ರೈತರ ಸಮಸ್ಯೆ ಸರಿಪಡಿಸಿ
Team Udayavani, Apr 7, 2021, 3:28 PM IST
ಕಂದಗಲ್ಲ: ರೈತರ ಬದುಕು ಸುಂದರವಾಗುವ ಜತೆಗೆನೆಮ್ಮದಿಯಾಗಿದ್ದರೆ ಮಾತ್ರ ಎಲ್ಲರಜೀವನ ಸುಃಖಕರವಾಗಿರಲು ಸಾಧ್ಯ. ಹೀಗಾಗಿ ರೈತರ ಬದುಕು ಸಮೃದ್ಧಿಯಾಗಿರಬೇಕು ಎಂಬುದುಬಿಜೆಪಿ ಸರ್ಕಾರದ ಸಂಕಲ್ಪವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಗ್ರಾಮದ 33/11 ಕೆ.ವಿ. ವಿದ್ಯುತ್ ಪರಿವರ್ತನೆ ಉಪಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೆಳೆಯುವ ಬೆಳೆಗೆ ಸರಿಯಾದ ವಿದ್ಯುತ್ ಇಲ್ಲದ ಕಾರಣ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಈ ಭಾಗದ ರೈತರ ಬಹುದಿನಗಳ ಬೇಡಿಕೆ ಹಿನ್ನೆಲೆಯಲ್ಲಿಈ ಭಾಗದಲ್ಲಿ ಹೊಸ ವಿದ್ಯುತ್ ಪರಿವರ್ತನೆ ಕೇಂದ್ರ ಮಂಜೂರು ಮಾಡಲಾಗಿದೆ ಎಂದರು.
ರೈತರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರೆ ಅವರಿಗೆ ಸಕ್ರಮಮಾಡಿ ಕೊಡಬೇಕು. ಈ ಭಾಗದ ರೈತರಿಗೆ ಅನುಕೂಲವಾಗಲೆಂದು ವಿದ್ಯುತ್ ಉಪ ಕೇಂದ್ರ ಸ್ಥಾಪನೆಮಾಡಲಾಗಿದೆ. ರೈತರು ಬೆಳೆದ ಬೆಳೆಗೆ ತೊಂದರೆಯಾಗಬಾರದು ಎಂದರು.
ಜಿಪಂ ಅಧ್ಯಕ್ಷೆ ಗಂಗೂಬಾಯಿ (ಬಾಯಕ್ಕ) ಮೇಟಿ ಮಾತನಾಡಿ,ಬೇಸಿಗೆಯಲ್ಲಿ ಕುಡಿಯುವುದಕ್ಕಾಗಿಮತ್ತು ರೈತರ ಹೊಲಗಳಿಗೆ ನೀರಿನಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ತಾಪಂ ಸದಸ್ಯ ಮಹಾಂತೇಶ ಕಡಿವಾಲ, ಹೆಸ್ಕಾಂ ಕಾರ್ಯಪಾಲಕ ಅಭಿಯಂತರ ಕಾಶಿನಾಥ ಹಿರೇಮಠ ಮಾತನಾಡಿದರು.
ಇಳಕಲ್ಲ ತಾಪಂ ಅಧ್ಯಕ್ಷೆ ಶಾರದಾ ಗೋಡಿ, ಮಹಾಂತೇಶ ಪಾಟೀಲ,ಕಂದಗಲ್ಲ ಗ್ರಾಪಂ. ಅಧ್ಯಕ್ಷೆ ಶರಣಮ್ಮ ಭಜಂತ್ರಿ, ಉಪಾದ್ಯಕ್ಷ ಅಮಾತೆಪ್ಪ ಯರದಾಳ, ಗುತ್ತಿಗೆದಾರಾದಪ್ರಕಾಶ ಗೋಲಪ್ಪನವರ, ಕಂದಗಲ್ಲ,ಹಿರೇಓತಗೇರಿ, ನಂವಾಡಗಿ,ಹಿರೇಶಿಂಗನಗುತ್ತಿ, ಗ್ರಾಮಗಳ ರೈತರು, ಹೆಸ್ಕಾಂ ಅಧಿಕಾರಿಗಳು ಪಾಲ್ಗೊಂಡಿದ್ದರು.
ಶ್ರೀಶೈಲ ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ :
ಬಾಗಲಕೋಟೆ: ಶ್ರೀಶೈಲ ಮಲ್ಲಿಕಾರ್ಜುನ ರಥೋತ್ಸವವು ಏ.13ರಂದು ಜರುಗಲಿದ್ದು. ಸಾರ್ವಜನಿಕರ ಭಕ್ತಾದಿಗಳ ಅನುಕೂಲಕ್ಕಾಗಿ ವಾಯುವ್ಯಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗದಿಂದ ಏ. 14ರವರೆಗೆಜಮಖಂಡಿ, ಮುಧೋಳ, ಬೀಳಗಿ, ಬಾಗಲಕೋಟೆ, ಬಾದಾಮಿ, ಹುನಗುಂದಮತ್ತು ಇಳಕಲ್ಲ ಘಟಕಗಳಿಂದ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.
45 ರಿಂದ 55 ಜನ ಪ್ರಯಾಣಿಕರು ಲಭ್ಯವಿದ್ದಲ್ಲಿ ದಾರಿ ಮಧ್ಯ ಬರುವ ಯಾತ್ರಾ ಸ್ಥಳಗಳ ದರ್ಶನ ಮತ್ತು ಉಚಿತ ಅನ್ನ ಪ್ರಸಾದ ಸ್ಥಳಗಳಲ್ಲಿ ಬಸ್‌ನಿಲ್ಲಿಸಲಾಗುವುದು. ಕೇಂದ್ರ ಸ್ಥಾನ ಅಷ್ಟೆ ಅಲ್ಲದೆ ಪ್ರಯಾಣಿಕರು ಇಚ್ಚಿಸಿದ್ದಲ್ಲಿ ಅವರ ಗ್ರಾಮಗಳಿಂದ ನೇರವಾಗಿ ಶ್ರೀಶೈಲಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರಯಾಣಿಕರು
ಮಂತ್ರಾಲಯ ಹಾಗೂ ಮಹಾನಂದಿ ದರ್ಶನ ಮಾಡಲು ಇಚ್ಚಿಸಿದ್ದಲ್ಲಿ ಪ್ರಯಾಣ ದರವನ್ನು ಪಾವತಿಸಿದಲ್ಲಿ ಕಾರ್ಯಾಚರಣೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಾರಿಗೆ ಅಧಿಕಾರಿ ಬಾಗಲಕೋಟೆ 7760991752 , ಘಟಕ ವ್ಯವಸ್ಥಾಪಕರು ಬಾಗಲಕೋಟೆ 7760991775, ಜಮಖಂಡಿ 7760991778, ಬಾದಾಮಿ 7760991776, ಇಳಕಲ್ 7760991777, ಮುಧೋಳ 7760991779, ಬೀಳಗಿ 7760991780, ಹುನಗುಂದ ಮೊ: 9606068611 ಸಂಪರ್ಕಿಸಬಹುದು. ಬಸ್‌ನಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ವಾ.ಕ.ರ.ಸಾ. ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.