Mudhol: ಶಾಲಾ ಆವಣರಕ್ಕೆ ನುಗ್ಗಿದ ನೀರು, ಸ್ಮಶಾನ ಸಂಪೂರ್ಣ ಜಲಾವೃತ
Team Udayavani, Jul 29, 2024, 10:31 AM IST
ಮುಧೋಳ : ಘಟಪ್ರಭಾ ಪ್ರವಾಹ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮುಧೋಳದ ರಾಜ್ ಘಾಟ್ ಮುಕ್ತಿಧಾಮ ಸೋಮವಾರ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಮುಧೋಳ ನಗರ ಸೇರಿ ತಾಲೂಕಿನ ಮಿರ್ಜಿ, ಮಳಲಿ, ಮಲ್ಲಾಪುರ ಭಾಗದಲ್ಲಿ ಹೆಚ್ಚಿನ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಯಾದವಾಡ-ಮುಧೋಳ ಸೇತುವೆ ಮೇಲೆ ನೀರಿನಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು ನದಿನೀರು ವೀಕ್ಷಣೆಗೆ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಪೊಲೀಸ್ ಇಲಾಖೆಯಿಂದ ನದಿದಡದಲ್ಲಿ ಬ್ಯಾರಿಕೇಡ್ ಹಾಕಿ ಜನರನ್ನು ನಿಯಂತ್ರಿಸಲಾಗುತ್ತಿದೆ.
ಮುಧೋಳ ಲೋಕಾಪುರ ರಾಜ್ಯ ಹೆದ್ದಾರಿಯಲ್ಲಿರುವ ಚಿಂಚಖಂಡಿ ಸೇತುವೆ ಮುಳುಗಡೆಗೆ ಕೇವಲ ಎರಡು ಅಡಿ ಬಾಕಿಯಿದ್ದು, ನೀರಿನ ಹರಿವು ಇದೇ ರೀತಿ ಮುಂದುವರಿದರೆ ಸಂಜೆವೇಳೆಗೆ ಮುಳುಗುವ ಸಂಭವವಿದೆ. ಸೇತುವೆ ಮುಳುಗಡೆಯಾದರೆ ತೀವ್ರ ತೊಂದರೆಯುಂಟಾಗಲಿದ್ದು ಪ್ರಯಾಣಿಕರು ಬದಲಿ ಮಾರ್ಗ ಅನುಸರಿಸುವ ಅನಿವಾರ್ಯತೆ ಉಂಟಾಗಲಿದೆ.
ಶಾಲೆಗೆ ನುಗ್ಗಿದನೀರು: ಮುಧೋಳ ನಗರದ ಕುಂಬಾರ ಓಣಿಯಲ್ಲಿರುವ ಉರ್ದು ಶಾಲೆಗೆ ಸೋಮವಾರ ಬೆಳಗ್ಗೆ ನೀರು ನುಗ್ಗಿದ್ದು ಶಾಲಾ ಮಕ್ಕಳು ತರಗತಿಗೆ ತೆರಳಲು ತೀವ್ರ ತೊಂದರೆಯುಂಟಾಗಲಿದೆ.
ಕಾಳಜಿ ಕೇಂದ್ರ ಸ್ಥಳಾಂತರ: ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಪ್ರವಾಹ ಸಂತ್ರಸ್ಥರಿಗಾಗಿ ನಿರ್ಮಿಸಿದ್ದ ಕಾಳಜಿ ಕೇಂದ್ರಕ್ಕೆ ನೀರು ನುಗ್ಗುವ ಭೀತಿ ಉಂಟಾಗಿದ್ದು ಕಾಳಜಿ ಕೇಂದ್ರವನ್ನು ಸ್ಥಳಾಂತರಿಸಿ ಅಲ್ಲಿನ ಸಂತ್ರಸ್ಥರಿಗೆ ಹೊಸ ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.