರ್ವಜನಿಕಗೊಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಯಿಂದ ಕುಟುಂಬ ಸಮೀಕ್ಷೆ ನಡೆಯುತ್ತಿದೆ. ಇದಕ್ಕಾಗಿ ಆಶಾಗಳು ಮೊಬೈಲ್‌ ಖರೀದಿ ಮಾಡಬೇಕೆಂದು ನಾವು ಹೇಳಿಲ್ಲ. ಆಶಾಗಳು ಕುಟುಂಬ ಸಮೀಕ್ಷೆ ಮಾಡಿ, ಇಲಾಖೆಯ ಸಿಬ್ಬಂದಿ ಮೂಲಕ ಆನ್‌ಲೈನ್‌ ಮೂಲಕ ದಾಖಲೀಕರಿಸಬೇಕು. – ಡಾ|ಅನಂತ ದೇಸಾಯಿ, ಡಿಎಚ್‌ಒ

ಕುಟುಂಬ ಸಮೀಕ್ಷೆ ನಡೆಸಲೇಬೇಕು, ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂದು ಒತ್ತಡ ಹಾಕುತ್ತಿದ್ದಾರೆ. ಹಲವಾರು ಆಶಾಗಳ ಬಳಿ ದೊಡ್ಡ ಮೊಬೈಲ್‌ ಇಲ್ಲ.ಅವರು ಹೊಸ ಮೊಬೈಲ್‌ಗೆ 10ರಿಂದ 15 ಸಾವಿರ ಖರ್ಚು ಮಾಡ ಬೇಕಾಗುತ್ತದೆ. ಇಲಾಖೆಯಿಂದಲೇ ಟ್ಯಾಬ್‌ ಇಲ್ಲವೇ ಮೊಬೈಲ್‌ ಕೊಡಬೇಕು. ಪ್ರತಿಯೊಂದುಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾಟಾ ಎಂಟ್ರಿ ಆಪರೇಟರ್‌ ಇರಬೇಕು. ಆಗ ನಾವುಕುಟುಂಬ ಸಮೀಕ್ಷೆ ಮಾಹಿತಿ ದಾಖಲಿಸಲು ಸಾಧ್ಯವಾಗುತ್ತದೆ. ಈ ಕಾರ್ಯಕ್ಕೆ ಪ್ರತ್ಯೇಕ ಸಂಭಾವನೆ ನೀಡಬೇಕು. – ಅಂಜನಾ ಕುಂಬಾರ, ಜಿಲ್ಲಾ ಕಾರ್ಯದರ್ಶಿ, ಆಶಾ ಕಾರ್ಯಕರ್ತೆಯರ ಸಂಘ

 

­ ಶ್ರೀಶೈಲ ಕೆ.ಬಿರಾದಾರ

ಟಾಪ್ ನ್ಯೂಸ್

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

3-

Mahalingpur: 2020ರ ಪುರಸಭೆ ಗಲಾಟೆ ಪ್ರಕರಣ: ಮರು ತನಿಖೆಗೆ ಕೋರ್ಟ್ ಆದೇಶ

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.