ತುಂತುರು ನೀರಿನ ಮೂಲಕ ಗೊಬ್ಬರ ಸಿಂಪಡಣೆ… ಪಾರಂಪರಿಕ ಕೃಷಿ ಪದ್ಧತಿಯಿಂದ ಖುಷಿಕಂಡ ರೈತ
ಸಾವಯವ ಕೃಷಿಯಲ್ಲಿಯೇ "ಪರಮಾನಂದ"
Team Udayavani, Aug 5, 2024, 11:01 AM IST
ಮುಧೋಳ: ಆಧುನಿಕ ಕೃಷಿ ಪದ್ದತಿಯಲ್ಲಿ ತೊಡಗಿಕೊಂಡಿರುವ ರೈತರು ತಮ್ಮ ಹೊಲಕ್ಕೆ ರಸಾಯನಿಕ ಗೊಬ್ಬರ ಬಳಸುವವರೆ ಹೆಚ್ಚು. ಪಾರಂಪರಿಕ ಕೃಷಿ ಚಟುವಟಿಕೆ ಅಳವಡಿಸಿಕೊಂಡು ಸಾವಯವ ಗೊಬ್ಬರ ಬಳಕೆ ಮಾಡುವ ರೈತರು ಇಂದು ತೀರಾ ಅಪರೂಪವಾಗಿದ್ದಾರೆ. ಅಂತಹ ಅಪರೂಪದ ರೈತರ ಸಾಲಿನಲ್ಲಿ ತಾಲೂಕಿನ ಪರಮಾನಂದ ಜನವಾಡ ಕೂಡಾ ಒಬ್ಬರು. ಮುಗಳಖೋಡದ ನಿವಾಸಿ ಪರಮಾನಂದ ಹಲವಾರು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ಯಶಸ್ವಿ ರೈತರಾಗಿದ್ದಾರೆ.
ಐದು ಎಕರೆ ಸಂಪೂರ್ಣ ಸಾವಯವ : ಒಟ್ಟು 9ಎಕರೆ ಜಮೀನು ಹೊಂದಿರುವ ಪರಮಾನಂದ ಅವರು ಸದ್ಯ ಐದು ಎಕರೆ ಜಮೀನಿನಲ್ಲಿ ಸಂಪೂರ್ಣ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಐದು ಎಕರೆ ಜಮೀನಿನಲ್ಲಿ ಕಬ್ಬು, ಮೆಕ್ಕೆಜೋಳವನ್ನು ಪ್ರಮುಖ ಬೆಳೆಯನ್ನಾಗಿ ಬೆಳೆದಿರುವ ರೈತ ಸಾವಯವ ಗೊಬ್ಬರದ ಮೂಲಕ ಹೊಲವನ್ನು ಹಚ್ಚ ಹಸಿರಾಗಿಟ್ಟುಕೊಂಡಿದ್ದಾನೆ.
ನಾಲ್ಕು ವಿಧಾನ ಅಳವಡಿಕೆ : ರೈತ ಪರಮಾನಂದ ಅವರು ಒಟ್ಟು ನಾಲ್ಕು ವಿಧಗಳ ಮೂಲಕ ಸಾವಯವ ಗೊಬ್ಬರವನ್ನು ತಾವೇ ತಯಾರಿಸಿಕೊಳ್ಳುತ್ತಾರೆ.
ಜೀವಾಮೃತ, ಗೋ ಕೃಪಾಮೃತ, ವೇಸ್ಟ್ ಡಿಕಂಪೋಸರ್ ಹಾಗೂ ಎರೆಹುಳು ಗೊಬ್ಬರವನ್ನು ತಮ್ಮಲ್ಲಿಯೇ ತಯಾರಿಸಿಕೊಂಡು ನಿತ್ಯ ಅಗತ್ಯಕ್ಕೆ ತಕ್ಕಂತೆ ಬೆಳೆಗಳಿಗೆ ಸಿಂಪಡನೆ ಮಾಡುತ್ತಾರೆ.
ಜೀವಾಮೃತ ಹಾಗೂ ವೇಸ್ಟ್ ಡಿ ಕಂಪೋಸರ್ ಗೊಬ್ಬರವನ್ನು ಹಲವು ವಿಧಗಳ ಮೂಲಕ ತಯಾರಿಸಿದರೆ. ಗೋ ಕೃಪಾಮೃತಕ್ಕೆ ಕನ್ಹೇರಿ ಮಠದ ಮಾರ್ಗದರ್ಶನದಲ್ಲಿ ತಯಾರಿಸಿ ಪ್ರತಿಯೊಂದನ್ನು ವಾರಕ್ಕೆ 200 ಲೀಟರ್ ಗೊಬ್ಬರವನ್ನು ಕ್ರಮವಾಗಿ ತಯಾರಿಸಿ ಬಳಕೆ ಮಾಡುತ್ತಾರೆ.
