ಪ್ರಸಿದ್ದ ಕರಡಿ ಕಲೆಯ ತಾಳವಾದ್ಯ ಕಲಾವಿದ ಮಡಿವಾಳಪ್ಪ ಕರಡಿ ಇನ್ನಿಲ್ಲ
Team Udayavani, Oct 12, 2022, 7:47 PM IST
ಮಹಾಲಿಂಗಪುರ: ಪಟ್ಟಣದ ಪ್ರಸಿದ್ದ ಕರಡಿ ಕಲೆಯ ತಾಳವಾದ್ಯ ಅಪ್ರತಿಮ ಹಿರಿಯ ಕಲಾವಿದ, ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಸದಸ್ಯ, ನೇಕಾರ ಸಮುದಾಯದ ಹಿರಿಯ ಜೀವಿ ಮಡಿವಾಳಪ್ಪ ಕರಡಿ ಅವರು ಅನಾರೋಗ್ಯ ನಿಮಿತ್ತ ಬುಧವಾರ ಇಹಲೋಕ ತ್ಯಜಿಸುವದರೊಂದಿಗೆ ಐತಿಹಾಸಿಕ ಕರಡಿ ಕಲೆಯ ತಾಳವಾದ್ಯವನ್ನು ನಿಲ್ಲಿಸಿದ್ದಾರೆ. ಈ ಮೂಲಕ ಈ ಭಾಗದ ಕಲಾಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಪಟ್ಟಣದ ಕರಡಿ ಕಲಾಮನೆತನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಮುಧೋಳ ಸಂಸ್ಥಾನ ಮಾಲೋಜಿ ಘೋರ್ಪಡೆ ಕಾಲದಿಂದ ಇಂದಿನವರೆಗೂ, ಸುಮಾರು 8ನೇ ತಲೆಮಾರಿನವರೆಗೂ ಈ ಮನೆತನದಲ್ಲಿ ಕರಡಿ ಕಲೆಯು ವಂಶಪರಂಪರೆಯಾಗಿ ಬೆಳೆದು ಬಂದಿದೆ. ಇಂದಿಗೂ ಈ ಮನೆತನದಲ್ಲಿ ಹಿರಿಯ-ಕಿರಿಯ ಸೇರಿ 45 ಕ್ಕೂ ಅಧಿಕ ಕಲಾವಿದರು ಕಲಾ ಸೇವೆಯಲ್ಲಿದ್ದಾರೆ.
ಕಿರು ಪರಿಚಯ: ಮಹಾಲಿಂಗಪ್ಪ ಮತ್ತು ಕಾಳವ್ವ ಕರಡಿ ದಂಪತಿಗಳ ಮಗನಾಗಿ 1-6-1953 ರಂದು ಜನಿಸಿದ ಮಡಿವಾಳಪ್ಪನವರು ಕಿರಿಯ ವಯಸ್ಸಿನಲ್ಲಿಯೇ ಕಲಾಪ್ರಪಂಚಕ್ಕೆ ಕಾಲಿಟ್ಟರು. ದೊಡ್ಡಪ್ಪ ವೀರಭದ್ರಪ್ಪ, ಅಣ್ಣ ಚನ್ನಪ್ಪ, ಅಪ್ಪ ಮಹಾಲಿಂಗಪ್ಪ ಕರಡಿ ಅವರ ಮಾರ್ಗದರ್ಶನದಲ್ಲಿ ಕರಡಿ ಕಲೆಯನ್ನು ಕರಗತ ಮಾಡಿಕೊಂಡರು. ಅದರಲ್ಲೂ ಕರಡಿ ಕಲೆಯ ತಾಳವಾದ್ಯದಲ್ಲಿ ವಿಶೇಷ ಪರಿಣಿತಿಯನ್ನು ಹೊಂದಿ ತಮ್ಮ ಜೀವನದುದ್ದಕ್ಕೂ ಕಲಾಸೇವೆ ಸಲ್ಲಿಸಿ ನಾಡಿನೆಲ್ಲಡೆ ಹೆಸರುವಾಸಿಯಾದವರು ಮಡಿವಾಳಪ್ಪ ಕರಡಿ.
1976 ರಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನ ವಜ್ರಮಹೋತ್ಸವದ ನಿಮಿತ್ಯ ನಡೆದ ಪ್ರಪ್ರಥಮ ಜಾನಪದ ಕಲಾಮಹೋತ್ಸವದಲ್ಲಿ ಪ್ರಥಮವಾಗಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ನಂತರ ಕರ್ನಾಟಕ ಸೇರಿದಂತೆ ನಮ್ಮ ದೇಶದ ಹತ್ತಾರು ರಾಜ್ಯಗಳಲ್ಲಿನ ವಿವಿಧ ಸಮ್ಮೇಳನ, ಉತ್ಸವ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ತಮ್ಮ ಜೀವನದಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದ್ದಲ್ಲದೇ, ಯುವ ಕಲಾವಿದರಿಗೆ ಕಲಾ ಬೋಧನೆ ಹಾಗೂ ಹಲವಾರು ಕಾರ್ಯಕ್ರಮಗಳಲ್ಲಿ ನಿರ್ಣಾಯಕರಾಗಿ ಸೇವೆ ಸಲ್ಲಿಸಿದ ಕೀರ್ತಿ ಮಡಿವಾಳಪ್ಪ ಕರಡಿ ಅವರಿಗೆ ಸಲ್ಲುತ್ತದೆ.
ಮಡಿವಾಳಪ್ಪನವರ ಕರಡಿಯ ತಾಳವಾದ್ಯ ಕಲೆಗೆ ಬಾಗಲಕೋಟೆ ಜಿಲ್ಲಾ ರಾಜ್ಯೋತ್ಸವ, ವಿವಿಧ ಸಂಘ-ಸಂಸ್ಥೆಗಳು, ಮಠಮಾನ್ಯಗಳಿಂದ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಕರ್ನಾಟಕ ಸರ್ಕಾರದ ಕರ್ನಾಟಕ ಜಾನಪದ ಪರಿಷತ್ ಕೊಡಮಾಡಿದ 2004ನೇ(6-3-2004 )ಸಾಲಿನ ಜಾನಪದ ಲೋಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2014 ರಿಂದ 2017 ರವರೆಗೆ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾಗಿಯೂ ತಮ್ಮ ಕಲಾಸೇವೆಯನ್ನು ಸಲ್ಲಿಸಿದ್ದಾರೆ. ಇವರ ಪತ್ನಿ ಕಸ್ತೂರಿಬಾಯಿ ಸೋಬಾನೆ ಪದದ ಕಲಾವಿದೆ, ಮೂರು ಮಕ್ಕಳಾದ ಶಿವಾನಂದ, ಆನಂದ, ಮಹಾಲಿಂಗ ಅವರು ಕರಡಿ ಕಲಾವಿದರಾಗಿದ್ದಾರೆ.
ಬೆಲ್ಲದನಾಡು-ಕಲೆಯ ತವರೂರಾದ ಮಹಾಲಿಂಗಪುರದ ಪ್ರಸಿದ್ದ ಕರಡಿ ಕಲಾವಿದ ಮಡಿವಾಳಪ್ಪ ಕರಡಿ ಅವರ ಅಕಾಲಿಕ ನಿಧನದಿಂದ ಜಾನಪದ ಕಲಾಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
-ವರದಿ : ಚಂದ್ರಶೇಖರ ಮೋರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.