ನೆರೆ; ರೈತನಿಗೆ ಮತ್ತೂಂದು ಬರೆ
•ಪರಿಹಾರ ಕೇಂದ್ರದಲ್ಲಿ ಬದುಕು ಕಟ್ಟಿಕೊಳ್ಳುವ ಚಿಂತೆ •ಬೆಳೆದ ಫಸಲು ಕೈಗೊಡುವ ಆತಂಕ •ಜಾನುವಾರು ರಕ್ಷಣೆಗೆ ಹೋರಾಟ
Team Udayavani, Aug 13, 2019, 11:39 AM IST
ಬಾದಾಮಿ: ಪ್ರವಾಹದಿಂದ ಹಾಳಾದ ಬೆಳೆಯಲ್ಲಿ ಕುಳಿತ ರೈತ.
ಬಾದಾಮಿ: ಐತಿಹಾಸಿಕ ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲು ವರುಣನ ಆರ್ಭಟಕ್ಕೆ ನಲುಗಿದೆ. ಪಟ್ಟದಕಲ್ಲಿನ ಎರಡು ಕಡೆಯ ಸೇತುವೆ ಮಲಪ್ರಭಾ ನದಿಯ ಹಿನ್ನೀರಿನಿಂದ ಮುಳುಗಡೆಯಾಗಿ ಗ್ರಾಮಕ್ಕೆ ಗ್ರಾಮವೇ ನಡುಗಡ್ಡೆಯಾಗಿದೆ.
ಇಲ್ಲಿನ ಸ್ಮಾರಕಗಳು, ದೇವಾಲಯಗಳಿಗೆ ನೀರು ನುಗ್ಗಿದ್ದು ಅಲ್ಲಿನ ನಿರಾಶ್ರಿತರಿಗೆ ಸೂರಿಲ್ಲದೆ ವಿವಿಧ ಸ್ಥಳಗಳಲ್ಲಿ ಬಿಡಾರ ಹೂಡಿ ಕಣ್ಣೀರಿಡುತ್ತಾ ಆಸರೆಗೆ ಹಂಬಲಿಸುತ್ತಿದ್ದಾರೆ. ಜನರು ಸಂಕಷ್ಟಕ್ಕೆ ಸಿಲುಕಿ, ಪ್ರಕೃತಿ ತಾಯಿ ಇನ್ನಾದರೂ ಕೃಪೆ ತೋರು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಬೇಡಿಕೊಳ್ಳುತ್ತಿದ್ದಾರೆ.
ದಾನಿಗಳಿಂದ ಜಾನುವಾರುಗಳಿಗೆ ಮೇವು: ವಿವಿಧ ಗ್ರಾಮದ ರೈತರು ತಮ್ಮ ಸ್ವಂತ ಬೆಳೆಯನ್ನು ಕಟಾವು ಮಾಡಿ ಟ್ರಾಕ್ಟರ್ ಮೂಲಕ ನಿರಾಶ್ರಿತರ ಬಿಡಾರದಲ್ಲಿರುವ ಜಾನುವಾರುಗಳಿಗೆ ಮೇವನ್ನು ತಂದು ನೀಡುತ್ತಿದ್ದಾರೆ. ಇದರಿಂದ ರೈತರ ದನಗಳಿಗೆ ಆಹಾರ ದೊರಕುತ್ತಿದೆ. ಇದರಿಂದ ಜಾನುವಾರುಗಳಿಗೆ ಆಸರೆಯಾಗಿದೆ. ಸರಕಾರದಿಂದಲೇ ಹೆಚ್ಚಿನ ಮೇವು ವಿತರಣೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಜಲಪ್ರವಾಹದಿಂದ ನೆಲಕಚ್ಚಿದ ಫಸಲು: ನವಿಲುತೀರ್ಥದಿಂದ ಮಲಪ್ರಭಾ ನದಿಗೆ ನೀರು ಬಿಟ್ಟಿರುವ ಕಾರಣ ನದಿಯ ದಂಡೆಯ ಮೇಲಿರುವ ಗ್ರಾಮಗಳು ನೀರಿನಲ್ಲಿ ಮುಳುಗಿದೆ. ಗ್ರಾಮಸ್ಥರು ವಿಧಿಯಿಲ್ಲದೆ ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆ. ಬೆಳೆದ ಫಸಲು ಕೈಗೊಡುವ ಮುನ್ನವೇ ಪ್ರವಾಹದಿಂದ ನೆಲಕಚ್ಚಿ ರೈತ ತಲೆ ಮೇಲೆ ಕೈಹೊತ್ತು ಕೂಡುವಂತಾಗಿದೆ. ಒಂದು ಕಡೆ ಆಶ್ರಯವಿಲ್ಲ, ಇನ್ನೊಂದು ಕಡೆ ಬೆಳೆದ ಬೆಳೆಯಿಲ್ಲ. ಚಿಂತಾಕ್ರಾಂತರಾಗಿರುವ ರೈತರು ಅಕ್ಷರಶ ಬೀದಿಗೆ ಬಿದ್ದಿದ್ದಾರೆ. ನೀರಿನಿಂದ ಹಾಳಾದ ಫಸಲಿಗೆ ಸರಕಾರದಿಂದ ನೆರವು ನೀಡಬೇಕು ಎಂದು ರೈತರು ಮನವಿ ಮಾಡಿದರು.
ನಂದಿಕೇಶ್ವರ ಪ್ಲಾಟ್‌ನಲ್ಲಿಯೆ ತಾತ್ಕಾಲಿಕ ಆಸ್ಪತ್ರೆ ಟೆಂಟ್: ನಿರಾಶ್ರಿತರು ಗ್ರಾಮಗಳನ್ನು ಬಿಟ್ಟು ಸರ್ಕಾರ ನೀಡಿರುವ ಸುಮಾರು 300 ಆಶ್ರಯ ಮನೆಗಳಲ್ಲಿ ಸ್ಥಳಾಂತಗೊಂಡಿದ್ದಾರೆ. ಇವರ ಯೋಗ ಕ್ಷೇಮ, ಆರೋಗ್ಯದ ಹಿತದೃಷ್ಟಿಯಿಂದ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳು ನಂದಿಕೇಶ್ವರ ಪ್ಲಾಟ್‌ನಲ್ಲಿಯೆ ತಾತ್ಕಾಲಿಕ ಆಸ್ಪತ್ರೆ ಟೆಂಟ್ ವ್ಯವಸ್ಥೆ ಮಾಡಿಸಿದ್ದು ದಿನಂಪ್ರತಿ 150 ರಿಂದ 170 ವರೆಗೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.