ನೀರಿನೊಂದಿಗೆ ಮಿಶ್ರಣ : ಪರಮಾನಂದ ಅವರು ತಯಾರಿಸುವ ಗೊಬ್ಬರವನ್ನು ಅವರು ಜಮೀನಿಗೆ ಹರಿಸುವ ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಗಳಿಗೆ ಉಣಿಸುತ್ತಾರೆ. ತುಂತುರು ನೀರಾವರಿ ಅಳವಡಿಸಿಕೊಂಡು ಪೈಪ್ ಮೂಲಕ ನೇರವಾಗಿ ಬೆಳೆಗಳಿಗೆ ಹರಿಸುತ್ತಾರೆ. ಜಮೀನಿಲ್ಲಿ ಬಿತ್ತಿರುವ ಮೆಕ್ಕೆಜೋಳ, ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ನೀರಿನ ಮೂಲಕ ಸಾವಯವ ಗೊಬ್ಬರ ಹಾಯಿಸುವುದರಿಂದ ಬೆಳೆ ಬಲು ಸೋಂಪಾಗಿ ಬಂದು ಇಳುವರಿಯೂ ಹೆಚ್ಚಾಗಲಿದೆ.
ಮಿಶ್ರ ಬೆಳೆಯಿಂದ ಹೆಚ್ಚಿನ ಆದಾಯ : ಪರಮಾನಂದ ಬೆಳೆದಿರುವ ಕಬ್ಬು ಬೆಳೆಯಲ್ಲಿ ಅಲ್ಪಾವಧಿಯಲ್ಲಿ ಇಳುವರಿ ಕೊಡುವ ಟೊಮೋಟೊವನ್ನು ಮಿಶ್ರ ಬೆಳೆಯನ್ನಾಗಿ ಬೆಳೆದು ಆರ್ಥಿಕತೆ ಆದಾಯದ ಮೂಲ ಹೆಚ್ಚಿಸಿಕೊಂಡಿದ್ದಾರೆ. ಕಬ್ಬು ದೀರ್ಘಾವಧಿ ಬೆಳೆಯಾಗಿರುವ ಕಾರಣ ಕಬ್ಬು ನಾಟಿಯ ಮಧ್ಯೆ ಟೊಮೊಟೊ ಬೆಳೆದು ನಿತ್ಯದ ಆರ್ಥಿಕ ಅವಶ್ಯಕತೆ ಪೂರೈಸಿಕೊಳ್ಳುತ್ತಾರೆ.
ಎರೆಹುಳು ಗೊಬ್ಬರ ಉತ್ಪಾದನೆ ಕೇಂದ್ರ : ಪರಮಾನಂದ ತಮ್ಮ ಜಮೀನಿನಲ್ಲಿಯೇ ಎರೆಹುಳು ಗೊಬ್ಬರ ತಯಾರಿಕೆ ಕೇಂದ್ರವನ್ನು ನಿರ್ಮಿಸಿಕೊಂಡಿದ್ದಾರೆ. ವರ್ಷಕ್ಕೆ ಸರಿಸುಮಾರು ಒಂದು ಟನ್ ನಷ್ಟು ಗೊಬ್ಬರ ಉತ್ಪಾದಿಸುವ ಅವರು ತಮ್ಮ ಜಮೀನಿಗೆ ಬಳಕೆ ಮಾಡಿ ಮಣ್ಣಿಮ ಫಲವತ್ತತೆಯನ್ನು ಹೆಚ್ಚಿಸುವತ್ತ ಹೆಚ್ಚಿನ ಗಮನ ಹರಿಸಿ ಯಶಸ್ವಿಯಾಗಿದ್ದಾರೆ.
ಹೈನುಗಾರಿಕೆಗೆ ಒತ್ತು : ಕೃಷಿಯೊಂದಿಗೆ ಕೃಷಿಗೆ ಪೂರಕವಾದ ಚಟುವಟಿಕೆಯಲ್ಲಿ ತೊಡಗಿಕೊಂಡು ಹಸು ಸಾಕಿಕೊಂಡಿದ್ದಾರೆ ಅವುಗಳಿಂದ ನಿತ್ಯ 20ಲೀಟರ್ ಹಾಲು ಮಾರಾಟ ಮಾಡುತ್ತಾರೆ. ಸಣ್ಣ ಪ್ರಮಾಣದಲ್ಲಿ ಮೇಕೆ ಸಾಕಿ ಅಗತ್ಯಕ್ಕೆ ತಕ್ಕಾಗ ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಳ್ಳುತ್ತಿದ್ದಾರೆ.
– ಕೇವಲ ರಸಗೊಬ್ಬರ ಬಳಳಕೆಯಿಂದ ಕೃಷಿ ಮಾಡುವುದರಿಂದ ಭೂಮಿ ತನ್ನ ಸತ್ವವನ್ನು ಬಹುಬೇಗ ಕಳೆದುಕೊಳ್ಳುತ್ತದೆ. ಸಾವಯವ ಕೃಷಿಗೆ ಒತ್ತು ನೀಡುವುದರಿಂದ ಆರೋಗ್ಯಯುತ ಆಹಾರ ಪಡೆಯುವುದರೊಂದಿಗೆ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು.
– ಪರಮಾನಂದ ಜನವಾಡ ಮುಗಳಖೋಡ ರೈತ
– ಗೋವಿಂದಪ್ಪ ತಳವಾರ ಮುಧೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
MUST WATCH
ಹೊಸ ಸೇರ್ಪಡೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.