ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೂ ಬಿಡದ ಪ್ರವಾಹ
Team Udayavani, Aug 16, 2019, 10:22 AM IST
ಬಾಗಲಕೋಟೆ: ಜಮಖಂಡಿ ತಾಲೂಕಿನ ಕುಂಬಾರಹಳ್ಳ ಸರ್ಕಾರಿ ಶಾಲೆ ಜಲಾವೃತಗೊಂಡಿದೆ.
ಬಾಗಲಕೋಟೆ: ಪ್ರವಾಹ ಸಹಿತ ಯಾವುದೇ ತುರ್ತು ಸಂದರ್ಭದಲ್ಲಿ ನಗರ-ಪಟ್ಟಣ ಹಾಗೂ ಗ್ರಾಮೀಣ ಜನರಿಗೆ ತಕ್ಷಣಕ್ಕೆ ಆಶ್ರಯ ಕಲ್ಪಿಸಲು ನೆರವಾಗುವುದೇ ಸರ್ಕಾರಿ ಶಾಲೆಗಳು. ಆದರೆ, ಪ್ರವಾಹದಿಂದ ಜಿಲ್ಲೆಯ 138 ಶಾಲೆಗಳೇ ಈಗ ಆಸರೆಗಾಗಿ ಕಾಯುತ್ತಿವೆ.
ಹೌದು, ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಪ್ರವಾಹದಿಂದ ಜಿಲ್ಲೆಯ 138 ಶಾಲೆಗಳು ಸಂಪೂರ್ಣ ನೀರಿನಲ್ಲಿ ನಿಂತಿವೆ. ಅದರಲ್ಲೂ ಶಾಲಾ ಮತ್ತು ಬಿಸಿಯೂಟ ತಯಾರಿಸುವ ಅಡುಗೆ ಕೊಡಿಗಳು ಸೇರಿ ಒಟ್ಟು 1,925 ಶಾಲಾ ಕೊಠಡಿಗಳು ಹಾನಿಯಾಗಿವೆ. ಅವುಗಳ ದುರಸ್ತಿ, ಪುನರ್ ನಿರ್ಮಾಣದ ಬಳಿಕ ಶಾಲೆಗಳು ಪುನಃ ಮೊದಲಿದ್ದ ಸ್ಥಿತಿಗೆ ಬರಲು ಬಹು ದಿನಗಳೇ ಬೇಕಾಗುತ್ತದೆ.
15 ದಿನದಿಂದ ನೀರಿನಲ್ಲಿ: ಮಲಪ್ರಭಾ ಮತ್ತು ಘಟಪ್ರಭಾ ನದಿ ಪ್ರವಾಹದಿಂದ ಮುಧೋಳ, ಬಾದಾಮಿ, ಹುನಗುಂದ, ಬಾಗಲಕೋಟೆ (ಕಲಾದಗಿ ಹೋಬಳಿ) ಬೀಳಗಿ ತಾಲೂಕಿನ ಕೆಲವೆಡೆ ಶಾಲೆಗಳು ನಾಲ್ಕು ದಿನಗಳ ಕಾಲ ಮಾತ್ರ ನೀರಿನಲ್ಲಿ ನಿಂತಿದ್ದರೆ, ಕೃಷ್ಣಾ ನದಿ ಪ್ರವಾಹದಿಂದ ಬಾಗಲಕೋಟೆ ತಾಲೂಕಿನ ದೇವನಾಳ ಸಹಿತ ಜಮಖಂಡಿ, ಬೀಳಗಿ ತಾಲೂಕಿನ ಹಲವು ಶಾಲೆಗಳು ಕಳೆದ ಆ.1ರಿಂದ ನೀರಿನಲ್ಲಿವೆ. ಇಂದಿಗೂ ಜಲಾವೃತಗೊಂಡ ಶಾಲೆಗಳ ಸುತ್ತಲಿನ ನೀರು ತಗ್ಗಿಲ್ಲ. ಹೀಗಾಗಿ ಶತಮಾನ ಕಂಡ ಶಾಲೆಗಳ ಸ್ಥಿತಿಯಂತೂ ಅಯೋಮಯವಾಗಿದೆ. ಈ ಶಾಲೆಗಳು ಯಾವಾಗ ಬೀಳುತ್ತವೆ ಎಂಬ ಆತಂಕ ಎದುರಾಗಿದೆ.
53 ಶಾಲೆಗಳಲ್ಲಿ ಇಲ್ಲ ಸಂಭ್ರಮ: ದೇಶದೆಲ್ಲೆಡೆ ಆ.15ರಂದು 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮ. ಆದರೆ, ನೀರಿನಲ್ಲಿ ನಿಂತ ಜಿಲ್ಲೆಯ 53 ಶಾಲೆಗಳಲ್ಲಿ ಸ್ವಾತಂತ್ರ್ಯ ಸಂಭ್ರಮ ಆಚರಣೆಗೂ ಅವಕಾಶ ಸಿಗಲಿಲ್ಲ. ಶಾಲೆಗಳು ನೀರಿನಲ್ಲಿ ನಿಂತಿದ್ದು, ಅವುಗಳತ್ತ ತೆರಳಲೂ ಆಗದೇ, ಪರಿಹಾರ ಕೇಂದ್ರ, ಕೆಲವೆಡೆ ಗ್ರಾಪಂ ಕಚೇರಿಗಳ ಎದುರೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
•ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.