ಕೇಂದ್ರದ ನಡೆ ಖಂಡಿಸಿ ರೈತರ ಪ್ರತಿಭಟನೆ
Team Udayavani, Jan 31, 2021, 5:16 PM IST
ಮುಧೋಳ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರತಿಭಟನಾನಿರತ ರೈತರ ಮನೆಗಳ ಮೆಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿ ನಗರದ ಗಾಂಧಿ ವೃತ್ತದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಪ್ರತಿಭಟನೆ ನಡೆಸಿದರು.
ಕೇಂದ್ರದ ನಡೆಯಿಂದ ಪ್ರತಿಭಟನಾಕಾರರು ಹಿಂಜರಿಯುವುದಿಲ್ಲ. ಕೇಂದ್ರ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಕೃಷಿ ಕಾಯ್ದೆ ರದ್ದುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೋವಿಡ್ ಹೆಸರಲ್ಲಿ ದೇಶದ ಜನರನ್ನು ಮನೆಯೊಳಗೆ ಕೂಡಿಹಾಕಿ ರೈತ ವಿರೋಧಿ ಕಾಯ್ದೆ ಜಾರಿಗೆ ತಂದಿದ್ದಾರೆ. ಶ್ರೀಮಂತರ ಅನುಕೂಲಕ್ಕೆ ಕಾನೂನು ಜಾರಿಗೆ ತರುತ್ತಿರುವ ಮೋದಿ ಬಡವರು ಹಾಗೂ ರೈತರ ಹಿತಾಸಕ್ತಿ ಮರೆತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ಕೇಂದ್ರದಿಂದ ರೈತರ ಮೇಲೆ ದಬ್ಬಾಳಿಕೆ
ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ, ಮುಖಂಡರಾದ ಸಿದ್ದು ಉಳ್ಳಾಗಡ್ಡಿ, ಯಂಕಣ್ಣ ಮಳಲಿ, ಮಲ್ಲಪ್ಪ ದೇಸಾಯಿ, ಸದಾಶಿವ ಮಡ್ಡೆಪ್ಪನವರ, ದುಂಡಪ್ಪ ಕುಡಚಿ, ಕಲ್ಲಪ್ಪ ನಾಗರಾಳ, ಸುರೇಶ ಚಿಂಚಲಿ, ಶಂಕರ ನಾಯಕ, ಚಂದ್ರಶೇಖರ ನಿಂಗನ್ನವರ,ದೇವಪ್ಪ ನಾಗನೂರ, ಬಸಲಿಂಗಪ್ಪ ಸಾವಂತ, ರಮೇಶ ಕಡ್ಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.